May 21, 2024

Bhavana Tv

Its Your Channel

ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಪನ್ನಗೊoಡ ಗುರುಕುಲ ಚಾತುರ್ಮಾಸ್ಯ

ಕುಮಟಾ: ಶ್ರೀಮಠದ ಸಮಸ್ತ ಪರಿವಾರ ಜೇನು ಗೂಡಿನಂತೆ. ಶ್ರೀಪೀಠ ರಾಣಿ ಹುಳದಂತೆ.ನಾವೆಲ್ಲ ಸೇರಿ ಜೇನು ಮಾತ್ರವಲ್ಲ , ಇಡೀ ಸಮಾಜಕ್ಕೆ ಅಮೃತವನ್ನೇ ಉಣ ಬಡಿಸೋಣ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಪನ್ನಗೊAಡ ಗುರುಕುಲ ಚಾತುರ್ಮಾಸ್ಯದ ಕಾರ್ಯಕರ್ತರ ಸಮ್ಮಿಲನದಲ್ಲಿ ಆಶೀರ್ವಚನ ನೀಡಿದ ಅವರು, ಕಾರ್ಯಕರ್ತರಲ್ಲಿ ಮಹಾಕಾಳಿಯ ಕೃಪೆ ಹಾಗೂ ಶಕ್ತಿಯ ಸಂಚಯನವಾಗಲಿ. ದೊಡ್ಡ ಸೇವೆಗೆ ಆಂಜನೇಯನ ಶಕ್ತಿ ಹಾಗೂ ವಿನಮ್ರತೆ ಎಲ್ಲ ಕಾರ್ಯಕರ್ತರಲ್ಲಿ ಬರಲಿ ಎಂದು ಆಶಿಸಿದರು.

ಬಿಂದು ಬಿಂದು ಸೇರಿ ಸಿಂಧು ನಿರ್ಮಾಣವಾಗುವಂತೆ ಬೃಹತ್ ಕಾರ್ಯಗಳು ಕಾರ್ಯಕರ್ತರ ಶ್ರಮದಿಂದ ಆಗುತ್ತದೆ. ಗುರುಸೇವೆ ಆತ್ಮೋನ್ನತಿಗೆ ಅವ ಕಾಶ.ಸೇವೆಯ ಭಾಗ್ಯ ಎಲ್ಲರಿಗೂ ದುರ್ಲಭ. ಇಂದು ಶ್ರೀಮಠದ ಕಾರ್ಯಕರ್ತರ ಮಹಾಸೈನ್ಯವೇ ಬೆಳೆದಿದೆ. ಸತ್ಪುರುಷರಾಗಿ , ಶ್ರೀಮಠದ ಶಿಷ್ಯರಾಗಿ, ಮಠ ನಮ್ಮದು ಎಂಬ ಭಾವನೆಯ ಕಾರ್ಯಕರ್ತರಾಗಬೇಕು. ಇದೆಲ್ಲವನ್ನೂ ಮೀರಿ ತರಬೇತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಗಮನ ಹರಿಸಬೇಕು ಎಂದು ಸೂಚಿಸಿದರು. ಕಾರ್ಯಕರ್ತರಿಗೆ ಯಾವುದೇ ಕಷ್ಟ ಬಂದಾಗಲೂ ಪರಿಹರಿಸಲು ಶ್ರೀಪೀಠ ನಿಮ್ಮ ಬೆಂಬಲಕ್ಕಿದೆ ಎಂದು ಅಭಯ ನೀಡಿದರು. ಪ್ರತಿಯೊಬ್ಬ ಕಾರ್ಯಕರ್ತರ ಸೇವೆ ಶ್ರೀಪೀಠಕ್ಕೆ , ಶ್ರೀರಾಮನಿಗೆ ಅದೇ ದಿನವೇ ಸಮರ್ಪಣೆಯಾಗುತ್ತದೆ.ಮುಂದಿನ ಪೀಳಿಗೆಯ ಸಲುವಾಗಿ ಶ್ರೀಮಠದ ಕಾರ್ಯಕರ್ತರ ದಾಖಲಾತಿ ನಡೆಯುತ್ತಿದೆ. ಕಾರ್ಯಕರ್ತರ ಸೇವಾಕೈಂಕರ್ಯಕ್ಕೆ ನಿರ್ದಿಷ್ಟ ಚೌಕಟ್ಟು ನೀಡುವುದು ಇದರ ಉದ್ದೇಶ. ಕಾರ್ಯಕ್ರಮಗಳಿಗಷ್ಟೇ ಅಲ್ಲದೇ ಪ್ರಕಲ್ಪಗಳಿಗೂ ಕಾರ್ಯಕರ್ತರೇ ಆಧಾರ.ಶ್ರೀಮಠದ ಕಾರ್ಯಕರ್ತರ ಪಡೆ ಒಂದು ಜೇನುಗೂಡು ಇದ್ದಂತೆ ಎಂದರು.

ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಕಾಂತ್ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ಕಾರ್ಯಕರ್ತರಿಗೆ ಶಕ್ತಿ, ರಕ್ಷೆ ಕೋರಿ ಆಂಜನೇಯ ಹವನ ನಡೆಯಿತು.

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: