March 17, 2024

Bhavana Tv

Its Your Channel

ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಅತಿಕ್ರಮಣದಾರರು ಅತಂತ್ರ- ರವೀಂದ್ರನಾಯ್ಕ.

ಕುಮಟಾ:: ಅರಣ್ಯವಾಸಿಗಳ ಅರಣ್ಯ ಹಕ್ಕಿಗೆ ಸ್ಫಂದಿಸಿ, ಸರಕಾರ ಕಾನೂನಾತ್ಮಕವಾಗಿ ಸುಫ್ರೀಂ ಕೋರ್ಟನಲ್ಲಿ ಸ್ಫಂದಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ರಾಜ್ಯಸರಕಾರ ತಿದ್ದುಪಡಿ ಪ್ರಮಾಣ ಪತ್ರಸಲ್ಲಿಸುವಂತೆ ಜಿಲ್ಲಾ ಅರಣ್ಯ ಭೂಮಿ
ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ಸರಕಾರಕ್ಕೆ ಹೇಳಿದರು.

ಅವರು ಇಂದು ಕುಮಟದ ಮಾಸ್ತಿಕಟ್ಟೆ ಸಭಾಭವನದಲ್ಲಿ ಜರುಗಿದ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾದ ಅರಣ್ಯ ಅತಿಕ್ರಮಣದಾರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸಲಾಗುದೆಂದು ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ
ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುವರೆAದು ಅವರು ಹೇಳಿದರು.

ಸಭೆಯಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಜಗದಿಶ್ ಹರಿಕಾಂತ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಪರಶುರಾಮ ಕರಿಕಟ್ಟಿ ಹೆಗಡೆ, ವೆಂಕಟ್ರಮಣ ಪಟಗಾರ ಚಿತ್ರಗಿ, ಯಾಕೂಬ್ ಬೆಟ್ಕುಳಿ, ಸಾರಂಬಿ ಬೆಟ್ಕುಳಿ, ಸುರೇಶ್ ಭಟ್ಟ ನಾಗೂರು, ರಾಮಚಂದ್ರ ಮರಾಠಿ
ಸೇಡಿಗದ್ದೆ, ಕುಪ್ಪಯ್ಯ ಪಟಗಾರ್ ಕೋಡ್ಕಣಿ, ಮಹೇಂದ್ರ ನಾಯ್ಕ ಕತಗಾಲ್, ಕೈರುನ್ನಿಸಾ ಕಿಮಾನಿ, ಸದಾನಂದ ನಾಯ್ಕ, ಭವಾನಿ ಲುಮ್ಮ ಮರಾಠಿ ಶೆಡಿಗದ್ದೆ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಸಂಘಟನೆ:
ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗಾಗಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ, ಹೋರಾಟದಿಂದ ಮಾತ್ರ ಅರಣ್ಯ ಭೂಮಿ ಹಕ್ಕು ಸಿಗಲು ಸಾಧ್ಯ ಎಂದು ರವೀಂದ್ರನಾಯ್ಕ ಹೇಳಿದರು.

error: