May 18, 2024

Bhavana Tv

Its Your Channel

ಎಸ್.ಡಿ.ಎಂ. ಕಾಲೇಜಿಗೆ ನ್ಯಾಕ್ ನಿಂದ ‘ಎ+’ ಮಾನ್ಯತೆ

ಹೊನ್ನಾವರ:ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ.ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್)ಯಿoದ ‘ಎ+’ ಮಾನ್ಯತೆ ಪಡೆದಿದೆ.ಪ್ರಸ್ತುತ ಉನ್ನತ ಶ್ರೇಣಿಯೊಂದಿಗೆ ಕಾಲೇಜು ‘ಎ+’ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
‘ಕಾಲೇಜಿನ ಭೇಟಿ ನೀಡಿದ್ದ ಪೀರ್ ಟೀಮ್ ವರದಿ ಹಾಗೂ ಉಳಿದ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪರಿಶೀಲಿಸಿ 3.47 ಸಿಜಿಪಿಎ ಅಂಕಗಳೊoದಿಗೆ ‘ಎ+’ ಶ್ರೇಣಿಯ ಮಾನ್ಯತೆ ನೀಡಲಾಗಿದೆ.ಪ್ರಸ್ತುತ ಮಾನ್ಯತೆ 14-02-2023ರಿಂದ 5 ವರ್ಷಗಳ ಅವಧಿಯದ್ದಾಗಿರುತ್ತದೆ’ ಎಂದು ನ್ಯಾಕ್ 14-2-2023ರಂದು ಕಾಲೇಜಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದೆ.
ಕಾಲೇಜು ಮೊದಲು ಮೂರು ಬಾರಿ ನ್ಯಾಕ್ ನಿಂದ ಮೌಲ್ಯಮಾಪನಕ್ಕೆ ಒಳಗಾಗಿದ್ದು ಪ್ರತಿ ಬಾರಿಯೂ ‘ಎ’ ಶ್ರೇಣಿಯ ಮಾನ್ಯತೆ ಪಡೆದಿತ್ತು.ಪ್ರಸ್ತುತ ಎ+ ಶ್ರೇಣಿಯ ಮಾನ್ಯತೆಯೊಂದಿಗೆ ಕಾಲೇಜು ತನ್ನ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೇರಿಸಿಕೊಂಡoತಾಗಿದೆ.
ಕಾಲೇಜು ಎ+ ಮಾನ್ಯತೆ ಪಡೆಯಲು ಕಾರಣರಾದ ಆಡಳಿತ ಮಂಡಳಿ,ಸಿಬ್ಬAದಿ,ವಿದ್ಯಾರ್ಥಿಗಳು,ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ’ ಎಂದು ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: