May 18, 2024

Bhavana Tv

Its Your Channel

ಜನಮನ ಮೆಚ್ಚಿಸಿದ ಕರ್ಣ ಪರ್ವದಲ್ಲಿಯ‘ಶಲ್ಯ ನಿರ್ಗಮನ’

ಹೊನ್ನಾವರ :- ಯಕ್ಷಲೋಕ (ರಿ.) ಹಳದೀಪುರ ಮತ್ತು ಸ್ಫೂರ್ತಿರಂಗ ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ಣ ಪರ್ವದಲ್ಲಿಯ‘ಶಲ್ಯ ನಿರ್ಗಮನ’ ಫೆಭ್ರುವರಿ ತಿಂಗಳ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು.ಹಿಮ್ಮೇಳದಲ್ಲಿ ಗೋಪಾಲಕೃಷ್ಣ ಭಾಗವತ ಹಳದೀಪುರ, ಗಣೇಶಯಾಜಿಇಡಗುಂಜಿ ಮನೋಜ್ಞವಾಗಿ ಪದ ಹೇಳಿ ಜನಮನ ಮೆಚ್ಚಿಸಿದರು.ಮದ್ದಳೆಯಲ್ಲಿ ಶ್ರೀಪಾದ ಭಟ್ಟಕಡತೋಕಾ ಪದಕ್ಕೆತಕ್ಕಂತೆ ಶುದ್ಧ ಬಿಡ್ತಿಗೆಗಳ ಶೃತಿ ಲಯ ತಾಳಬದ್ಧವಾಗಿ ನುಡಿಸಿ ಸೇರೀದ ಸಭಿಕರ ಮನಸೂರೆಗೊಂಡರು. ಕೃಷ್ಣನ ಪಾತ್ರಧಾರಿಜನಾರ್ದನ ಶೆಟ್ಟಿಗಾಣಗೆರೆ ಮತ್ತು ಶಲ್ಯನ ಪಾತ್ರಧಾರಿ ಎಮ್.ಎಮ್.ಹೆಗಡೆಇವರ ನಡುವಿನ ಸಂವಾದ ಚಿಂತನಶೀಲವಾಗಿತ್ತು. ಕರ್ಣನ ಪಾತ್ರಧಾರಿ ಜಿ.ಎನ್.ಹೆಗಡೆ, ಬೇರಂಕಿ ಮತ್ತುಅರ್ಜುನನ ಪಾತ್ರಧಾರಿ ಡಾ.ಎಸ್.ಡಿ.ಹೆಗಡೆಇವರ ನಡುವಿನ ಯುದ್ಧದ ಸಂಭಾಷಣೆ ಕುರುಕ್ಷೇತ್ರ ಯುದ್ಧದ ಹಿಂದಿನ ವಸ್ತು ವಿಷಯಗಳನ್ನು ಪ್ರಸಂಗದ ಆಶಯಕ್ಕನುಸಾರ ವಿಶ್ಲೇಷಿಸಿದ ರೀತಿ ವಿನೂತನವಾಗಿತ್ತು. ವಿ.ಪಿ.ಭಟ್ಟ, ಎಸ್.ಎನ್.ಭಟ್ಟ. ಎನ್.ಎಸ್.ಹೆಗಡೆ ದಂಪತಿಗಳು, ಪ್ರೊ.ಜಿ.ಪಿ.ಹೆಗಡೆ ದಂಪತಿಗಳು, Ã ಆರ್.ಎನ್.ನಾಯ್ಕ, ಟಿ.ಜಿ.ಭಟ್ಟ. ಡಿ.ಜಿ.ಭಟ್ಟ. ಎಸ್.ಎನ್.ಹೆಗಡೆ ಮುಂತಾದ ಮಹನೀಯರು ಆಗಮಿಸಿ ತಾಳಮದ್ದಳೆಯ ಯಶಸ್ಸಿಗೆ ಕಾರಣರಾದರು. ಡಾ.ಎಸ್.ಡಿ.ಹೆಗಡೆಎಲ್ಲರನ್ನು ಸ್ವಾಗತಿಸಿದರು. ಜಿ.ಎನ್.ಹೆಗಡೆ ಎಲ್ಲರನ್ನು ಅಭಿನಂದಿಸಿದರು.

error: