May 16, 2024

Bhavana Tv

Its Your Channel

ಸಿಲಿನ್ ಫರ್ನಾಂಡೀಸ್ ಹೃದಯಾಘಾತದಿಂದ ನಿಧನ.

ಹೊನ್ನಾವರ: ಕೈಸ್ತ ಸಮುದಾಯದ ವಿವಿಧ ಸಂಘಟನೆಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದ ಸಿಲಿನ್ ಫರ್ನಾಂಡೀಸ್ ( 69) ಇವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಮಾಸೇವೆ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ಸನ್ ಸಾಲ್ವೊದರ್
ಚರ್ಚ್ ಕಮೀಟಿ ಸದಸ್ಯರಾಗಿಯು ಸೇವೆ ಸಲ್ಲಿಸುತ್ತಿದ್ದರು. ಮೃತರು ಮೂವರು ಪುತ್ರಿಯರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಮುಂಜಾನೆ 9;30 ಹೊನ್ನಾವರ ಪಟ್ಟಣದ ಕ್ರಿಶ್ಚಿಯನ್ ಸಂಪ್ರದಾಯದAತೆ ನಡೆಯಲಿದೆ. ಇವರ ನಿಧನಕ್ಕೆ ಬಿಷಪ್ ಡೇರಿಕ್ ಫರ್ನಾಂಡೀಸ್, ಆರ್ಚ್ ಬಿಷಪ್ ಪೀಟರ್ ಮಚಾಡೋ, ಸೆಂಟ್ ಮಿಲಾಗ್ರಿಸ್ ಸೌಹಾರ್ದ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ವಿ.ಕೇರ್ ಸೌಹಾರ್ದ ಸೊಸೈಟಿ ಅಧ್ಯಕ್ಷ ಸ್ಟೀಪನ್ ರೊಡ್ರಗೀಸ್, ಸಿ.ಎ.ಡಿ.ಕೆ ಹೊನ್ನಾವರ ಅಧ್ಯಕ್ಷ ಹೆನ್ರಿ ಲಿಮಾ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ ಲೋಪೀಸ್ ಸಂತಾಪ ಸೂಚಿಸಿದ್ದಾರೆ.

error: