May 17, 2024

Bhavana Tv

Its Your Channel

ವಿದ್ಯುನ್ಮಾನ ಮತಯಂತ್ರದ ಬಳಕೆ ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಅಧಿಕಾರಿಗಳಿಗೆ ಸೂಚನೆ

ಹೊನ್ನಾವರ; ವಿದ್ಯುನ್ಮಾನ ಮತಯಂತ್ರದ ಬಳಕೆ ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತಾಲೂಕ ಪಂಚಾಯತಿ ಸಭಾಭವನದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ತಹಶೀಲ್ದಾರ ಕಾರ್ಯದಲ್ಲಿ ಪ್ರಾಯೋಗಿಕ ಬಳಕೆ ಹಾಗೂ ಮಾಹಿತಿ ನಡೆಯುತ್ತಿದೆ. 18 ವರ್ಷ ಮೆಲ್ಪಟ್ಟ ಪ್ರತಿಯೊರ್ವರಿಗು ಮತದಾನದ ಹಕ್ಕು ಇದ್ದು, ಇದುವರೆಗೂ ಹೆಸರು ನೊಂದಾಯಿಸದೇ ಇರುವವರನ್ನು ಗುರುತಿಸಿ ಸೇರ್ಪಡೆ ಮಾಡಬೇಕಾದ ಬಹುಮುಖ್ಯ ಜವಬ್ದಾರಿ ಬಿ.ಎಲ್.ಓ ಮೇಲಿದೆ. ಗುರುತಿನ ಚೀಟಿ ತಪ್ಪಿದ್ದಲ್ಲಿ ಸರಿಪಡಿಸಲು ಕಾಲಾವಕಾಶವಿದೆ. ಮತದಾನ ನಡೆಯುವಾಗ ಪ್ರತಿಯೊರ್ವರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶಿಸಿದರು.
ಈ ವೇಳೆ ತಾ.ಪಂ.ಆಡಳಿತಾಧಿಕಾರಿ ವಿನೋಧ ಅನ್ವೇಕರ್, ಇ.ಓ ಸುರೇಶ ನಾಯ್ಕ, ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: