May 18, 2024

Bhavana Tv

Its Your Channel

“ಆರೋಗ್ಯ ಸೇವೆಗಳ ತಿಳುವಳಿಕೆ ಅಗತ್ಯ” – ಡಾ|| ಉಷಾ ಹಾಸ್ಯಗಾರ

ಕಾಸರಕೋಡಿನ ಕಲಾಧರ ಕ್ಯಾಸೋ ಪ್ಯಾಕ್ಟರಿಯಲ್ಲಿ ಸಮುದಾಯ ಆರೋಗ್ಯ ತಪಾಸಣಾ ಶಿಬಿರ

ಹೊನ್ನಾವರ: “ಸರಕಾರವು ಜನಸಾಮನ್ಯರ ಉತ್ತಮ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು, ಆರೋಗ್ಯ ಸೇವೆಗಳನ್ನು ಜಾರಿಗೆ ತಂದಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು. ಆರೋಗ್ಯ ಸೇವೆಗಳ ಬಗ್ಗೆ ಸಾರ್ವಜನಿಕರು ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು” ಎಂದು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಉಷಾ ಹಾಸ್ಯಗಾರ ಹೇಳಿದರು.ಅವರು ಕಾಸರಕೊಡಿನ ಕಲಾಧಾರ ಕ್ಯಾಸೊ ಪ್ಯಾಕ್ಟರಿಯಲ್ಲಿ, ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು, ಆರೋಗ್ಯ ಇಲಾಖೆ ಹೊನ್ನಾವರ,ಸೃಷ್ಠಿ ಸಂಸ್ಥೆ, ಐ.ಸಿ.ಟಿ.ಸಿ ವಿಭಾಗ ತಾಲೂಕ ಆಸ್ಪತ್ರೆ ಇವುಗಳ ಸಂಯಕ್ತಾಶ್ರಯದಲ್ಲಿ ನಡೆದ “ಸಮುದಾಯ ತಪಾಸಣಾ ಶಿಬಿರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಅವರು ಮಾತನ್ನು ಮುಂದುವರಿಸುತ್ತಾ “ಎಲ್ಲ ಉಪಕೇಂದ್ರಗಳಲ್ಲಿ ಸುಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಕಾಲ ಕಾಲಕ್ಕೆ ಸಾಮನ್ಯ ಅರೋಗ್ಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಸಮುದಾಯ ಆರೋಗ್ಯ ತಪಾಸಣೆ ಶಿಬಿರ ಉದ್ದೇಶ 2030 ರ ವೇಳೆಗೆ ಭಾರತವನ್ನು ಹೆಎಚ್.ಐ.ವಿ ಮುಕ್ತ ರಾಷ್ಟçವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್.ಐ.ವಿ/ಏಡ್ಸ್ ಬಗ್ಗೆ ಅರಿವು ಮೂಡಿಸುವುದಾಗಿದೆ.ಹೆಚ್.ಐ.ವಿ ಪರೀಕ್ಷೆ ಬಗ್ಗೆ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಮುಂದೆ ಬಂದು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.ಸಾರ್ವಜನಿಕರು ನಿಯಮಿತವಾಗಿ ಸಾಮನ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವದರ ಮೂಲಕ ಮುಂದೆ ಬರಬಹುದಾದ ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲೆ ಗುರುತಿಸಿಕೊಂಡು ಪರಿಣಾಮಕಾರಿ ಚಿಕಿತ್ಸೆ ಪಡೆಯುವುದಾಗಿದೆ. ಎಲ್ಲರೂ ಅಭಾ ಕಾರ್ಡ ಪಡೆದುಕೊಳ್ಳಬೇಕು.ಮುಂದಿನ ದಿನಗಳಲ್ಲಿ ನಮ್ಮ ಆರೋಗ್ಯದ ಸ್ಥಿತಿಗತಿಗಳ ದತ್ತಾಂಶಗಳು ಈ ಅಭಾ ಕಾರ್ಡನಲ್ಲಿ ಸಂಗ್ರಹವಾಗಲಿದ್ದು ಗುಣಮಟ್ಟದ ಮತ್ತು ತ್ವರಿತ ಚಿಕಿತ್ಸೆ ಪಡೆದುಕೊಳ್ಳಲು ಅನೂಕೂಲವಾಗಲಿದೆ” ಎಂದು ಹೇಳಿದರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉಧ್ಘಾಟಿಸಿದ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶ ಕಿಣಿ ಮಾತನಾಡುತ್ತ “ಇಂದಿನ ಒತ್ತಡಯುಕ್ತ ಜೀವನಶೈಲಿಯಿಂದ ನಾವು ಬಿಪಿ, ಶುಗರ ಸೇರಿದಂತೆ ಅನೇಕ ಕಾಯಿಲೆಗಳಿಗೆ ಬಹು ಬೇಗನೆ ಒಳಗಾಗುತ್ತಿದೆವೆ. ಇಂತಹ ಕಾಯಿಲೆಗಳಿಂದ ದೂರ ಇರಬೇಕಾದರೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇವತ್ತಿನ ಈ ಶಿಭಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಐ.ಸಿಟಿ.ಟಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರರವರು ಪ್ರಾಸ್ತವಿಕ ನುಡಿಗಳನ್ನಾಡಿದ್ದರು. ಕಲಾಧರ ಪ್ಯಾಕ್ಟರಿಯ ಮುಖ್ಯಸ್ಥರಾದ ಬಾಲಕೃಷ್ಣ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಐ.ಸಿ.ಟಿ.ಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳಾದ ಉಮೇಶ.ಕೆ, ಸಮುದಾಯ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ಯಾಕ್ಟರಿಯ ನೂರಕ್ಕೂ ಹೆಚ್ಚಿನ ಕಾರ್ಮಿಕರು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು.ವಿವಿಧ ರೀತಿಯ ರಕ್ತ ಪರೀಕ್ಷೆ ಸೆರಿದಂತೆ ಆರೋಗ್ಯ ಸೇವೆ ನೀಡಲಾಯಿತು.

error: