May 18, 2024

Bhavana Tv

Its Your Channel

ಹೊನ್ನಾವರ ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಪತ್ರಕರ್ತ ಶಶಿಧರ ಭಟ್ ಉದ್ಘಾಟನೆ

ಹೊನ್ನಾವರ ತಾಲೂಕಿನ ಕೆಳಗಿನೂರಿನ ಒಕ್ಕಲಿಗರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಪತ್ರಕರ್ತ ಶಶಿಧರ ಭಟ್ ಉದ್ಘಾಟಿಸಿದರು

ಅವರು ಮಾತನಾಡಿ ಇಂದು ಇತಿಹಾಸವು ಪುರಾಣವಾಗುತ್ತಿದೆ. ಪುರಾಣವು ಇತಿಹಾಸವಾಗುತ್ತಿದೆ. ರಾಜಕಾರಣಿಗಳು ಜನರನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಭಯವನ್ನು ಹುಟ್ಟಿಸುತ್ತಾರೆ ಮತ್ತು ಭಯದಿಂದ ರಕ್ಷಿಸುವವನು ನಾನು ಎಂದು ಬಿಂಬಿಸುತ್ತಾರೆ. ಪ್ರಭುತ್ವದಿಂದ ಮಾಧ್ಯಮವನ್ನು ಖರೀದಿಸಲ್ಪಡುತ್ತಿದೆ. ಮಾತನಾಡುವವರ ಮೇಲೆ ದಾಳಿಗಳಾಗುತ್ತವೆ. ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ದಾಳಿ ಮಾಡಲಾಗುತ್ತದೆ. ನಂತರ ಸರ್ಕಾರಿ ವ್ಯವಸ್ಥೆಗಳಿಂದ ದಾಳಿ ನಡೆಸಲಾಗುತ್ತದೆ. ಬಹುತೇಕ ರಾಜಕಾರಣಿಗಳು ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಮನ ಪೂಜೆ ಮಾಡುವವರು ರಾಮನ ತತ್ವವನ್ನು ಪಾಲಿಸುತ್ತಿಲ್ಲ. ಮಹನೀಯರ ತತ್ವ ಆದರ್ಶಗಳನ್ನು ಬಿಟ್ಟು ಅವರನ್ನು ಪುತ್ಥಳಿಯನ್ನಾಗಿ ಮಾಡುತ್ತಿದ್ದೇವೆ. ಸಮಾಜ ಒಂದಾಗಿರುವುದು ಬೇಕೋ? ಬೆಂಕಿ ಹಚ್ಚುವುದು ಬೇಕೋ ಎಂಬುದನ್ನು ಆಲೋಚಿಸಿ ನೋಡಬೇಕಿದೆ. ಮೌನ ಮುರಿದು ಮಾತಿನ ಮೂಲಕ ಬದಾವಣೆ ತರಬೇಕಿದೆ ಎಂದರು.

ಶಾಸಕ ಸುನೀಲ್ ನಾಯ್ಕ ಮಾತನಾಡಿ ‘ಹೊನ್ನಾವರ ತಾಲೂಕು ಪ್ರಸಿದ್ದ ಸಾಹಿತಿಗಳ ಮತ್ತು ಯಕ್ಷಗಾನ ಕಲಾವಿದರನ್ನು ಹೊಂದಿದೆ. ಸಾಹಿತ್ಯ ಸಮ್ಮೇಳನವನ್ನು ಉತ್ತಮವಾಗಿ ಸಂಘಟಿಸಲಾಗಿದೆ. ಯುವ ತಲೆಮಾರಿನವರು ಸಾಹಿತ್ಯಾಸಕ್ತಿ ಹೊಂದಬೇಕು’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡು, ನುಡಿಯ ಸೇವೆಯನ್ನು ಮಾಡುತ್ತಿದೆ ಎಂದರು.

ಗುಣವAತೆಯ ಮಹಾದೇವಿ ಗೌಡ ಅವರ ಮೌನ ಅರಳುವ ಮುನ್ನ' ಮತ್ತು ಕಲ್ಪನಾ ಅರುಣ ಅವರವಚನ ನುಡಿಕಲ್ಪ’ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.

ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ದ್ವಾರಗಳ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಶ್ರೀಪಾದ ಹೆಗಡೆ ಕಣ್ಣಿ ಧ್ವಜ ಹಸ್ತಾಂತರಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಗ್ರಾ.ಪಂ.ಸದಸ್ಯ ಶಿವಾನಂದ ಗೌಡ ಚಾಲನೆ ನೀಡಿದರು.
ಹಿರಿಯ ಸಾಹಿತಿಗಳಾದ ಡಾ. ಎನ್.ಆರ್.ನಾಯಕ, ಸುಮುಖಾನಂದ ಜಲವಳ್ಳಿ, ಎನ್.ಎಸ್.ಹೆಗಡೆ, ಪತ್ರಕರ್ತ ಜಿ.ಯು.ಭಟ್ಟ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ತಾ.ಪಂ. ಇಒ ಸುರೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ನೌಕರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಶಿಕ್ಷಕರ ಸಂಘದ ಎಂ.ಜಿ.ನಾಯ್ಕ ಸುಧೀಶ ನಾಯ್ಕ ಪಾಲ್ಗೊಂಡಿದ್ದರು.

ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಸ್ವಾಗತಿಸಿದರು. ಎಂ.ಡಿ.ಹರಿಕಾAತ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಗಜಾನನ ನಾಯ್ಕ ವಂದಿಸಿದರು. ಕಸಾಪ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಹೊನ್ನಾವರ ತಾಲೂಕಿನ ಮೂಲ, ನೆಲ, ಜಲ ಮತ್ತು ಸಂಸ್ಕೃತಿಯ ಆಚರಣೆಗಳು ಇಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬ ಮತ್ತು ಸದಸ್ಯರ ಜೀವನದ ಇತಿಹಾಸವನ್ನು ಸ್ಪಷ್ಟಪಡಿಸುತ್ತವೆ. ಹೊನ್ನಾವರ ತಾಲೂಕು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ. ಇಡಗುಂಜಿ, ಮಾವಿನಕುರ್ವಾದ ನವದುರ್ಗಾ, ಅನಿಲಗೋಡದ ಕುಮಾರರಾಮ, ಮುಟ್ಟಾ ಪದ್ಮಾವತಮ್ಮ, ಮೂಡಗಣಪತಿ, ಕರಿಕಾನ ಪರಮೇಶ್ವರಿ ಸೇರಿದಂತೆ ಹಲವಾರು ದೇವಾಲಯಗಳು ಶ್ರದ್ದಾಕೇಂದ್ರವಾಗಿವೆ. ಇಲ್ಲಿ ಪ್ರಸಿದ್ದ ಕಲಾವಿದರಿದ್ದಾರೆ. ಪತ್ರಕರ್ತರು, ಸಾಹಿತಿಗಳು, ಜನಪದ ಕಲಾವಿದರು ಸಾಧನೆ ಮಾಡಿದ್ದಾರೆ.

ನಮ್ಮ ಜೀವನವು ಬದಲಾಗುತ್ತಿದೆ. ಆಹಾರ, ಆರೋಗ್ಯ, ವಸತಿ ಮತ್ತು ಶಿಕ್ಷಣ ಈ ಮೂಲಭೂತ ಅಗತ್ಯಗಳು ಇಂದು ಖಾಸಗೀಕರಣದ ವ್ಯಾಪ್ತಿಗೆ ಸೇರಿಕೊಂಡು ಹಣ ಗಳಿಸುವ ಮತ್ತಿ ಜನ ವಿರೋಧಿ ರೀತಿ ಮತ್ತು ನೀತಿಯಲ್ಲಿ ಕಂಪನಿಗಳ ಆಡಳಿತ ವ್ಯವಸ್ಥೆಯಲ್ಲಿ ತೊಡಗಿರುವುದು ಜಗತ್ತಿನಾದ್ಯಂತ ಕಂಡುಬರುತ್ತಿದೆ. ಶಿಕ್ಷಣವು ಸಂಪೂರ್ಣ ಕಲೆ, ಸಾಹಿತ್ಯ, ಸಂಗೀತ ಚರಿತ್ರೆಗಳೊಂದಿಗೆ ಚೆಲ್ಲಾಟವಾಡುತ್ತ ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡುತ್ತಿದ್ದೇವೆ. ದೇವರನ್ನು ಪ್ರೀತಿಸದೇ ಭಯದಿಂದ ಭಕ್ತಿ ಮಾಡಲಾಗುತ್ತಿದೆ. ನಿಸ್ವಾರ್ಥ ಮನೋಭಾವ, ಏಕತೆ, ಮುಕ್ತ ಮನೋಭಾವ, ವಸ್ತು ನಿಷ್ಠತೆ, ಪ್ರಾಮಾಣಿಕತೆ, ಉತ್ತರದಾಯಿತ್ವ ಮುಂತಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಎಂದರು.

error: