May 18, 2024

Bhavana Tv

Its Your Channel

ಆರೋಗ್ಯವೇ ನಿಜವಾದ ಸಂಪತ್ತು: ಡಾ. ನಾಗರಾಜ್ ಭಟ್.

ಕುಮಟದ ಸ್ಥಳೀಯ ಪ್ರಗತಿ ವಿದ್ಯಾಲಯ ಆಂಗ್ಲಮಾಧ್ಯಮ ಶಾಲೆಯಲ್ಲಿ ದಿನಾಂಕ ೧೬ / ೦೭ / ೨೦೨೨ ರಂದು ಮಕ್ಕಳ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕುಮಟಾ ; ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ನಾಗರಾಜ ಭಟ್ಟ ಇವರು ಆಗಮಿಸಿ ಮಕ್ಕಳಲ್ಲಿ ಆರೋಗ್ಯದ ಕುರಿತು ಜಾಗೃತಿ ಉಂಟುಮಾಡಿದರು. ಮಕ್ಕಳ ಆರೋಗ್ಯ, ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಬಗ್ಗೆ ವಿಶೇಷ ವಿವರಣೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು. ಆರೋಗ್ಯವೇ ನಮ್ಮ ನಿಜವಾದ ಸಂಪತ್ತು ಅದನ್ನು ಕಾಪಾಡಿಕೊಳ್ಳುವ ಮಾರ್ಗವನ್ನು ಬಾಲ್ಯದಿಂದಲೇ ರೂಡಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸಿದರು. ಪಾಶ್ಚಿಮಾತ್ಯ ಆಹಾರ ಪದ್ಧತಿಯ ಅನುಸರಣೆಯಿಂದ ಬರುವ ರೋಗಗಳ ಬಗ್ಗೆ ಉದಾಹರಣೆಯೊಂದಿಗೆ ತಿಳಿಸಿಕೊಟ್ಟರು. ಪರಿಸರ ಮತ್ತು ನೀರಿನ ಸ್ವಚ್ಛತೆಯ ಬಗ್ಗೆ ಹಾಗೂ ಅದರ ಕಲುಷಿತ ವ್ಯವಸ್ಥೆಯಿಂದ ಬರುವ ರೋಗಗಳ ಬಗ್ಗೆ ಮಕ್ಕಳೊಡನೆ ಚರ್ಚಿಸಲಾಯಿತು.
ಈ ಎಲ್ಲ ವಿಷಯಗಳ ಮೇಲೆ ಜಾಗೃತಿ ಮೂಡಿಸಿ ಮಕ್ಕಳ ಮನಸ್ಸನ್ನು ಸೆಳೆದರು. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಮನೆಮದ್ದು ಬಳಕೆಯ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳ ಸದ್ಯದ ಸಮಸ್ಯೆಗಳಿಗೆ ಧ್ವನಿಯಾದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಆರೋಗ್ಯ ವಿಭಾಗದ ಸಂಚಾಲಕರಾದ ಡಾ. ಶ್ರೀಧರ ಭಟ್ಟ ಉಪಸ್ಥಿತರಿದ್ದು, ಅವಲೋಕಿಸಿ ಕಾರ್ಯಕ್ರಮದ ಔಚಿತ್ಯ ವಿವರಿಸಿದರು.
ಸಭೆಯಲ್ಲಿ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರಾದ ಜಿ.ವಿ.ಹೆಗಡೆ ಉಪಸ್ಥಿತರಿದ್ದರು.
ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಭಟ್ಟ ಸ್ವಾಗತಿಸಿದರು. ವಿದ್ಯಾರ್ಥಿನಿ ಕುಮಾರಿ ಮಾನ್ಯ ಗುನಗಾ ವಂದಿಸಿದಳು. ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಹಾಗೂ ವಿದ್ಯಾ ನಿರೂಪಿಸಿದರು.

error: