May 18, 2024

Bhavana Tv

Its Your Channel

ಗ್ರಾಮೀಣ ಭಾಗದ ಅಭಿವೃದ್ಧಿ ಆಗದೇ ದೇಶದ ಏಳ್ಗೆ ಆಗದು- ಕರ್ನಲ್ ಪಿ.ಎಮ್. ನಾಯ್ಕ.

  ಹೊನ್ನಾವರ:  ಶಿಕ್ಷಣ ಇದ್ದರೆ ಯಾವುದೇ ಸಾಧನೆ ಮಾಡಬಹುದು. ಉತ್ತರ ಕನ್ನಡವು ಮುಂಬೈ ಪ್ರಾಂತಕ್ಕೆ ಸೇರಿದ್ದರಿಂದ ಶಿಕ್ಷಣದಲ್ಲಿ ಹಿಂದುಳಿಯುವAತಾಯಿತು. ಗ್ರಾಮೀಣ ಭಾಗದಲ್ಲಿ ದಿನಕರರಂಥವರು ಹೆಚ್ಚಿದ್ದು ಶಿಕ್ಷಣದ ಬೆಳಕಿನಿಂದ  ಇಂದು ಗ್ರಾಮೀಣ ಭಾಗದ ಅಭಿವೃದ್ಧಿ ಸಾಧ್ಯವಾಗಿದೆ.  ಗ್ರಾಮೀಣ ಭಾಗದ ಅಭಿವೃದ್ಧಿ ಆಗದೇ ದೇಶದ ಏಳ್ಗೆ ಸಾಧ್ಯವಾಗದು. " ಎಂದು 

ಅಳ್ಳಂಕಿ ಕಾಲೇಜಿನ ಬೆಳ್ಳಿ ಹಬ್ಬದ ಮುಖ್ಯ ಅತಿಥಿಯಾದ ಲೆಫ್ಟಿನೆಂಟ್ ಕರ್ನಲ್ ಪಿ.ಎಮ್. ನಾಯ್ಕ ಅವರು ಮಾತನಾಡಿದರು.

    ಹಿಂದಿನ 25 ವರ್ಷಗಳ ಅವಧಿಯಲ್ಲಿ  ಕಾಲೇಜಿನ ಪ್ರಗತಿಗೆ ಶ್ರಮಿಸಿದ ಎಲ್ಲ ಶಾಸಕರು,ಹಾಗೂ ಪಂಚಾಯತದ ಎಲ್ಲ ಅಧ್ಯಕ್ಷರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
 ಮಾಜಿ ಶಾಸಕ ಮಂಕಾಳ ವೈದ್ಯರವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಅಳ್ಳಂಕಿ ಕಾಲೇಜಿನ ಸಾಧನೆಯನ್ನೂ ಊರವರ ಸಹಕಾರವನ್ನೂ ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಮೋದ ನಾಯ್ಕ ಅವರು " ವಿಶ್ವ ಮಟ್ಟದಲ್ಲಿ  ಪ್ರಬಲವಾಗುತ್ತಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸದೃಢ ವ್ಯಕ್ತಿತ್ವ ಬೆಳೆಸಿಕೊಂಡು , ದೇಶಕ್ಕಾಗಿ ದುಡಿವ ಸಂಕಲ್ಪ ಮಾಡಬೇಕು " ಎಂದರು.

  ಇನ್ನೋರ್ವ ಅತಿಥಿ ಪಿ.ಟಿ. ನಾಯ್ಕ ಅವರು " ಪುಸ್ತಕದ ಕೊನೆಯ ಪುಟವನ್ನಷ್ಟೇ ಓದಿದರೆ ವಿಷಯ ಅರ್ಥವಾಗದು, ಅದೇ ರೀತಿ ಕಾಲೇಜಿನ ಬಗ್ಗೆ ಹೆಮ್ಮೆ ಪಡಬೇಕಾದರೆ ಪ್ರೌಢಶಾಲಾ ಹಂತದ ಪುಟವನ್ನೂ ತೆರೆದು ನೋಡಬೇಕು " ಎಂದು ನುಡಿದರು. 

  ಶಿಕ್ಷಣ ಇಲಾಖೆಯ ಪರವಾಗಿ ನೆಲ್ಲಿಕೇರಿ ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಅವರು , ಜಿಲ್ಲಾ ಮಟ್ಟದಲ್ಲೇ ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಈ ಕಾಲೇಜಿನ ಪ್ರಯೋಜನವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.

 ಹಿಂದಿನ ಪ್ರಾಚಾರ್ಯ ಟಿ.ಬಿ. ನಾಯಕ, ಪಂಚಾಯತದ ಮಾಜಿ ಅಧ್ಯಕ್ಷ ಟಿ.ಟಿ. ನಾಯ್ಕ ರು ಹಿಂದಿನ ದಿನಗಳನ್ನು ಸ್ಮರಿಸಿದರು. 

   ಸಮಿತಿಯ ಮಾರ್ಗದರ್ಶಕರಾದ ಚಂದ್ರಕಾAತ ಕೊಚರೇಕರ ಅವರು " ಅಳ್ಳಂಕಿಯ ಸುತ್ತ ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಅಳ್ಳಂಕಿ ಕಾಲೇಜಿನ ಪಾತ್ರ ಹಿರಿದಾದುದು. ಇಲ್ಲಿನ ಸಿಬ್ಬಂದಿಗಳ ಸೇವೆ ನಿಷ್ಕಳಂಕವಾಗಿದೆ." ಎಂದು ಹೇಳಿದರು. 

 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮದಾಸ ನಾಯ್ಕ ರವರು ಕಾಲೇಜಿನ ಭವಿಷ್ಯದ ಪ್ರಗತಿಯ ಕನಸನ್ನು ತೆರೆದಿಟ್ಟು,ಎಲ್ಲರ ಸಹಕಾರವನ್ನು ಕೋರಿದರು.  ಪಂಚಾಯತದ ಎಲ್ಲ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಅನಂತರ ಈ ವರೆಗೆ ಸೇವೆ ಸಲ್ಲಿಸಿದ  ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪೂರ್ವ ವಿದ್ಯಾರ್ಥಿಗಳಲ್ಲಿ ವಿವಾಹಿತರಾದ ಜೋಡಿಗೆ ಉಡುಗೊರೆ ನೀಡಿ ಗೌರವಿಸಿದ್ದು ವಿನೂತನವಾಗಿತ್ತು.
     ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಯೋಗ, ಭರತನಾಟ್ಯ, ಯಕ್ಷಗಾನ, ಪ್ರಹಸನ ಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಪುಸ್ತಕ ಹಾಗೂ ಚಿತ್ರ ಪ್ರದರ್ಶನ ಗಳು ಗಮನ ಸೆಳೆದವು.

ಇದೇ ವೇದಿಕೆಯಲ್ಲಿ ಮೂಡ್ಕಣಿ ನಾರಾಯಣ ಹೆಗಡೆಯವರ ಸ್ಮರಣಾರ್ಥ ನೀಡುವ ಪುರಸ್ಕಾರವನ್ನು ಭರತನಾಟ್ಯ ಕಲಾವಿದೆ ಪೂಜಾ ಹೆಗಡೆ ಹಾಗೂ ಚಿತ್ರ ಕಲಾವಿದ ಪ್ರದೀಪ ನಾಯ್ಕ ಇವರಿಗೆ ನೀಡಲಾಯಿತು. ‘ ಬೆಳ್ಳಿ ಬೆಳಕು’ ಸ್ಮರಣ ಸಂಚಿಕೆ, ಉಪನ್ಯಾಸಕ ಕಿಶೋರ್ ನಾಯ್ಕ ಅವರ ‘ ಮೊಗ್ಗು ‘ ಕವನ ಸಂಕಲನ ಹಾಗೂ ವಿಮಲಾ ನಾಯ್ಕ ಅವರ ‘ ಶಾಯಿ ಸಾಲುಗಳು’ ಕಥಾ ಸಂಕಲನವನ್ನು ಶ್ರೀ ನಿತ್ಯಾನಂದ ಹೆಗಡೆಯವರು ಬಿಡುಗಡೆಗೊಳಿಸಿದರು.

  ಡಾ. ಜಿ.ಎಸ್. ಹೆಗಡೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶ್ರೀ ಕಿಶೋರ್ ನಾಯ್ಕ ವಂದಿಸಿದರು. ಮಹೇಶ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ಪದ್ಮಾವತಿ ನಾಯ್ಕ, ಸರಿತಾ ನಾಯ್ಕ  ಕಾರ್ಯಕ್ರಮ ನಿರೂಪಿಸಿದರು.
error: