May 5, 2024

Bhavana Tv

Its Your Channel

ಶ್ರೀ ಗುಣವಂತೆಶ್ವರನ ಸಮ್ಮುಖದಲ್ಲಿ ಅಹೋರಾತ್ರಿ ನಾದ ಸೇವೆ- ಸನ್ಮಾನ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಶಂಭುಲಿAಗೇಶ್ವರನ ಸಮ್ಮುಖದಲ್ಲಿ ಶಿವರಾತ್ರಿಯ ಪ್ರಯುಕ್ತ ಸ್ವರ ಸಂಸ್ಕಾರ ಗುಣವಂತೆಯ ಆಶ್ರಯದಲ್ಲಿ ಹಿರಿಯ ಕಿರಿಯ ಕಲಾವಿದರಿಂದ 20 ನೇಯ ನಾದಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಲಭಾಗ ಕುಟುಂಬದ ಕೆರೆಮನೆಯ ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ನಾಗವೇಣಿ ರಾಮ ಹೆಗಡೆ ಕೆರೆಮನೆ ಇವರಿಗೆ ಸ್ವರ ಸಂಸ್ಕಾರ ವೇದಿಕೆಯಿಂದ ಮತ್ತು ಊರ ನಾಗರಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ ವಿಶ್ರಾಂತ ವ್ಯವಸ್ಥಾಪಕ ಅಭಿಯಂತರರಾದ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ ನರಸಿಂಹ ಪಂಡಿತರು ಮಾತನಾಡಿ ಕಲಾವಿದ ಸಮಾಜದ ಸುಸಂಸ್ಕೃತಿಯನ್ನು ವೃದ್ಧಿಸುವ ಪ್ರೇರಕ ಶಕ್ತಿಯಾಗುತ್ತಾನೆ. ದೇವಸ್ಥಾನಗಳು ಕಲಾ ರಾಧನೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು. ಗುಣವಂತೆ ಗುಣವಂತರ,ವಿದ್ಯಾವAತರ ಊರಾಗಿರಲು ಕಾರಣ ಇಲ್ಲಿ ಕಲಾವಿದರನ್ನು ಆರಾಧಿಸುವ ಜನರಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಗುಣವಂತೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ ಧನ ಸಹಾಯ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಜಿ ಕೆ ಹೆಗಡೆ ಹರಿಕೇರಿ ಇವರು ಇಂದಿನ ಶಿವರಾತ್ರಿಯ ಗೌರವಕ್ಕೆ ಪುರಸ್ಕೃತರಾದ ಶ್ರೀಮತಿ ನಾಗವೇಣಿ ಹೆಗಡೆಯವರನ್ನು ಪ್ರಶಂಸಿಸಿ ಕೆರಮನೆ ಕಲಾ ಮನೆಯಾಗಿದೆ. ಈ ಕುಟುಂಬದ ಎಲ್ಲ ಸದಸ್ಯರು ಕಲೆಯನ್ನು ಜೀವನದ ಭಾಗವಾಗಿ ಸ್ವೀಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. 20 ವರ್ಷಗಳಿಂದ ನಾಗಾರಾಧನೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿರುವ ಸ್ವರ ಸಂಸ್ಕಾರ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. ಸಂಗೀತ ಸಾಧನೆಯಿಂದ ಬರುವಂತದ್ದು,ವಿದ್ಯಾರ್ಥಿಗಳು ನಿಶ್ಚಿತ ಗುರಿಯೊಂದಿಗೆ ಹೆಚ್ಚಿನ ಸಾಧನೆಯನ್ನು ಮಾಡುವ ಮೂಲಕ ನಾಡಿಗೆ ದೇಶಕ್ಕೆಕೀರ್ತಿ ತರಲಿ ಎಂದು ಹಾರೈಸಿದರು.
ಶಿವರಾತ್ರಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗವೇಣಿ ಹೆಗಡೆ ಕೆರೆಮನೆಯವರು ಸಾಧಕನಾಗಬೇಕಾದರೆ ಸತತ ಪ್ರಯತ್ನ, ಆಸಕ್ತಿ, ಮತ್ತು ಸೂಕ್ಷ್ಮತೆಯ ಭಾವ ಇರಬೇಕು ಎಂದರು. ಸ್ವರ ಸಂಸ್ಕಾರ ನಡೆಸುತ್ತಿರುವ ಸಂಗೀತ ಶಾಲೆಯ ಗುರುಗಳಾದ ಶ್ರೀಗಜಾನನ ಹೆಬ್ಬಾರ್ ಉಪಸ್ಥಿತರಿದ್ದರು. ಶೇಷಾದ್ರಿ ಅಯ್ಯಂಗಾರ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ ಐ ಹೆಗಡೆ ಎಲ್ಲರನ್ನೂ ಅಭಿನಂದಿಸಿದರು. ಶ್ರೀ ಸುರೇಶ್ ಎನ್ ಮುರುಡೇಶ್ವರ, ನಾಗರಾಜ ಶಾಸ್ತ್ರಿ, ಲಂಬೋದರ ಎಂ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಜೆ 4.30 ರಿಂದ ಸುಮಾರು ಎರಡು ತಾಸು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ – ವಾದನ ಕಾರ್ಯಕ್ರಮ ನಡೆಯಿತು.
ಯುವ ಕಲಾವಿದರಾದ ತೇಜಾ ಭಟ್ ರಾಗ್ ಜೋಗ ಹಾಗೂ ಭಕ್ತಿಗೀತೆಗಳನ್ನು ಹಾಡಿದರು. ನಂತರ ಶ್ರೀ ಶೇಷಾದ್ರಿ ಅಯ್ಯಂಗಾರ್ ರವರ ಶಿಷ್ಯರಾದ ಡಾ. ಸಚಿನ್ ಪಂಡಿತ್, ಡಾ. ಶ್ರೀಧರ್ ಹೆಗಡೆ, ನಾಗಾರ್ಜುನ ಭಟ್ಟ, ಶ್ರೀ ಕೃಷ್ಣಪ್ರಸಾದ ಹೆಗಡೆ ಯವರು ಶಿವನ ಏಕಾದಶ ರೂಪಗಳನ್ನು ಪ್ರತಿನಿಧಿಸುವ 11 ಮಾತ್ರೆಯ ರುದ್ರ ತಾಳದಲ್ಲಿ ತಬಲಾ ವೃಂದವಾದನವನ್ನು ಪ್ರಸ್ತುತಪಡಿಸಿದರು.
ಹಿರಿಯ ಕಲಾವಿದರಾದ ನಾಗವೇಣಿ ಹೆಗಡೆ ಕೆರೆಮನೆ ಭಜನ್ ಗಳನ್ನು ಪ್ರಸ್ತುತಪಡಿಸಿದರು. ಶ್ರೀಪಾದ ಹೆಗಡೆ ಸೋಮನ ಮನೆಯವರು ರಾಗ ಕೌಶಿ ಕಾನಡಾ. ಹಾಗೂ ಭಜನ್ ಮೂಲಕ ನಾದ ಸೇವೆಗೈದರು. ಮುಂಬೈನ ಪ್ರಸಿದ್ಧ ತಬಲವಾದಕರಾದ ಪಂಡಿತ್. ಗಿರೀಶ್ ಶ್ಯಾಮ ಗೋಗಟೆ ಯವರು ದಿಲ್ಲಿ,ಅಜರಾಡ, ಹಾಗೂ ಫರೂಕಾಬಾದ್ ಘರಾಣೆಯ ಪೇಶ್ಕಾರ್, ಕಾಯ್ದ, ರೇಲಾ, ಗತ್, ಚಕ್ರದಾರ್ ಹಾಗೂ ಪಾರಂಪರಿಕ ಬಂದಿಷ್ ಗಳನ್ನು ನುಡಿಸುವ ಮೂಲಕ ನಾದ ಸೇವೆಗೈದರು. ಸುಜಯ ಭಟ್ ಹುಬ್ಬಳ್ಳಿ ಯವರು ರಾಗಬಾಗೇಶ್ರೀಯನ್ನು ಗಾಯಕಿ ಅಂಗದಲ್ಲಿ ನುಡಿಸಿ, ರಾಮರಥನ ಧನ ಭಜನ್ ನುಡಿಸಿದರು. ಶ್ರೀಮತಿ ಡಾ. ಶ್ರುತಿ ಭಟ್ ರಾಗ್ ಜೋಗ್ ಕೌಸ್ ಹಾಗೂ ಭಕ್ತಿ ಗೀತೆಯನ್ನು ಹಾಡುವ ಮೂಲಕ ನಾದ ಸೇವೆಗೈದರು. ಶ್ರೀ ಅಜಯ ಹೆಗಡೆ ಶಿರಸಿಯವರು ಹಾರ್ಮೋನಿಯಂ ಸ್ವತಂತ್ರವಾದನದಲ್ಲಿ ರಾಗ್ ಪ್ರಭಾ ಮಂಜರಿ ರಾಗ ನುಡಿಸುವ ಮೂಲಕ ಸೇವೆಗೈದರು. ಶ್ರೀ ಗಜಾನನ ಹೆಬ್ಬಾರ್ ರವರು ರಾಗ ಬಿಲಾಸಖಾನಿ ತೋಡಿ ಹಾಗೂ ಭಜನ್ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶಿವಾನಂದ ಭಟ್ಟ ಹಡಿನಬಾಳ್ ರವರು ರಾಗ ಗುಣಕಲಿ ಹಾಗೂ ಶಿವನ ಭಜನ್ ಪ್ರಸ್ತುತಪಡಿಸುವ ಮೂಲಕ ನಾದರಾದನೆಯಲ್ಲಿ ಪಾಲ್ಗೊಂಡರು.

ಅಹೋರಾತ್ರಿ ನಡೆದ ನಾದಾರಾಧನೆ ಯಲ್ಲಿಡಾ. ಜಿ.ಕೆ ಹೆಗಡೆ, ಶಂತನು ಶುಕ್ಲ ಮುಂಬೈ, ಎನ್ ಜಿ ಹೆಗಡೆ ಕಪ್ಪೆಕೆರೆ, ಶೇಷಾದ್ರಿ ಅಯ್ಯಂಗಾರ್, ಗುರುರಾಜ ಹೆಗಡೆ, ಅಕ್ಷಯ ಭಟ್ಟ, ಭರತೇಶ ಹೆಗಡೆ,ರಾಜಶೇಖರ ನಾಯ್ಕ್, ಶ್ರೀ ಕಪಿಲ ಭಟ್ಟ, ಶ್ರೀ ವೈಜಯ ಭಂಡಾರ್ಕರ್, ಗಣೇಶ ಹೆಬ್ಬಾರ್ ತಬಲಾ ಸಾತ್ ಸಂಗತ್ ನೀಡುವ ಮೂಲಕ ನಾದ ಸೇವೆಗೈದರು. ಗೌರೀಶ ಯಾಜಿ, ಹರಿಶ್ಚಂದ್ರ ನಾಯ್ಕ್, ಅಜಯ ಹೆಗಡೆ ಹಾರ್ಮೋನಿಯಂ ಸಾತ್ ಸಂಗತ ಮಾಡುವ ಮೂಲಕ ಶಿವರಾತ್ರಿಯ ನಾದ ಸೇವೆಯಲ್ಲಿ ಪಾಲ್ಗೊಂಡರು ಇಪ್ಪತ್ತನೆಯ ನಾದಾರಾಧನೆ 15 ತಾಸುಗಳ ಗಾಯನ ವಾದನದ ಮೂಲಕ ಶಿವನ ಸಮ್ಮುಖದಲ್ಲಿ ಸಂಪನ್ನಗೊAಡಿತು.

error: