May 4, 2024

Bhavana Tv

Its Your Channel

ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಹೊನ್ನಾವರ: ಸಂಘಟನೆಯೊoದಿಗೆ ಬೆರೆತು ಸಮಾಜ ಸೇವೆಯಲ್ಲಿಯೂ ಕೈಜೋಡಿಸುವ ಸಂದೀಪ ಪೂಜಾರಿ ಅವರು ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದಾರೆ ಎಂದು ಗ್ರಾ.ಪಂ ಸದಸ್ಯ ಹನುಮಂತ ನಾಯ್ಕ ಹೇಳಿದರು.

ಅಭಿಮಾನ ಸ್ಪೋಡ್ಸ್ ಕ್ಲಬ್ ಹೊನ್ನಾವರ ಹಾಗೂ ಎಸ್.ಡಿ.ಎಮ್.ಸಿ ಸ.ಹಿ.ಪ್ರಾ. ಶಾಲೆ ಹೊದ್ಕೆ ಶಿರೂರು ಇವರ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂದೀಪ್ ಅವರು ನಿಸ್ವಾರ್ಥ ಮನೋಭಾವನೆಯಿಂದ ಸಂಘಟನೆ ಮಾಡುತ್ತಿದ್ದು, ಜನಪರ ಕಾರ್ಯಕ್ಕೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಅಂಗನವಾಡಿಯಲ್ಲಿ 38 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಸುಶೀಲಾ ಇವರು ಗುರುಮಾತೆಗೆ ಸಮಾನರು. ಅವರ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.

ಹೊದ್ಕೆ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಿ.ಜಿ.ಅವಧಾನಿ ಮಾತನಾಡಿ ಈ ಭಾಗದ ವಿದ್ಯಾರ್ಥಿಗಳ ಸಾಧನೆ ಅನನ್ಯವಾಗಿದೆ. ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತು ಪಾಲಕರು, ಪೋಷಕರು, ಶಿಕ್ಷಣಾಭಿಮಾನಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾದಾಗ ಮಾತ್ರ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯ. ಹೊದ್ಕೆ ಪ್ರೌಢಶಾಲೆ 25ರ ಸಂಭ್ರಮದಲ್ಲಿದೆ. ಇಲ್ಲಿಯ ಎಲ್ಲಾ ವಿದ್ಯಾರ್ಥಿಗಳು ಪ್ರೌಢಶಾಲೆಯ ಪ್ರಯೋಜನ ಪಡೆಯಬೇಕು ಎಂದರು.

ಅಭಿಮಾನ ಸ್ಪೋಡ್ಸ್ ಕ್ಲಬ್ ಮಾಲೀಕ ಸಂದೀಪ ಪೂಜಾರಿ ಮಾತನಾಡಿ ಸನ್ಮಾನಕ್ಕೆ ನಾನು ಅರ್ಹನಲ್ಲದಿದ್ದರೂ ಸನ್ಮಾನಿಸಿದೆ. ಇದೀಗ ಇನ್ನೂ ಹೆಚ್ಚಿನ ಜವಾಬ್ದಾರಿ ನನ್ನಮೇಲಿದೆ. ನನ್ನ ವೃತ್ತಿ ಬದುಕಿನಲ್ಲಿ ಏನೇ ಸಮಸ್ಯೆ ಎದುರಾದರೂ ಎದೆಗುಂದದೆ ನನ್ನ ಛಲ ಬಿಟ್ಟಿಲ್ಲ. ನಾನು ಈ ಮಟ್ಟಕ್ಕೆ ಬೆಳೆಯಲು ಎಲ್ಲರೂ ನನ್ನನ್ನು ಹುರಿದುಂಬಿಸಿ ಪ್ರೇರೇಪಿಸಿದ್ದಾರೆ. ಎಲ್ಲವನ್ನೂ ದೇವರ ಸೇವೆ ಎಂದು ಮಾಡುತ್ತಿದ್ದೇನೆ. ಸರ್ಕಾರಿ ಶಾಲೆ ಉಳಿಸಿ ಎಂಬ ಅಭಿಯಾನ ಆರಂಭಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಈ ಅಭಿಯಾನ ಮುನ್ನೆಲೆಗೆ ಬರಲಿದೆ ಎಂದರು.

ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸುಧೀಶ್ ನಾಯ್ಕ ಮಾತನಾಡಿ ಪರಿಶ್ರಮ ಮತ್ತು ಸಾಧನೆಮಾಡುವ ಮನಸ್ಸು ಇರುವವರಿಗೆ ಮಾತ್ರ ಇಂತಹ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲು ಸಾಧ್ಯ. ಸರಳ ವ್ಯಕ್ತಿತ್ವದ ಸಂದೀಪ ಪೂಜಾರಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಪರಿಶ್ರಮದ ಮೂಲಕ ಬಡವರಿಗೆ, ದೀನ ದಲಿತರಿಗೆ ನೆರವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮಹೇಶ ಭಂಡಾರಿ, ಜಿಲ್ಲಾ ನಿರ್ದೇಶಕ ಶಂಕರ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿದರು. ಗ್ರಾಪಂ ಸದಸ್ಯರಾದ ಗಣಪಿ ಮುಕ್ರಿ, ಯಮುನಾ ಪಟಗಾರ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತಿಯಾಗಲಿರುವ ಅಂಗನವಾಡಿ ಸಹಾಯಕಿ ಸುಶೀಲಾ ಶಾನಭಾಗ, ಫುಟ್‌ಬಾಲ್ ತರಬೇತುದಾರ ಶಿವಾನಂದ ಅಳ್ಗಿ ಹಾಗೂ ಅಭಿಮಾನ ಸ್ಪೋಡ್ಸ್ ಕ್ಲಬ್ ಮಾಲೀಕ ಸಂದೀಪ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ 11 ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೈದ ಅನೇಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಮುಖ್ಯಾಧ್ಯಾಪಕ ಸುರೇಶ ನಾಯ್ಕ ಸ್ವಾಗತಿಸಿದರು. ರೋಹಿದಾಸ ನಾಯ್ಕ ನಿರೂಪಿಸಿದರು. ಶಿಕ್ಷಕಿ ಶಾಲಿನಿ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಎಂ.ಜಿ.ನಾಯ್ಕ, ರೇಶ್ಮಾ ನಾಯ್ಕ ಸಹಕರಿಸಿದರು. ಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

error: