May 3, 2024

Bhavana Tv

Its Your Channel

ಮರಾಕಲ್ ಕುಡಿಯುವ ನೀರಿನ ಮುಖ್ಯ ಪೈಪ್‌ಗೆ ಹಾನಿ, ಕುಮಟಾ-ಹೊನ್ನಾವರಕ್ಕೆ ಮೂರು ದಿನ ನೀರಿನ ಪೂರೈಕೆ ಸ್ಥಗಿತ.

ಕುಮಟಾ ಪಟ್ಟಣದ ಹೆರವಟ್ಟಾದ ರೈಲ್ವೆ ಸೇತುವೆ ಬಳಿ ವಿದ್ಯುತ್ ಕಂಬ ಅಳವಡಿಸುತ್ತಿರುವಾಗ ಮರಾಕಲ್ ಕುಡಿಯುವ ನೀರಿನ ಮುಖ್ಯ ಪೈಪ್‌ಗೆ ಹಾನಿ, ಕುಡಿಯುವ ನೀರು ಪೋಲಾಗುವುದರ ಜೊತೆಗೆ ಕುಮಟಾ-ಹೊನ್ನಾವರಕ್ಕೆ ಮೂರು ದಿನಗಳು ನೀರಿನ ಪೂರೈಕೆ ಸ್ಥಗಿತ.

ಕುಮಟಾ ಹೆರವಟ್ಟಾದ ರೈಲ್ವೆ ಸೇತುವೆ ಬಳಿಯ ಹಳೇಯ ವಿದ್ಯುತ್ ಕಂಬ ತೆಗೆದು, ಹೊಸ ಕಂಬ ಅಳವಡಿಸುವ ಸಂಬAಧ ಹೆಸ್ಕಾಂನವರು ಜೆಸಿಬಿ ಮೂಲಕ ಕಾಮಗಾರಿ ಕೈಗೊಂಡಿದ್ದರು. ಕಂಬ ಅಳವಡಿಸಲು ಹೊಂಡ ತೆಗೆಯುವ ಸಂದರ್ಭ ಹೆಸ್ಕಾಂನವರ ಬೇಜವಾಬ್ದಾರಿಯಿಂದ ಕುಮಟಾ-ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮರಾಕಲ್ ಯೋಜನೆಯ ಮುಖ್ಯ ಪೈಪ್‌ಗೆ ಹಾನಿಯಾಗಿದೆ. ಇದರಿಂದ ಕುಡಿಯುವ ನೀರು ಪೋಲಾಗಿದ್ದರಿಂದ ಆ ಭಾಗ ಜಲಾವೃತಗೊಂಡAತೆ ಭಾಸವಾಗುತ್ತಿತ್ತು. ಅಷ್ಟು ಪ್ರಮಾಣ ನೀರು ಸೋರಿಕೆಯಾಯಿತು. ರಸ್ತೆಯೂದ್ದಕ್ಕೂ ನೀರು ತುಂಬಿಕೊAಡಿದ್ದ ರಿಂದ ಆ ರಸ್ತೆಯಲ್ಲಿ ಸಂಚರಿಸುವ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಭಯಗೊಳ್ಳುವಂತಾಯಿತು. ಈ ನೀರಲ್ಲೆ ವಾಹನ ಚಲಿಸುವಾಗ ಚಿಮ್ಮುವ ನೀರು ಪಾದಾಚಾರಿಗಳ ಬಟ್ಟೆ ಒದ್ದೆಯಾಗುವಂತಾಯಿತು. ಈ ಘಟನೆಯಿಂದ ಚಂದಾವರ ಭಾಗದ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಈ ಬಗ್ಗೆ ಮಾಹಿತಿ ಪಡೆದ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ ಗೋವಿಂದ ನಾಯ್ಕ, ಮುಖ್ಯಾಧಿಕಾರಿ ಸುರೇಶ ಎಂ ಕೆ ಮತ್ತು ಹೆಸ್ಕಾಂ ಅಧಿಕಾರಿ ವಿಜಯ ತೋಡೂರ್ ಅವರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕುಮಟಾ-ಹೊನ್ನಾವರ ಪಟ್ಟಣಕ್ಕೆ ಸರಬರಾಜಾಗುವ ನೀರಿನ ಪೈಪ್ ಒಡೆದುಹೋಗಿದ್ದರಿಂದ ಮೂರುನಾಲ್ಕು ದಿನಗಳು ಜನರಿಗೆ ತೊಂದರೆಯಾಗಲಿದೆ. ಹಾಗಾಗಿ ಪುರಸಭೆಯು ಅಗತ್ಯ ಕಾಮಗಾರಿ ಕೈಗೊಂಡು ಶೀಘ್ರ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಕುಮಟಾ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಮಾತನಾಡಿ, ಹೆಸ್ಕಾಂನವರು ನಡೆಸಿದ ಕಾಮಗಾರಿಯಿಂದ ನೀರಿನ ಪೈಪ್‌ಗೆ ಹಾನಿಯಾಗುವ ಜತೆಗೆ ಕುಮಟಾ-ಹೊನ್ನಾವರ ಪಟ್ಟಣಕ್ಕೆ ಮೂರು ದಿನಗಳು ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ. ಜನರು ಸಹಕಾರ ನೀಡುವಂತೆ ಮನವಿ ಮಾಡಿದರು.

error: