April 27, 2024

Bhavana Tv

Its Your Channel

ಕುಮಟಾ ಅಘನಾಶಿನಿ ನದಿ ತೀರದಲ್ಲಿ ಪ್ರವಾಹ; ನದಿ ತೀರದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ

ಕುಮಟಾ : ಶಿರಸಿ, ಸಿದ್ದಾಪುರದಲ್ಲಿ ನಿರಂತರವಾಗಿ ಮಳೆಯಾದ ಪರಿಣಾಮ ಅಘನಾಶಿನಿಗೆ ನದಿಯ ನೀರು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಕುಮಟಾ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ

ಹೆಗಡೆ ಗ್ರಾಮದ ನದಿಯಂಚಿನ ಕೆಲವು ಕುಟುಂಬಗಳು ಮೇಲ್ಭಾಗದ ಸಂಬAಧಿಕರ ಮನೆಗಳಿಗೆ ತೆರಳಿದ್ದಾರೆ. ನದಿಯಂಚಿನ ದೀವಗಿ, ಮಿರ್ಜಾನ ಗ್ರಾಮಗಳ ಜನವಸತಿ ಪ್ರದೇಶಗಳು ಜಲಾವೃತವಾದವು. ‘ನೀರು ನುಗ್ಗಿದರೆ ತಕ್ಷಣ ಸಮೀಪದ ಪರಿಹಾರ ಕೇಂದ್ರಕ್ಕೆ ಕರೆ ತರಲಾಗುವುದು. ದ್ವೀಪ ಗ್ರಾಮವಾದ ಐಗಳಕುರ್ವೆಯ ಜನರು ಸುರಕ್ಷಿತ ಸ್ಥಳಕ್ಕೆ ಕರೆ ತರಲು ದೋಣಿ ಇಡಲಾಗಿದೆ’ ಎಂದು ಹೆಗಡೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಇನ್ನೂ ನಾಡ ದೋಣಿ ಯಲ್ಲಿ ಶಾಸಕ ದಿನಕರ ಶೆಟ್ಟಿ ಮನೆಗೆ ನೀರು ನುಗ್ಗಿದ ಜಾಗಕ್ಕೆ ತೆರಳಿ ಪರಿಶೀಲನೆ ಮಾಡಿದರು.


ಶಿರಸಿ, ಕುಮಟಾ ನಡುವಿನ ಕತಗಾಲದಲ್ಲಿ ಚಂಡಿಕಾ ಹೊಳೆ ಉಕ್ಕಿ ಹರಿಯಿತು. ಇದರ ಪರಿಣಾಮ ರಾಜ್ಯ ಹೆದ್ದಾರಿಯ ಮೇಲೆ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿದೆ.ಈ ವೇಳೆ ಸಿ ಪಿ ಐ ಪ್ರಕಾಶ್ ನಾಯ್ಕ್. ಪಿ ಎಸ್ ಐ ಆನಂದಮೂರ್ತಿ ಸುಧಾ ಹರಿಕಾಂತ್ ಅಗ್ನಿಶಾಮಕ್ ಸಿಬ್ಬಂದಿ ಇದ್ದರು ಜನರನ್ನು ಸುರಕ್ಷಿತ ಜಾಗಕ್ಕೆ ಕರೆ ತರಲು ಹರ ಸಾಹಸ ಪಟ್ಟರು


ವರದಿ: ನಟರಾಜ ಗದ್ದೆಮನೆ

error: