April 26, 2024

Bhavana Tv

Its Your Channel

ಕುಮಟಾ ತಾಲೂಕಿನ ಹಳದಿಪುರದಲ್ಲಿ ಸೇಫ್ ಸ್ಟಾರ್ ಸೌಹಾರ್ದ 16ನೇ ಶಾಖೆ ಚಾಲನೆ

ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಸಹಕಾರಿ ಸಂಸ್ಥೆಯಾದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 16ನೇ ಶಾಖೆಯನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ದಿನಕರ ಶೆಟ್ಟಿ ಉದ್ಘಾಟಿಸಿದರು

ಕುಮಟಾ ತಾಲೂಕಿನ ಹಳದಿಪುರದಲ್ಲಿ ಸೇಫ್ ಸ್ಟಾರ್ ಸೌಹಾರ್ದ 16ನೇ ಶಾಖೆಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಭದ್ರತಾ ಕೊಠಡಿಯನ್ನು ಸಹಕಾರಿಯ ಸದಸ್ಯ ರಾಷ್ಟçಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಸ್. ಎಸ್. ಭಟ್ಟ ಲೋಕೇಶ್ವರ ಉದ್ಘಾಟಿಸಿದರು. ಲಕ್ಷಿö್ಮÃ ಪೂಜೆ ಮಾಡುವುದರ ಮೂಲಕ ವ್ಯವಹಾರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಶಾಸಕರು ಸೇಫ್ ಸ್ಟಾರ್‌ನ 2 ಹಾಗೂ 3ನೇ ಶಾಖೆ ಉದ್ಘಾಟನೆಗೆ ಆಗಮಿಸಿದ್ದನ್ನು ನೆನಪಿಸಿಕೊಂಡು ಸಹಕಾರಿಯ ಏಳ್ಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು. ಸಂಸ್ಥೆಯ ಅಧ್ಯಕ್ಷರಾದ ಜಿ.ಜಿ.ಶಂಕರ ಇವರು ಆಗಮಿಸಿದ ಎಲ್ಲಾ ಶೇರು ಸದಸ್ಯರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ 2011ರಲ್ಲಿ ಪ್ರಾರಂಭಗೊAಡ ಸಂಸ್ಥೆ ಕೇವಲ 12 ವರ್ಷದಲ್ಲಿ ಮಹತ್ತರ ಸಾಧನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೆಯಾದ ವಿಶಿಷ್ಠ ಕೊಡುಗೆಯನ್ನು ನೀಡಿದ ಈ ಸಂಸ್ಥೆ ಇತರ ಸಂಸ್ಥೆಗಿAತ ಭಿನ್ನವಾಗಿದೆ. ಸುಮಾರು 50 ಸಾವಿರ ಸದಸ್ಯರನ್ನು ಹೊಂದಿದ್ದು ರೂ85 ಕೋಟಿ ಠೇವಣಿ, ರೂ71 ಕೋಟಿ ಸಾಲ ನೀಡುವದರೊಂದಿಗೆ ರೂ 156ಕೋಟಿ ವ್ಯವಹಾರ ಮಾಡಿದೆ. ರೂ 95 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ರೂ1.64 ಕೋಟಿ ಲಾಭಗಳಿಸಿದೆ. ಅಲ್ಲದೇ ಶೇ92ರಷ್ಟು ವಸೂಲಾತಿ ಆಗಿರುತ್ತದೆ. ಸಹಕಾರಿಯ ತತ್ವ ಹಾಗೂ ಸಹಕಾರಿ ನಿಯಮಗಳಿಗೆ ನೂರು ಪ್ರತಿಶತ ಬಧ್ಧರಾಗಿರುವ ಸಂಸ್ಥೆ ಇದಾಗಿದ್ದು ಇದಕ್ಕೆ ನಿರ್ದೇಶಕರು ಹಾಗೂ ಪ್ರಧಾನ ಕಛೇರಿಯ ಆಡಳಿತ ಸಿಬ್ಬಂದಿ ಕಾರಣಕರ್ತರಾಗಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಉಡುಪಿ ಜಿಲ್ಲೆಯ ಬೈಂದೂರು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಾಖೆ ತೆರೆಯಲು ಸಾಧ್ಯವಾಗಿದೆ ಎಂದರು. ಸಹಕಾರಿಯ ಜನ್‌ರಲ್ ಮೇನೆಜರ್ ಮಹೇಶ ಶೆಟ್ಟಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ನಿರ್ದೇಶಕ ಜಿ.ಆರ್.ಹೆಗಡೆ ಪ್ರಾಸ್ತಾವಿಕ ಮಾತಾನಾಡುತ್ತ ಸಹಕಾರಿಯು ಹುಟ್ಟಿ ನಡೆದು ಬಂದ ದಾರಿ ವಿವರಿಸುತ್ತ, ಸಹಕಾರಿಯ ವಿವಿಧ ಪರಿಹಾರ ಯೋಜನೆಗಳಿಂದ ಆರ್ಥಿಕವಾಗಿ ಭದ್ರತೆಗೆ ಒಳಪಡಲು ಕೋರಿದರು.
ನಿರ್ದೇಶಕ ವಿ.ಎಸ್. ಕಿಮಾನಿಕರ, ಬಿಡಿಸಿ ನಿರ್ದೇಶಕ ರಾಮಚಂದ್ರ ಹಳಕಾರ, ಜಿ.ವಿ. ಹೆಗಡೆ ಹಾಗೂ ಸದಸ್ಯ ಗೋವಿಂದ ಜೋಷಿ ಮಾತನಾಡಿದರು. ಮಂಕಿ ಶಾಖೆ ಮೇನೆಜರ್ ಜೀವನ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗರಾಜ ಇಂದ್ರ, ನಿರ್ದೇಶಕರಾದ ಪಾತ್ರೋನ್ ಫರ್ನಾಂಡಿಸ್, ಎಸ್.ಎನ್. ಭಟ್ಟ, ಎಲ್.ಜೆ. ಪಟಗಾರ್, ನಾಗೇಶ ದೇವಾಡಿಗ, ಎನ್.ಟಿ. ಪಟಗಾರ, ರಾಜೇಶ ದೇಸಾಯಿ, ಗುಣಮಾಲ ಇಂದ್ರ, ಗೋಪಾಲಕೃಷ್ಣ ಭಟ್ಟ ಹಾಗೂ ಪ್ರಧಾನ ಕಛೇರಿ ಅಧಿಕಾರಿಗಳಾದ ಎ.ಜಿ.ಎಮ್. ಎಡ್ವಿನ್ ರೆಬೆಲ್ಲೊ, ಚೀಫ್ ಮೆನೇಜರ್ ವಸಂತ ನಾಯ್ಕ, ಆಂತರಿಕ ಲೆಕ್ಕಪರಿಶೋಧಕ ನರೇಂದ್ರ ಪ್ರಭು, ಐಟಿ ಮೆನೇಜರ್ ವಿಘ್ನೇಶ್ವರ ಹೆಗಡೆ, ಶಾಖೆಯ ಬಿ.ಡಿ.ಸಿ ನಿರ್ದೇಶಕರಾದ ಶ್ರೀಪಾದ ಭಟ್ಟ, ಗಣೇಶ ಪ್ರಭು, ಅಚ್ಯುತ ಶಾನಭಾಗ, ನೂತನ ಶಾಖೆ ಕಟ್ಟಡ ಮಾಲಿಕ ದಾಮೋದರ ಶಾನಭಾಗ, ವಿಶ್ವಕರ್ಮ ನಾಗರಾಜ ಆಚರ‍್ಯ ಉಪಸ್ಥಿತರಿದ್ದರು.

ಈ ಶುಭ ಸಂದರ್ಭದಲ್ಲಿ ಸಹಕಾರ ಭಾರತಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿಯ ಅಧ್ಯಕ್ಷ ಶ್ರೀ ಜಿ.ಜಿ. ಶಂಕರ ಅವರನ್ನು ಸಹಕಾರಿಯ ವತಿಯಿಂದ ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು.
ಸಹಕಾರಿಯ ಕೋ-ಆರ್ಡಿನೇಟರ್ ಮಾದೇವ ನಾಯ್ಕ, ಫೀಲ್ಡ್ ಎಕ್ಸಿಕ್ಯೂಟಿವ್ ನಯನಾ ಪಟಗಾರ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

error: