May 5, 2024

Bhavana Tv

Its Your Channel

ಶ್ರೀ ಮಹಾಸತಿ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ “ಹೆತ್ತವಳ ಹಾಲು ವಿಷವಾಯಿತು” ಸಾಮಾಜಿಕ ನಾಟಕ

ಹೊನ್ನಾವರ ತಾಲೂಕಿನ ಕುದ್ರಿಗೆ ಕಾಯಿತ್ಲಕೇರಿಯಲ್ಲಿ, ಶ್ರೀ ಮಹಾಸತಿ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ “ಹೆತ್ತವಳ ಹಾಲು ವಿಷವಾಯಿತು” ಎಂಬ ಸುಂದರ ಸಾಮಾಜಿಕ ನಾಟಕ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು.

ಕುದ್ರಿಗೆ ಕಾಯಿತ್ಲಕೇರಿಯ ಶ್ರೀ ಮಹಾಸತಿ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ “ಸಾಂಸ್ಕೃತಿಕ ಸಂಜೆ” ಎಂಬ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಕೂಜಳ್ಳಿ ಮಾರುತಿ ನಾಯ್ಕರ ಪ್ರಾರ್ಥನೆಯೊಂದಿಗೆ, ಸಂಘದ ಹಿರಿಯ ಕಲಾವಿದರು ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಯುವಕ ಸಂಘದ ಅಧ್ಯಕ್ಷ ರಘುವೀರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ “ಯಶಸ್ವಿ 33 ನೇ ವರ್ಷದ ನಾಟಕವಿದು. ಈಗಿನ ಯುವ ಪೀಳಿಗೆ ನಾಟಕದ ಕಡೆ ಒಲವು ತೋರಬೇಕು. ಕಲೆಯನ್ನು ಉಳಿಸಿ ಬೆಳೆಸಬೇಕು” ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರಿಬಿದನೂರು ತಾಲೂಕಾ ಯೋಜನಾಧಿಕಾರಿ ನಾಗರಾಜ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ; ಪ್ರತಿಭಾನ್ವಿತ ಕಲಾವಿದರಿಂದ “ಹೆತ್ತವಳ ಹಾಲು ವಿಷವಾಯಿತು” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ನಾಟಕದಲ್ಲಿನ ಹಾಸ್ಯ ಭಾಗದ ಬ್ರಾಹ್ಮಣ ಹಾಗೂ ಮಾಣಿಯ ಪಾತ್ರದಲ್ಲಿ ಶ್ರೀಪಾದ ಭಟ್ ಮತ್ತು ವಂದೂರು ರವಿ ಹೆಗಡೆ ಅವರ ಹವ್ಯಕ ಭಾಷೆಯ ಸಂಭಾಷಣೆ ಪ್ರೇಕ್ಷಕರನ್ನು ರಂಜಿಸಿತು. ಇನ್ನು ಕಥಾ ಭಾಗದಲ್ಲಿ ಎಂ.ಎನ್.ನಾಯ್ಕ್, ಕಿಣಿ ರಾಮ, ಗಂಗಾ ಬೆಂಗಳೂರು, ಪ್ರವೀಣ್ ಪಟಗಾರ್ ಮುಂತಾದವರು ಅತ್ಯಮೋಘವಾಗಿ ಅಭಿನಯಿಸಿದರು. ಅದರಂತೆಯೇ ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಮಹಲೆ ಸಂಗಡಿಗರ ಸಂಗೀತ ನಾಟಕಕೆ ಮತ್ತಷ್ಟು ಮೆರಗು ತಂದಿತು.

ಕಲಾ ಪ್ರೋತ್ಸಾಹಕರು, ಊರನಾಗರಿಕರು ಯುವಕ ಸಂಘದ ಜೊತೆಗಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: