April 29, 2024

Bhavana Tv

Its Your Channel

ಅಪರಾಧ ಚಟುವಟಿಕೆ ಹೆಚ್ಚಲು ಕಾರಣವಾಗುತ್ತಿದೆಯಾ? ಅಕ್ರಮ ಮರಳು ಗಣಿಗಾರಿಕೆ,

ಹೊನ್ನಾವರ ; ಹೊನ್ನಾವರ ತಾಲೂಕಿನ ಶರಾವತಿ ನದಿಯಿಂದ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆ ಕಳೆದ ಆರು ತಿಂಗಳಿAದ ಅಪರಾಧ ಚಟುವಟಿಕೆ ಹೆಚ್ಚಲು ಕಾರಣವಾಗುತ್ತಿದೆಯಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.

ಹಲ್ಲೆ ,ಮರಳು ವ್ಯವಹಾರಕ್ಕೆ ಸಂಭದಿಸಿದAತೆ ಹತ್ಯೆ, ವಾಹನ ಹರಿದು ಸಾವು ಹೀಗೆ ಕಳೆದ ಆರು ತಿಂಗಳಿನಲ್ಲೆ ಹಲವು ಇಂತಹ ಪ್ರಕರಣ ಹೊನ್ನಾವರ ಮಂಕಿ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿದೆ. ಇನ್ನು ಹಲವು ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿದೆ. ಹಲವು ಪ್ರಕರಣಕ್ಕೆ ಸಾಕ್ಷಿಯಾಗುತ್ತಿರುವ ಇಂತಹ ಪ್ರಕರಣ ಮಟ್ಟ ಹಾಕಲು ಪೊಲೀಸ್ ಇಲಾಖೆಯು ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಕಂದಾಯ, ಗಣಿ, ಅರಣ್ಯ, ಪೊಲೀಸ್ ಇಲಾಖೆಯ ಸಾಕಷ್ಟು ಅಧಿಕಾರಿಗಳು ಸಿಬ್ಬಂದಿಗಳು ಇದ್ದರೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
ಇಷ್ಟೆ ಆದರೂ ಜನರು ತಲೆ ಕೆಡಿಸಿಕೊಳ್ಳುತ್ತಿರಲ್ಲ. ರಾತ್ರಿ ಸಮಯದಲ್ಲಿ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆ ಮೂಲಕ ಸಾಗುವ ಮರಳು ವಾಹನಗಳು ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ, ಅಕ್ರಮ ಮರಳುಸಾಗಾಟ ಮಾಡುತಿದ್ದ ಟಿಪ್ಪರ್ ಹರಿದು ಯುವಕ ಸಾವುಕಂಡ ಘಟನೆ ಹೊನ್ನಾವರ ತಾಲೂಕಿನ ಕರಿಕುರ್ವಾ ಸಮೀಪ ನಡೆದಿದೆ.

ಹಡಿನಬಾಳ ನಿವಾಸಿ  ದರ್ಶನ್ ಗೌಡ ಮೃತ ಯುವಕನಾಗಿದ್ದು ಇತನು ಅಳ್ಳಂಕಿ ಕಾಲೇಜಿನಲ್ಲಿ ಪಿ.ಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ, ಮನೆಯ ಜವಾಬ್ದಾರಿ ಹೊತ್ತ ಯುವಕ ಶಾಲಾ ಬಿಡುವಿನ ಸಮಯದಲ್ಲಿ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ನಿರ್ವಹಿಸುತಿದ್ದ ಎನ್ನಲಾಗಿದೆ. ಶುಕ್ರವಾರ ತಡರಾತ್ರಿ ಕರಿಕುರ್ವದ ಶರಾವತಿ ನದಿ ತೀರದ ಭಾಗದಲ್ಲಿ ಅಕ್ರಮವಾಗಿ ಮರುಳುಗಾರಿಕೆ ನಡೆಯುತ್ತಿದು ಇಲ್ಲಿಗೆ ಲಾರಿಗೆ ಮರಳು  ತುಂಬುವ  ಕಲಸಕ್ಕೆ ತೆರಳಿದ್ದ ಎಂದು ಹೇಳಲಾಗುತ್ತಿದೆ,   ದಿಬ್ಬದ ಬಳಿ ಕುಳಿತ ಯುವಕನ ಮೇಲೆ ವಾಹನ ಚಾಲಕ  ಮಾರುತಿ ಗೌಡ ಇವರು ವೇಗವಾಗಿ  ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ ಎಂದು ಇತನೊಂದಿಗೆ ಇದ್ದ ಸ್ನೇಹಿತರು ತಿಳಿಸಿದ್ದಾರೆ. ಈ ಸಂಭದ  ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲಕೋಡ್ ಹೊನ್ನಾವರ

error: