May 18, 2024

Bhavana Tv

Its Your Channel

ಕುಮಟಾದಲ್ಲಿ ವ್ಯಾಪಕ ಮಳೆ, ಚಂದಾರವ ಚಂದ್ರಪ್ರಭ ಹೊಳೆ ನೀರಿನ ಮಟ್ಟ ಏರಿಕೆ, ತೀರಪ್ರದೇಶದ ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ,

ಕುಮಟಾ ; ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಂದಾವರದ ಚಂದ್ರಪ್ರಭಾ ಹೊಳೆಯ ನೀರಿನ ಮಟ್ಟ ಹೆಚ್ಚಿದ ಪರಿಣಾಮ ಹೊಳೆಯ ತೀರದ ಪ್ರದೇಶಗಳಾದ ಹಿರೇಕಟ್ಟು, ಹೆಬಳೆಹಿತ್ತಲ,ದಾದುಮನೆ ಕೇರಿ ಭಾಗದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಆ ಭಾಗದ ಗ್ರಾಮಸ್ಥರನ್ನು ದೋಣಿಯ ಮೂಲಕ ಕಾಳಜಿ ಕೇಂದ್ರಕ್ಕೆ ತರಲಾಯಿತು. ಈ ವೇಳೆ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಜನರಿಗೆ ದೈರ್ಯ ತುಂಬುವ ಕಾರ್ಯ ಮಾಡಿದರು. ನಂತರ ಮಾತನಾಡಿದ ಅವರು. ಹಿರೇಕಟ್ಟು ಭಾಗವು ದ್ವೀಪದ ಪ್ರದೇಶವಾಗಿದೆ. ಬಡಗಣಿ ನದಿಯ ಎಡದಂಡೆ ಮತ್ತು ಬಲದಂಡೆಗೆ ೭ ಮೀಟರ್ ನಷ್ಟು ಎತ್ತರದ ತಡೆಗೋಡೆ ನಿರ್ಮಾಣವಾದರೆ, ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲವಾಗಿತ್ತು. ಈಗ ಜನಪ್ರತಿನಿಧಿಗಳು ಪ್ರಯತ್ನಿಸಬೇಕು, ಹೊಳೆಯ ಭಾಗದದಲ್ಲಿ ವೈಜ್ಞಾನಿಕವಾಗಿ ೯ ಕಟ್ಟುಗಳನ್ನು ಮಾಡಿದರೆ ಈ ಭಾಗದ ನೀರಾವರಿ ಯೋಜನೆಗೂ ಸಾದ್ಯವಾಗುತ್ತದೆ, ಪ್ರವಾಹ ಬಂದ ತಕ್ಷಣವೇ ಗ್ರಾಮಪಂಚಾಯತ ಸದಸ್ಯರು, ಅಧ್ಯಕ್ಷರು, ಹಾಗೂ ಅಧಿಕಾರಿಗಳು ಜನರ ನೆರವಿಗೆ ಧಾವಿಸಿದ್ದಾರೆ, ಕಾಳಜಿ ಕೇಂದ್ರಕ್ಕೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.
ನೆರೆಹಾವಳಿ ಬಂದ ತಕ್ಷಣ ನಮಗೆ ಕರೆ ಮಾಡಿದಾಗ, ದೋಣಿ ವ್ಯವಸ್ಥೆಯನ್ನು ಮಾಡಿಸಿ, ಜನರ ನೆರವಿಗೆ ಸ್ವಂದಿಸುವ ಕೆಲಸ ಮಾಡಿದ್ದೇವೆ. ಈ ವೇಳೆ ಎಲ್ಲಾ ಗ್ರಾ.ಪಂ ಸದಸ್ಯರು, ಹಾಗೂ ಸಾರ್ವಜನಿಕರು ಹಾಗೂ ಅಧಿಕಾರಿಗಳು ಉತ್ತಮವಾಗಿ ಸ್ವಂದಿಸುವ ಕೆಲಸ ಮಾಡಿದ್ದಾರೆ ಎಂದು ಕೂಜಳ್ಳಿ ಗ್ರಾ.ಪಂ ಸದಸ್ಯರಾದ ಗಜಾನನ ನಾಯ್ಕ ಹೇಳಿದರು.

ಈ ಸಂದರ್ಭಧಲ್ಲಿ ಗ್ರಾ.ಪಂ ಸದಸ್ಯರಾದ ವೈಭವ ನಾಯ್ಕ, ಮಾಜಿ ಜಿ.ಪಂ ಸದಸ್ಯರಾದ ಶಂಕರ್ ಅಡಿಗುಂಡಿ, ವೀಣಾ ನಾಯ್ಕ, ಪಂಚಾಯತ ಅಭಿವೃದ್ದಿ ಅಧಿಕಾರಿ ನಾಗರಾಜ್ ನಾಯ್ಕ, ಕಾರ್ಯದರ್ಶಿ ಮಾಲತಿ ನಾಯ್ಕ, ಆರ್.ಆಯ್ ಕೆ.ವಾಯ್. ಪಾಟೀಲ್, ನೋಡಲ್ ಅಧಿಕಾರಿ ಮಣಿಕಂಠ ಪೂಜಾರಿ, ಗ್ರಾಮ ಸೇವಕ, ನಾಗೇಶ ಗುನಗಾ, ವಿಲೇಜ್ ಅಕೌಂಟೆ0ಟ್ ವಿದ್ಯಾ ಬಂಡಾರಿ, ಆಶಾ ಕಾರ್ಯಕರ್ತರು ಸೇರಿದಂತೆ ಇತರಿದ್ದರು.

error: