May 18, 2024

Bhavana Tv

Its Your Channel

ಬೆಳ್ಳುಕುರ್ವೆ ಶಾಲೆಯಲ್ಲಿ ಮಕ್ಕಳ ಹಬ್ಬ

ಹೊನ್ನಾವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ಳುಕುರ್ವೆ ಇಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾವಿನಕುರ್ವೆ ಪಂಚಾಯತ ಅಧ್ಯಕ್ಷರಾದ ಜಿ. ಜಿ. ಶಂಕರರವರು ಮಾತನಾಡಿ ಬೆಳ್ಳುಕುರ್ವೆ ಶಾಲೆಯಲ್ಲಿ ಅತ್ಯಂತ ಹೊಸತನದ ವಿನೂತನ ಕಾರ್ಯಕ್ರಮ ಮಕ್ಕಳ ಹಬ್ಬ ಆಯೋಜಿಸಿರುತ್ತಿರುವುದು ತುಂಬಾ ಹೆಮ್ಮೆಯ ಸಂಗತಿ. ಮಕ್ಕಳು ದೇಶದ ಸಂಪತ್ತು ಅವರು ಆರೋಗ್ಯವಂತರಾಗಿ ನಗುನಗುತಾ ಸಂತೋಷದಿAದ ಆಡುತ್ತ ಹಾಡುತ್ತ ಕಲಿಯಬೇಕು. ಇದಕ್ಕೆ ನಮ್ಮ ಶಿಕ್ಷಕರು, ಪಾಲಕರು ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುತ್ತಿದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಬಾಲ್ಯ ಕಳೆದುಕೊಳ್ಳುತ್ತಿದ್ದರೆ ಇದು ತುಂಬಾ ಅಘಾತಕಾರಿ ಅಂಶಗಳು. ಶಿಕ್ಷಣದ ಜೊತೆ ಅವರು ಉತ್ತಮ ಸಂಸ್ಕಾರ, ದೇಶಭಕ್ತಿ, ಗುರುಹಿರಿಯರಲ್ಲಿ ವಿಧೇಯತೆ ನಮ್ಮ ನಾಡನ್ನು ಗೌರವಿಸುವ ಗುಣಗಳು ಇವೆಲ್ಲವನ್ನು ಬೆಳೆಸಬೇಕು. ಈ ಸಂದರ್ಭದಲ್ಲಿ ಮಕ್ಕಳ ಹಬ್ಬಗಳು ಪ್ರಯೋಜನಕಾರಿಯಾಗಿವೆ ಎಂದು ಹೇಳಿ ತನ್ನ ಪಂಚಾಯತ ವ್ಯಾಪ್ತಿಯಲ್ಲೆ ಬೆಳ್ಳುಕುರ್ವೆ ಶಾಲೆ ಅತ್ಯಂತ ಉತ್ತಮ ಶಾಲೆ. ಈ ಶಾಲೆಗೆ ಶೇ. 98% ರಷ್ಟು ಮಕ್ಕಳು ತಮ್ಮೂರಿನ ಶಾಲೆಗೆ ಬರುತ್ತಿದ್ದಾರೆ. ಯಾವ ಖಾಸಗಿ ಶಾಲೆಯ ಆಕರ್ಷಣೆಗೂ ಒಳಗಾಗಿಲ್ಲ. ಅದಕ್ಕೆ ಕಾರಣ ಶಾಲೆಯಲ್ಲಿ ಸಿಗುತ್ತಿರುವ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣವೇ ಕಾರಣ. ಉತ್ತಮ ಶಿಕ್ಷಕರನ್ನು ಹಾಗೂ ಉತ್ತಮ ಎಸ್.ಡಿ.ಎಂ.ಸಿ. ಪ್ರಜ್ಞಾವಂತ ಪಾಲಕರ ತಂಡವನ್ನು ಹೊಂದಿದೆ. ತಮ್ಮ ಪಂಚಾಯತ ಹಾಗೂ ಶಾಸಕರ ನೆರವಿನಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಅತ್ಯಂತ ಸುಸಜ್ಜಿತ ಶಾಲೆಯಾಗಿದೆ ಎಂದು ಹೇಳಿದರು. ಮಕ್ಕಳ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದ ಮಾವಿನಕುರ್ವೆ ಪಂಚಾಯತ ಸದಸ್ಯರಾದ ಪೀಟರ್ ಮೆಂಡೊನ್ಸಾ ಇವರು ಮಾತನಾಡಿ ನಮ್ಮ ಮಾವಿನಕುರ್ವಾ ಪಂಚಾಯತಕ್ಕೆ ನಮ್ಮ ಬೆಳ್ಳುಕುರ್ವೆ ಶಾಲೆ ಕಿರೀಟ ಪ್ರಾಯವಾಗಿದೆ. ಈ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ನಾನು ಭಾಗವಹಿಸುತ್ತೇನೆ. ಇಲ್ಲಿಯ ಮಕ್ಕಳು ಶೈಕ್ಷಣಿಕವಾಗಿ ಹಾಗೂ ವಿವಿಧ ಪಠ್ಯೆತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಅದಕ್ಕೆ ಸಾಕ್ಷಿ. ಇಂದು ನಾನು ಬಿಡುಗಡೆ ಮಾಡಿದ ಹಸ್ತಪತ್ರಿಕೆ (ಹೊಂಗಿರಣ). ಇಲ್ಲಿ ಒಳ್ಳೆಯ ಶಿಕ್ಷಕರ ತಂಡ ಇದೆ. ಮಕ್ಕಳ ಹಬ್ಬ ಒಂದು ವಿನೂತನ ಕಾರ್ಯಕ್ರಮ. ಇದರಿಂದ ಮಕ್ಕಳಿಗೆ ಉತ್ತಮ ಕಲಿಕೆಗೆ ಸ್ಪೂರ್ತಿ ಎಂದು ಹೇಳಿ. ತನ್ನ ಸಂಪೂರ್ಣ ಸಹಾಯ, ಸಹಕಾರ ಈ ಶಾಲೆಗೆ ಇದೆ ಎಂದು ಹೇಳಿದರು. ಇಂದಿನ ಮಕ್ಕಳ ಹಬ್ಬ ಊರ ಹಬ್ಬವಾಗಿದೆ. ನೂರಾರು ಸಂಖ್ಯೆಯಲ್ಲಿ ಪಾಲಕರು ಸೇರಿ ಈ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗಾತಿ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೊರ್ವ ಮುಖ್ಯ ಅತಿಥಿಗಳಾದ ಸುಧೀಶ ನಾಯ್ಕ, ಗೌರವಾಧ್ಯಕ್ಷರು. ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಶಿಕ್ಷಕ ಸಂಘ ಇವರು ಮಾತನಾಡಿ ಕಲಿಕೆಯು ಸಾಮಾಜಿಕ ಪ್ರಕ್ರಿಯೆ. ಮಗುವಿನ ಕಲಿಕೆಯ ಅಡಿಪಾಯವಿರುವುದೇ ಆ ಮಗುವು ತನ್ನ ಸುತ್ತಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನಗಳಲ್ಲಿ ಹೇಗೆ ಮತ್ತು ಎಷ್ಟು ಭಾಗವಹಿಸಿದೆ ಎಂಬುದರ ಮೇಲೆ ಗುಣ ಅವಲಂಬಿಸಿದೆ. ಅಂತಹ ಗುರಿ ಮತ್ತು ಒಡನಾಟಗಳನ್ನು ಮಗುವಿನ ಕಲಿಕೆಯ ಪರಿಸರದಲ್ಲಿ ಸಂಭವಿಸುವAತೆ ಮಾಡುವುದು ಶಾಲಾ ಶಿಕ್ಷಣದಲ್ಲಿ ತೊಡಗಿರುವವರೆಲ್ಲರ ಜವಾಬ್ದಾರಿ. ಇಂತಹ ಮಕ್ಕಳ ಹಬ್ಬದಿಂದ ಇವೆಲ್ಲವು ಸಾಧ್ಯ. ಸ್ಥಳೀಯ ಪಂಚಾಯತ ಅಧ್ಯಕ್ಷರಾದ ಜಿ. ಜಿ. ಶಂಕರರವರು ಒಬ್ಬ ಉತ್ತಮ ಆಡಳಿತಗಾರರು ತಮ್ಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ ಹಾಗೂ ಶಿಕ್ಷಕರಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಘಟನೆ ಪರವಾಗಿ ಶ್ರೀಯುತರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖರ್ವಾ ಕ್ಲಸ್ಟರ್ ಸಿ.ಆರ್.ಪಿ. ಎಸ್.ಎಂ.ಭಟ್‌ರವರು ಮಾತನಾಡಿ ತನ್ನ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬೆಳ್ಳುಕುರ್ವೆ ಶಾಲೆ ಒಂದು ಅತ್ಯುತ್ತಮ ಶಾಲೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧನ ಬರ್ಗಿ ಉಪಾಧ್ಯಕ್ಷರು, ಜಿಲ್ಲಾ ಶಿಕ್ಷಕರ ಸಂಘ, ಶಾರದಾ ಎಂ. ಹೆಗಡೆ ಸಂಘಟನಾ ಕಾರ್ಯದರ್ಶಿಗಳು, ಶಂಕರ ನಾಯ್ಕ, ಶಿಕ್ಷಕರು, ವಿ. ಪಿ. ಯಾಜಿ ನಿವೃತ್ತ ಶಿಕ್ಷಕರು, ಶ್ರೀಮತಿ ಸವಿತಾ ನಾಯ್ಕ, ಗ್ರಾ.ಪಂ. ಸದಸ್ಯರು, ಶ್ರೀಮತಿ ಸುಮನಾ ಗೌಡ, ಗ್ರಾ.ಪಂ. ಸದಸ್ಯರು, ಮಮತಾ ನಾಯ್ಕ, ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ. ಮಾತನಾಡಿ ಶುಭ ಹಾರೈಸಿದವರು.
ಕಾರ್ಯಕ್ರಮದಲ್ಲಿ ಬೆಳ್ಳುಕುರ್ವೆ ಶಾಲೆಯ ಮಕ್ಕಳ ನೆಚ್ಚಿನ ಶಿಕ್ಷಕಿ, ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ, ವಿಜೇತ ಶಿಕ್ಷಕಿ ಶ್ರೀಮತಿ ಪ್ಲೋರಿನ ರೊಡ್ರಿಗಿಸ್ ಇವರನ್ನು ಊರ ನಾಗರಿಕರು, ಎಸ್.ಡಿ.ಎಂ.ಸಿ ಹಾಗೂ ಸರಸ್ವತಿ ಯುವಕ ಸಂಘ, ಬೆಳ್ಳುಕುರ್ವೆ ಇವರ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಾದೇವ ಜಟ್ಟಿ ಗೌಡ ಮಾತನಾಡಿ, ಶಿಕ್ಷಕರ ಸ್ಥಳೀಯ ಜನ ಪ್ರತಿನಿಧಿಗಳ ಹಾಗೂ ಪಾಲಕರ ನೆರವಿನಿಂದ ಒಂದು ಉತ್ತಮ ಶಾಲೆಯಾಗಿದೆ ಎಂದು ಶುಭ ಹಾರೈಸಿದು, ಪ್ರಾರಂಭದಲ್ಲಿ ಮುಖ್ಯಾಧ್ಯಾಪಕರಾದ ಶ್ರೀ ಎಂ.ಜಿ. ನಾಯ್ಕ ಸ್ವಾಗತಿಸಿದರು. ಶ್ರೀಮತಿ ಪ್ಲೋರಿನಾ ರೊಡ್ರಿಗಸ್ ವರದಿ ವಾಚಿಸಿದರು. ಶ್ರೀಮತಿ ಸುವರ್ಣಾ ಗೊನ್ಸಾಲ್ವಿಸ್ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಿದರು. ಶ್ರೀ ಈರು ಎಚ್. ಗೌಡ ಇವರು ಸರ್ವರನ್ನು ವಂದಿಸಿದರೆ, ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳು ನಡೆದವು.

error: