September 16, 2024

Bhavana Tv

Its Your Channel

ಹೊನ್ನಾವರದಲ್ಲಿ ಕುಮಟಾ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್

ಹೊನ್ನಾವರ :- ಈ ಬಾರಿ ವಿಧಾನ ಸಭಾ ಚುನಾವಣೆ ಕರ್ನಾಟಕಕ್ಕೆ ಮಾತ್ರ ಮುಖ್ಯವಲ್ಲ. ಇಡೀ ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಲಿರುವ ಚುನಾವಣೆ ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.

ಬಿ.ಜೆ.ಪಿ ಪಾರ್ಟಿ ಹಾಳು ಬಿದ್ದ ಸ್ಮಶಾನದ ಬಗ್ಗೆ ಪಾಳು ಬಿದ್ದ ಮಸೀದಿಯ ಬಗ್ಗೆ, ಬಿದ್ದು ಹೋದ ದೇವಸ್ಥಾನದ ಬಗ್ಗೆ ಮಾತ್ರ ಮಾತನಾಡುತ್ತದೆ ವಿನಃ ಉದ್ಯೋಗವಿಲ್ಲದೇ ಮನೆಯಲ್ಲಿ ಕುಳಿತ ಪಧವೀದರರ ಕುರಿತು, ಅನಾರೋಗ್ಯ ಪೀಡಿತರ ಕುರಿತು, ಬೆಲೆ ಏರಿಕೆಯಿಂದ ಕಂಗಾಲಾದ ಜನರ ಕುರಿತು, ಮೂಲಭೂತ ಸೌಲಭ್ಯಗಳ ಕುರಿತು, ಅಭಿವೃದ್ಧಿ ಕುರಿತು ಮಾತನಾಡುವುದನ್ನು ಮರೆತು ಬಿಟ್ಟಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಮತದಾರ ಬಿ.ಜೆ.ಪಿ ಪಕ್ಷಕ್ಕೆ ತಕ್ಕ ಉತ್ತರ ಚುನಾವಣೆಯಲ್ಲಿ ನೀಡಲಿದ್ದಾನೆ ಎಂದರು.
ಬಿ.ಜೆ.ಪಿ ತಮ್ಮದು ಡಬಲ್ ಎಂಜಿನ್ ಸರ್ಕಾರ, ತಮ್ಮದು ಮಾದರಿ ಸರ್ಕಾರ ಎಂದು ಹೇಳುವ ಬೊಮ್ಮಾಯಿ ಸರ್ಕಾರ ೪೦% ಸರ್ಕಾರವಾಗಿದೆ. ಇತ್ತೀಚಿನ ವಿರೂಪಾಕ್ಷ ಮಾಡಳ ಅವರೇ ಬಿ.ಜೆ.ಪಿ ಪಕ್ಷದ ರೋಲ್ ಮೋಡಲ್ ಆಗಿದ್ದಾರೆ. ಡಬಲ್ ಎಂಜಿನ್ ಸರ್ಕಾರಕ್ಕೆ ಎಂಜಿನ್ ಇಲ್ಲಾ, ಡಬ್ಬಿಯೂ ಇಲ್ಲ. ಬರೀ ಬೊಬ್ಬೆ ಮಾತ್ರ ಎಂದು ಅವರು ವ್ಯಂಗ್ಯವಾಡಿದರು.
ಸುಳ್ಳು ಹೇಳಲು ಚತುರರಾದ ಬಿ.ಜೆ.ಪಿ. ಪಕ್ಷವು ಮುಸ್ಲಿಂರ ಮೀಸಲಾತಿ ಹಕ್ಕನ್ನು ಕಸಿದುಕೊಂಡು ಅಗ್ಗದ ಪ್ರಚಾರ ಪಡೆಯಲು ಮುಂದಾಗಿತ್ತು. ಆ ಸಮಯದಲ್ಲಿ ಸಂವಿಧಾನದ ೩೨ ಸಿ ನಿಯಮಗಳನ್ನು ಪಾಲಿಸಲು ಉದ್ಧೇಶಪೂರ್ವಕವಾಗಿ ಮರೆತುಬಿಟ್ಟಿತ್ತು. ಅದಕ್ಕೆ ಲೋಕ ಸಭೆಯಲ್ಲಿ, ನ್ಯಾಯಾಲಯದಲ್ಲಿ ಬಿಜೆಪಿ ಸರ್ಕಾರದ ಪರ ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂರ ಹಕ್ಕನ್ನು ಕಸಿದುಕೊಂಡು ಯಾರನ್ನೋ ಸಮಾಧಾನ ಮಾಡಲು ಹೋದ ಸರ್ಕಾರಕ್ಕೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಸಂವಿಧಾನಕ್ಕೆ ಸತತವಾಗಿ ಅಪಚಾರ ಮಾಡುತ್ತಿರುವ ಬಿ.ಜೆ.ಪಿ ಯನ್ನು ಸೋಲಿಸಿ, ಕಾಂಗ್ರೆಸ್ ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂದರು.
ನಿವೇದಿತ ಆಳ್ವಾ ಹೊರಗಿನವರಲ್ಲ. ಅವರು ಶಿರಸಿ, ಸಿದ್ಧಾಪುರದಲ್ಲಿ ತೊಡಗಿಕೊಂಡಿದ್ದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕುಮಟಾ – ಹೊನ್ನಾವರ ಕ್ಷೇತ್ರಕ್ಕೆ ಹಲವಾರು ಯೋಜನೆಯನ್ನು ನೀಡಿದ್ದಾರೆ. ಸತತ ಸ್ಥಳೀಯ ಮುಖಂಡರ ಜೊತೆ, ಕಾರ್ಯಕರ್ತರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಪತ್ರಕರ್ತರ ಪ್ರಶ್ನೆಗೆ ವಿವರಿಸಿದರು.
ಕ್ಷೇತ್ರದಲ್ಲಿ ಭಂಡಾಯ, ಭಿನ್ನ ಮತ ಇಲ್ಲ. ಸ್ವತಃ ಟಿಕೇಟ್ ಆಕಾಂಕ್ಷಿ ಮಂಜುನಾಥ ನಾಯ್ಕ ಸಹಿತವಾಗಿ ನಿವೇದಿತ್ ಆಳ್ವಾರನ್ನು ಬೆಂಬಲಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಬಹುಸಂಖ್ಯಾತರೆAದು ನಾಮಧಾರಿ, ಈಡಿಗ ಸಮಾಜದವರನ್ನು ಹೇಳಲಾಗುತ್ತದೆ. ನಿಜ. ಆದರೆ ಪಕ್ಷ ಮುಂದಿನ ದಿನಗಳಲ್ಲಿ ಅದನ್ನು ಪರಿಗಣಿಸಿ ನೀಡಬೇಕಾದ ಅವಕಾಶಗಳನ್ನು ಅವರಿಗೆ ನೀಡುತ್ತದೆ. ಪಕ್ಷವು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಸಿದ್ಧಾಂತ ಹೊಂದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುರೇಶ ಮೇಸ್ತ ವಂದಿಸಿದರು.
ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಮೂರ್ತಿ, ವಿ.ಎಸ್.ಆರಾಧ್ಯ, ಕೆ.ಪಿ.ಸಿ.ಸಿ ಸದಸ್ಯ ಎಂ.ಎನ್.ಸುಬ್ರಹ್ಮಣ್ಯ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಸಂಯೋಜಕ ಮಂಜುನಾಥ ನಾಯ್ಕ, ಕುಮಟಾ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಸತೀಶ ನಾಯ್ಕ, ಸೇವಾ ದಳದ ಕೃಷ್ಣ ಮಾರಿಮನೆ, ಬಾಲಚಂದ್ರ ಮಾಳ್ಕೋಡ, ಜಕ್ರಿಯಾ ಶೇಖ್, ಕೃಷ್ಣ ಹರಿಜನ ಇನ್ನಿತರರು ಉಪಸ್ಥಿತರಿದ್ದರು

error: