May 18, 2024

Bhavana Tv

Its Your Channel

ಹೊನ್ನಾವರ ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಹೊನ್ನಾವರ: ಶುದ್ಧ ಕನ್ನಡ ಮಾತಾನಾಡುವವರು ವಿರಳವಾಗುತ್ತಿದ್ದಾರೆ. ಕನ್ನಡ ನುಡಿ ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಹಿರಿಯ ಸಾಹಿತಿ, ಸಂಘಟಕ ರೋಹಿದಾಸ ನಾಯಕ ಹೊನ್ನಾವರ ತಾಲೂಕಿನ ಕೆಳಗಿನೂರಿನ ಒಕ್ಕಲಿಗರ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಬಂದಿದೆ. ಸಾಹಿತ್ಯ ಕೃತಿಗಳ ಓದುವಿಕೆಯಿಂದ ಭಾಷೆಯ ಮೇಲಿನ ಅಭಿಮಾನ ಹೆಚ್ಚುತ್ತದೆ. ಸಾಹಿತಿಗಳು ಮತ್ತು ಸಂಘಟನೆಗಳು ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಕನ್ನಡ ಸೇವೆಗೆ ಎಲ್ಲರೂ ಕೈ ಜೋಡಿಸಬೇಕು. ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಕನ್ನಡ ಸೇವೆ ಮಾಡುತ್ತಿದೆ ಎಂದರು.
ಈ ಸಂದರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ ಮಹನಿಯರಾದ ಶಿಕ್ಷಣ ಕ್ಷೇತ್ರದ ಎಂ.ಎಸ್.ಹೆಗಡೆ, ಮಾಧ್ಯಮ ಕ್ಷೇತ್ರದ ದಿನೇಶ ಹೆಗಡೆ, ವನ್ಯಜೀವಿ ವಿಭಾಗದ ಡಾ. ರಾಮ ನಾಯ್ಕ, ಸಮಾಜ ಸೇವಕ ಕೆ.ಸಿ.ವರ್ಗಿಸ್, ರಂಗಭೂಮಿ ಕ್ಷೇತ್ರದ ಮಹಾಬಲೇಶ್ವರ ಹೆಬ್ಬಾರ, ಗೋಪಾಲ ಹಳ್ಳೇರ, ಮೋಹನ ನಾಯ್ಕ, ಯಕ್ಷಗಾನ ಕಲಾವಿದರಾದ ಗಣೇಶ ನಾಯ್ಕ, ರಾಮ ಗೌಡ ಗುಣವಂತೆ, ಜಾನಪದ ಕ್ಷೇತ್ರದ ನಾರಾಯಣ ಜಟ್ಟಪ್ಪ ನಾಯ್ಕ, ಕಲಾವಿದ ನಾಗರಾಜ ಶೇಟ್, ಭಾರತೀಯ ಸೇನೆಯ ಅಶೋಕ ನಾಯ್ಕ, ಕನ್ನಡ ಸೇವೆಯ ಗಣಪತಿ ನಾಯ್ಕ ಸರಳಗಿ, ಪುರಂದರ ನಾಯ್ಕ ಸರಳಗಿ, ಮಂಜುನಾಥ ಗೌಡ, ಉದಯರಾಜ ಮೇಸ್ತ, ವಿಮಲಾ ಗಾಬಿತ, ಜನಾರ್ಧನ ಕಾಣಕೋಣಕರ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನ ಅಧ್ಯಕ್ಷ ಡಾ. ಎಸ್.ಡಿ.ಹೆಗಡೆ ಮಾತನಾಡಿದರು. ಸಾಹಿತಿ ಪುಟ್ಟು ಕುಲಕರ್ಣಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ, ಗೌರವ ಕಾರ್ಯದರ್ಶಿ ಎಚ್.ಎಂ.ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಸಾಧನಾ ಬರ್ಗಿ, ಈಶ್ವರ ಕೊಡಾಣಿ, ಮಹೇಶ ಭಂಡಾರಿ ಇತರರಿದ್ದರು. ಗಜಾನನ ನಾಯ್ಕ ನಿರ್ಣಯ ಮಂಡಿಸಿದರು. ಶಿಕ್ಷಕ ಉದಯ ನಾಯ್ಕ ನಿರ್ವಹಿಸಿದರು.

error: