May 18, 2024

Bhavana Tv

Its Your Channel

ತುಳಸಾಣಿಯಲ್ಲಿ ಸನ್ಮಾನ, ಮನರಂಜನೆ ಹಾಗೂ ಯಕ್ಷಗಾನ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ತುಳಸಾಣಿಯಲ್ಲಿ ಸನ್ಮಾನ, ಮನರಂಜನೆ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಾರ್ಷಿಕೋತ್ಸವ ಹಾಗೂ ಹೊಳೆಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ತುಳಸಾಣಿಯಲ್ಲಿ ಕುಂಬ್ರಿ ಮರಾಠಿ ಸಮಾಜದ ನೂರಾರು ಕುಟುಂಬಗಳು ವಾಸ್ತವ್ಯ ಹೊಂದಿದ್ದು, ಜೀವನಾದರಕ್ಕೆ ಕೃಷಿಯನ್ನೇ ಮುಖ್ಯ ಕಸುಬಾಗಿಸಿಕೊಂಡು, ಕಾಯಕದಲ್ಲಿ ಸಾರ್ಥಕತೆ ಕಂಡಿದ್ದಾರೆ. ಕೆಲವು ಹಬ್ಬ ಹರಿದಿನಗಳನ್ನು ತಮ್ಮ ವಿಶಿಷ್ಟ ಸಂಪ್ರದಾಯ ಹಾಗೂ ಸಂಸ್ಕೃತಿಯ ಮೂಲಕ ಆಚರಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲಿಯೂ “ಹೊಳೆಹಬ್ಬ” ಬಹಳ ಪ್ರಾಮುಖ್ಯತೆ ಪಡೆದಿದೆ. ಹೊಳೆ ಹಬ್ಬದ ಸಂದರ್ಭದಲ್ಲಿ ಉಳಿದೆಲ್ಲ ಊರುಗಳಲ್ಲಿ ಮನೆಗೇ ಕರೆದು “ಖಾರ ಊಟ” ಉಣಬಡಿಸಿದರೆ; ಈ ಊರಿನಲ್ಲಿ ಹೊಳೆಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ ‘ಖಾರ ಊಟ’ದ ವ್ಯವಸ್ಥೆ ಇರುತ್ತದೆ. ಊಟದ ಬಳಿಕ ಸಾಂಸ್ಕೃತಿಕ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯುತ್ತದೆ.

ಅದರಂತೆ ಈ ವರ್ಷವೂ ಸಹ ಶ್ರೀ ಆದಿಶಕ್ತಿ ಯುವಕ ಸಂಘ ತುಳಸಾಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಂಘದ 19 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಊರ ಹೊಳೆಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡ ರವಿಕುಮಾರ್ ಶೆಟ್ಟಿ ಜ್ಯೋತಿ ಬೆಳಗುವ ಮೂಲಕ ಈ ಕಾರ್ಯಕ್ರಮಕೆ ಚಾಲನೆ ನೀಡಿ ಶುಭ ಹಾರೈಸಿದರು.

ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ, ತುಳಸಾಣಿಯ ಶಿವಾನಂದ ಮರಾಠಿ ಪ್ರಾಸ್ತಾವಿಕವಾಗಿ ಮಾತನಾಡಿ “ಹೊಳೆಹಬ್ಬದ ದಿನ ಸಾರ್ವಜನಿಕವಾಗಿ ಖಾರ ಊಟದ ವ್ಯವಸ್ಥೆ ಮಾಡುವ ಮೂಲಕ, ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸ್ನೇಹ ಸಹಬಾಳ್ವೆಯ ಸಂಪ್ರದಾಯವನ್ನು, ನಮಗೀಗ ಮುಂದುವರೆಸಿಕೊAಡು ಹೋಗಲು ಹೆಮ್ಮೆ ಅನಿಸಿಸುತ್ತದೆ” ಎಂದರು.

ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ದಿವಂಗತ ಆಲೂ ಪಿಲ್ಲು ಮರಾಠಿಯವರ ಸ್ಮರಣಾರ್ಥ ನೀಡುವ ಗೌರವವಾಗಿ; ಸಾಮಾಜಿಕ ಸೇವೆ ಪರಿಗಣಿಸಿ ಶ್ರೀಯುತ ಹನುಮಂತ ನಾಯ್ಕ್ ಕಾಳಿಂಗನಗುAಡಿ ಇವರನ್ನು ಸನ್ಮಾನಿಸಲಾಯಿತು. ಹಾಗೆಯೇ ಶಿಕ್ಷಣ ಪ್ರೇಮಿ, ಯಕ್ಷಗಾನದ ಹಾಸ್ಯ ಕಲಾವಿದ ಗಣಪತಿ ಮರಾಠಿ ತುಳಸಾಣಿ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿಯಾಗಿ ಆಗಮಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ್ ಸೋನಿ ಮಾತನಾಡಿ “ನಾನು ಶಾಸಕನಾದರೆ, ತುಳಸಾಣಿ ಸೇರಿದಂತೆ ಅರಣ್ಯವಾಸಿಗಳ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತೇನೆ” ಎಂದರು.

ಕಾರ್ಯಕ್ರಮದಲ್ಲಿ ಕೆಡಿಸಿಸಿ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಸಾಲ್ಕೋಡ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಚಿನ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಆದಿಶಕ್ತಿ ಯುವಕ ಸಂಘದ ಅಧ್ಯಕ್ಷ ನಾರಾಯಣ ಮರಾಠಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದ ಬಳಿಕ ತುಳಸಾಣಿ ಶಾಲಾ ಮಕ್ಕಳಿಂದ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ; ದೇಶಭಕ್ತಿಯ ಪಿರಮಿಡ್, ಕಬ್ಬಡಿ ನೃತ್ಯ ಮುಂತಾದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿತು.

ನAತರ ಯುವಕ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಮಧುರಾ ಮಹೇಂದ್ರ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು.

ವರದಿ:ನರಸಿಂಹ ನಾಯ್ಕ್ ಹರಡಸೆ.

error: