May 20, 2024

Bhavana Tv

Its Your Channel

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕುಮಟಾ : “ನಮ್ಮ ಕನ್ನಡ ಭಾಷೆಯಲ್ಲಿಯೇ ತಿಳಿಯಲಾರದಷ್ಟು ವಿಷಯಗಳಿರುವಾಗ ಸಾಹಿತ್ಯವಿರುವಾಗ ಪರದೇಶಿ ಭಾಷೆಗಳ ವ್ಯಾಮೋಹ ಕಂಡು ಮನಸ್ಸು ವ್ಯಥೆ ಪಡುತ್ತದೆ. ಯಾವ ಭಾಷೆ ಇರಲಿ ಆ ಭಾಷೆಗಳ ಒಟ್ಟಿಗೆ ಅಲ್ಲಿಯ ಸಂಪ್ರದಾಯ, ಸಂಸ್ಕೃತಿಗಳು ಹಾಸು ಹೊಕ್ಕಾಗಿವೆ, ಆದ್ದರಿಂದ ನಮ್ಮ ಕನ್ನಡ ಮಾತೃ ಭಾಷೆಯಲ್ಲಿರುವ ಸಂಸ್ಕೃತಿ ಆಚಾರ-ವಿಚಾರ ನಡೆ-ನುಡಿಗಳನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕೆಂದು” ಮುಖ್ಯಾಧ್ಯಾಪPರಾದÀ ರೋಹಿದಾಸ ಗಾಂವಕರ ಹೇಳಿದರು. ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು.ಹಿರೇಗುತ್ತಿ, “ಈ ನೆಲದ ದೇಶಿ ಭಾಷೆಯ ಸೊಗಡು ಮತ್ತು ಸಂಸ್ಕೃತಿಯ ಸೌರಭ ಸಂಕೇತಿಸುವAತೆ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ ೦೧,೧೯೭೩ ರಂದು ಮರುನಾಮಕರಣ ಮಾಡಲಾಯಿತು” ಎಂದರು. ವಿದ್ಯಾರ್ಥಿಗಳಿಗೆ ಗಾಳಿಪಟ ಮತ್ತು ರಂಗೋಲಿ ಸ್ಪರ್ಧೆ, ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಮಹಾದೇವ ಗೌಡ, ಬಾಲಚಂದ್ರ ಹೆಗಡೇಕರ, ನಾಗರಾಜ ನಾಯಕ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ವಿ ನಾಯಕ ಕವಿತಾ ಅಂಬಿಗ,ಸುಮನ್ ಫರ್ನಾಂಡೀಸ್, ವಸಂತಬಾಯಿ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ, ಉಪಸ್ಥಿತರಿದ್ದರು. ಎನ್ ರಾಮು ಹಿರೇಗುತ್ತಿ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು.
ವರದಿ:ಎನ್.ರಾಮು.ಹಿರೇಗುತ್ತಿ.

error: