April 26, 2024

Bhavana Tv

Its Your Channel

ಕುಮಟಾ ಕನ್ನಡ ಸಂಘದಿoದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ 66 ಸಾಧಕರಿಗೆ “ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ”

ಕುಮಟಾ ಕನ್ನಡ ಸಂಘದವರು, ಕುಮಟಾದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಖ್ಯಾತ ಕೀಬೋರ್ಡ್ ವಾದಕ ವಿಜಯ ಮಹಾಲೆಯವರಿಗೆ, ಸಂಗೀತ ಕ್ಷೇತ್ರದಲ್ಲಿನ ಅನನ್ಯ ಸಾಧನೆ ಗುರುತಿಸಿ “ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದರು.

ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸದಾನಂದ ದೇಶಭಂಡಾರಿ ಸಾರತ್ಯದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ 66 ಸಾಧಕರಿಗೆ “ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಈ ಸಂದರ್ಭದಲ್ಲಿ ಪ್ರಧಾನ ಮಾಡಲಾಯಿತು.

ಅದರಂತೆ ಸಂಗೀತ ಕ್ಷೇತ್ರದಲ್ಲಿನ ಅನನ್ಯ ಸಾಧನೆ ಗುರುತಿಸಿ, ಖ್ಯಾತ ಕೀಬೋರ್ಡ್ ವಾದಕ ಕುಮಟಾದ ವಿಜಯ ಮಹಲೆಯವರಿಗೆ “ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದರು.

ಇಂದು ನಮ್ಮ ಜಿಲ್ಲೆಯುದ್ಧಕ್ಕೂ ನಾಟಕ, ಭಜನೆ, ಮದುವೆ, ರಸಮಂಜರಿ ಕಾರ್ಯಕ್ರಮಗಳಿಗೆ ಕೀಬೋರ್ಡ್, ಹಾರ್ಮೋನಿಯಂ ನುಡಿಸುವುದರಲ್ಲಿ, ಸಂಗೀತ ಸಂಯೋಜಿಸುವುದರಲ್ಲಿ ಬಹುಬೇಡಿಕೆಯ ವ್ಯಕ್ತಿಗಳಲ್ಲೊಬ್ಬರು ಕುಮಟಾದ ವಿಜಯ ಮಹಾಲೆ. ಇಲೆಕ್ಟ್ರಿಶಿಯನ್ ತರಬೇತಿ ಪಡೆದು, ಕುಮಟಾ ಪೇಟೆಯಲ್ಲಿ ಪುಟ್ಟದೊಂದು ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಾ ತಮ್ಮ ಪ್ರವೃತ್ತಿಯಿಂದ ಸಂತಸ ಕಾಣುತ್ತಿದ್ದಾರೆ. 1997 ರಲ್ಲಿ ಕೀಬೋರ್ಡ್ ಖರೀದಿಯೊಂದಿಗೆ ಸಂಗೀತ ಲೋಕಕ್ಕೆ ಪರಿಚಯವಾದ ಇವರು ಇಂದು ಜಿಲ್ಲೆಯ ಸಂಗೀತ ಪ್ರಿಯರ ಮನೆ ಮಾತಾಗಿದ್ದಾರೆ. ಹೆಸರಾಂತ ಸಾಹಿತಿಗಳ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ ಆಡಿಯೋ ಹಾಗೂ ವಿಡಿಯೋ ಆಲ್ಬಮ್ ಹೊರತಂದಿದ್ದಾರೆ. 2008 ರಲ್ಲಿ ಶ್ರೀ ಮಾರುತಿ ಭಜನಾ ಮಂಡಳಿ ಸ್ಥಾಪಿಸಿ, ಭಕ್ತಿ ಭಜನಾ ಕಾರ್ಯಕ್ರಮಗಳಿಗೆ ಸಂಜೀವಿನಿ ಒದಗಿಸುತ್ತಿದ್ದಾರೆ. ‘ಸ್ವರ ಸಾಗರ ಮೆಲೋಡಿಸ್’ ಮೂಲಕ 1500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಹೆಸರಾಂತ ಭಾವನಾ ಟಿವಿ ಸೇರಿದಂತೆ ಪ್ರಮುಖ ವಾಹಿನಿಯವರು ಇವರ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಿದ್ದಾರೆ.
ಇಂಜಿಯರಿAಗ್ ಓದುತ್ತಿರುವ ಮಗಳು ಅನನ್ಯ ಹಾಗೂ ಕಲೆಯನ್ನು ಪ್ರೋತ್ಸಾಹಿಸುವ ಪತ್ನಿ ಅನಿತಾ ಇವರ ಸಾಧನೆಗೆ ಸಹಕಾರಿಗಳಾಗಿದ್ದಾರೆ.

ಪ್ರಶಸ್ತಿ ಲಭಿಸಿಸಿದ ಖುಷಿಯಲ್ಲಿ ಮಾಧ್ಯಮದೊಂದಿಗೆ ಅನಿಸಿಕೆ ಹಂಚಿಕೊAಡ ವಿಜಯ ಮಹಲೆ “ಯಶಸ್ಸಿಗೆ ಕಾರಣರಾದ ಸರ್ವರನ್ನು ನೆನಪಿಸಿಕೊಂಡರು”.

ವರದಿ: ನರಸಿಂಹ ನಾಯ್ಕ್ ಹರಡಸೆ

error: