September 15, 2024

Bhavana Tv

Its Your Channel

ವಿವಿಧ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕರಿಂದ ಚಾಲನೆ

ಹೊನ್ನಾವರ:- 240 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಮತ್ತು 10 ಕೋಟಿ ರೂಪಾಯಿ ವೆಚ್ಚದಲ್ಲಿ 106 ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಇಡುಗುಂಜಿ ಕ್ರಾಸ್ ಬಳಿ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.
ಶರಾವತಿ ನದಿಯಿಂದ ತಾಲೂಕಿನ ಬಳ್ಕೂರು, ಮೇಲಿನ ಇಡಗುಂಜಿ, ಕಾಸರಗೋಡು, ಕೆಳಗಿನೂರು, ಕೊಡಾಣಿ, ಕುದ್ರಗಿ, ಮಾಗೋಡು, ನಗರಬಸ್ತಿಕೇರಿ, ಮಂಕಿ ಅನಂತವಾಡಿ, ಮಂಕಿ ಚಿತ್ತಾರ ಹಾಗೂ ಭಟ್ಕಳ ತಾಲೂಕಿನ ಬೇಂಗ್ರೆ, ಶಿರಾಲಿ, ಹೆಬಳೆ, ಬೈಲೂರು, ಮಾವಳ್ಳಿ, ಕಾಯ್ಕಿಣಿ, ಮಾರುಕೇರಿ, ಬೆಳ್ಕೆ, ಯಲ್ವಡಿಕವೂರ್, ಮುಟ್ಟಳ್ಳಿ, ಮುಂಡಳ್ಳಿ, ಕೊಣಾರ್ ಭಾಗಗಳ ಮನೆ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯದ ಕಾಮಗಾರಿ ಮತ್ತು ಮತ್ತು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಾದ್ಯಂತ 10 ಕೋಟಿ ರೂಪಾಯಿ ವೆಚ್ಚದಲ್ಲಿ 106 ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಈ ಭಾಗದ ನಿವಾಸಿಗಳ ಬಹು ವರ್ಷದ ಬೇಡಿಕೆಯನ್ನು ಮನ್ನಿಸಿ ಯೋಜನೆಗೆ ಅನುಮೋದನೆ ನೀಡಿದೆ. ಎರಡು ತಾಲೂಕಿನ ಅನೇಕ ಗ್ರಾಮದ ಕುಡಿಯುವ ನೀರು ಹಾಗೂ ಗ್ರಾಮೀಣ ರಸ್ತೆ ಮುಂದಿನ ದಿನದಲ್ಲಿ ನಿರ್ಮಾಣವಾಗಲಿದೆ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಕಿ ಮಾವಿನಕಟ್ಟೆಯಿಂದ ಇಡಗುಂಜಿ ಕ್ರಾಸ್ ವರೆಗೆ ದ್ವಿಚಕ್ರವಾಹನದ ಮೂಲಕ ಶಾಸಕ ಸುನೀಲ ನಾಯ್ಕ ಇವರನ್ನು ಬರಮಾಡಿಕೊಂಡಿರುವುದು ವಿಶೇಷವಾಗಿತ್ತು.

error: