May 18, 2024

Bhavana Tv

Its Your Channel

ನೀಲಕೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ ಬದಲಾಯಿಸಿದ ಹೂವಿನಹೊಳೆ ಪ್ರತಿಷ್ಠಾನ ಸದಸ್ಯರು

ಹೊನ್ನಾವರ: ಬಾಡಿದ ಬಣ್ಣ ಬದಲಾಯಿತು, ಹೊಸ ಬೆಂಚು ಬಂತು. ನಾಲ್ಕು ಕಂಪ್ಯೂಟರ್, ಕುಡಿಯುವ ನೀರಿನ ಘಟಕ ಎಲ್ಲವೂ ಬಂದವು.
ಇವೆಲ್ಲ ಸಾಧ್ಯ ಆಗಿದ್ದು, ರಾಜಧಾನಿಯಲ್ಲಿ ಒಂದಿಲ್ಲೊoದು ಉದ್ಯೋಗದಲ್ಲಿ ಇರುವ ಒಂದಷ್ಟು ಯುವಕರು, ಓದುತ್ತಿದ್ದ ವಿದ್ಯಾರ್ಥಿಗಳು ಸೇರಿ ತಾಲೂಕಿನ ನೀಲಕೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಣ ಬದಲಾಯಿಸಿದರು. ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನೂ ಒದಗಿಸಿದರು. ಪದ್ಮಶ್ರೀ ಚಿಟ್ಟಾಣಿ ಅಜ್ಜ, ಸ್ಥಳದಾನಿಗಳ ಚಿತ್ರ, ಆಕರ್ಷಕ ನುಡಿ ಮುತ್ತುಗಳು ಎಲ್ಲವೂ ಇಲ್ಲಿ ಅನವಾರಣಗೊಂಡವು. ಶಾಲೆಯ ಕೊಠಡಿ, ಶೌಚಾಲಯ ದುರಸ್ತಿ, ಡ್ರಂ ಸೆಟ್, ಮೈಕ್, ಕ್ರೀಡಾ ಸಾಮಗ್ರಿಗಳನ್ನು, ಮಕ್ಕಳಿಗೆ ಬಟ್ಟೆಗಳನ್ನೂ ಹತ್ತುವರೆ ಲಕ್ಷ ರೂ. ಮೊತ್ತದಲ್ಲಿ ನೀಡಿದರು.


ಬೆಂಗಳೂರು ರಿವರ್ ಬೆಡ್ ಸಿಎಸ್ ಆರ್ ಅನುದಾನ ಅಡಿಯಲ್ಲಿ 20ಕ್ಕೂ ಅಧಿಕ ಹೂವಿನಹೊಳೆ ಪ್ರತಿಷ್ಠಾನದ ಸದಸ್ಯರು ಶಾಲೆಯ ಇತಿಹಾಸದಲ್ಲಿ ಅಚ್ಚಳಿಯದ ಹೊಸ ಪುಟ ಸೃಷ್ಟಿಸಿದರು. ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಕರಿಕಾನ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ಸುಬ್ರಹ್ಮಣ್ಯ ಭಟ್ಟ, ಗ್ರಾ.ಪಂ. ಸದಸ್ಯ ಗಣಪತಿ ಭಾಗ್ವತ, ಸ್ಥಳದಾನಿ ಶಿವರಾಮ ಭಟ್ಟ, ಬಿಇಓ ಜಿ.ಎಸ್.ನಾಯಕ, ಶಾಲಾಭಿವೃದ್ದಿ ಅಧ್ಯಕ್ಷ ದೇವಾ ಗೌಡ ,ಹೂವಿನಹೊಳೆ ಪ್ರತಿಷ್ಠಾನದ ನಂದಿ ಜೆ., ಚಿನ್ಮಯ ಭಟ್ಟ, ಶಿವು ಪ್ರಸಾದ ಹಳೆ ವಿದ್ಯಾರ್ಥಿ ವಿನಾಯಕ ಭಾಗ್ವತ್, ಶಿಕ್ಷಕಿ ಪ್ರತಿಮಾ ಹೆಗಡೆ ಇತರರು ಇದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಮಾಲಿನಿ ಹೆಗಡೆ ಪ್ರಾರ್ಥಿಸಿದರು. ಈಶ್ವರ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಈಶ್ವರ ಭಟ್, ಸುಬ್ರಹ್ಮಣ್ಯ ಹೆಗಡೆ ನಿರ್ವಹಿಸಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಶಿರಸಿಯ ಕು. ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿಯ ಶ್ರೀಕೃಷ್ಣಂ ವಂದೇ ಯಕ್ಷನೃತ್ಯ ರೂಪಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸರಕಾರಿ ಶಾಲೆ ಚೆನ್ನಾಗಿದ್ದರೆ, ಕಡೆಯ ಬಡವನ ಬದುಕು ಬದಲಾಗುತ್ತದೆ. ಅದಕ್ಕಾಗಿ ಸರಕಾರಿ ಶಾಲೆಗೆ ನಮ್ಮ ನೆರವು ನೀಡುತ್ತಿದ್ದೇವೆ. ಈವರೆಗೆ 30 ಶಾಲೆಗಳಿಗೆ ಮೂಲ ಭೂತ ಸೌಲಭ್ಯ ನೀಡಿದ್ದೇವೆ.- ನಂದಿ ಹೂವಿನಹೊಳೆ

error: