April 26, 2024

Bhavana Tv

Its Your Channel

25 ವರ್ಷಗಳಿಂದ ಸಂತೇಗುಳಿಯಲ್ಲಿ ವ್ಯಾಪಾರ- ವಹಿವಾಟು ನಡೆಸಿ, ಜೀವನ ಸಾಗಿಸುತ್ತಿದ್ದ ಬಡ ಕುಟುಂಬದ ವಿರುದ್ಧ ಗ್ರಾ. ಪಂ ಅಧಿಕಾರಿ ದರ್ಪ್

ಕುಮಟಾ: ಕಳೆದ 25 ವರ್ಷಗಳಿಂದ ಸಂತೇಗುಳಿಯಲ್ಲಿ ವ್ಯಾಪಾರ- ವಹಿವಾಟು ನಡೆಸಿ, ಜೀವನ ಸಾಗಿಸುತ್ತಿದ್ದ ಬಡ ಕುಟುಂಬದ ವಿರುದ್ಧ ಗ್ರಾಮ ಪಂಚಾಯತಿ ಅಧಿಕಾರಿ ಅಧಿಕಾರದ ದರ್ಪ್ ತೋರಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.

 ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ಅಂಗಡಿ ಇಟ್ಟು ಅದರಲ್ಲಿ ಸಂಸಾರವನ್ನು ಸಾಗಿಸುತ್ತಿರುವ ನಾಲ್ವರಿಗೆ ನೋಟಿಸ್ ನೀಡಿ, ಅಂಗಡಿ ತೆರವು ಮಾಡಬೇಕು ಎಂಬ ಅನಧಿಕೃತ ಆದೇಶ ನೀಡಿದ್ದಾರೆ. ಅಲ್ಲದೇ, ನಾಲ್ವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಏಕಾಏಕಿ ತೆರವು ಮಾಡಬೇಕು ಎಂದು ನೋಟಿಸ್ ನೀಡಲಾಗಿದೆ.

ಅಮೀನಾಬಿ ಎಂಬ ಮಹಿಳೆ ಈ ನಾಲ್ವರಿಗೆ 25 ವರ್ಷದ ಹಿಂದ ಜಾಗ ನೀಡಿ, ಅಂಗಡಿ ಹಾಕಲು ಅನುಮತಿ ನೀಡಿದ್ದಳು. ಇದರಿಂದ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದು  ಜಾಗ ನೀಡಿದ್ದಳು. ಈಗ ಗ್ರಾಮ ಪಂಚಾಯತಿಗೆ ಅರ್ಜಿ ಹಾಕಿ, ಜಾಗ ತೆರವುಗೊಳಿಸಬೇಕು ಎಂದು ಠರಾವು ಮಾಡಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗುತ್ತಿದೆ.

  ಕುಮಟಾ-ಸಿದ್ದಾಪುರ ರಸ್ತೆ ಅಗಲೀಕರಣಕ್ಕೆ ಸರ್ಕಾರ ಆದೇಶ ನೀಡಿದೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಸ್ತೆ ಅಗಲೀಕರಣಕ್ಕೆ ನಮ್ಮ ಸಹಮತವಿದೆ. ಆದರೆ ಮಹಿಳೆಯೋರ್ವಳು ಅಂಗಡಿ ತೆರವು ಮಾಡಿ, ನಮ್ಮ ಜೀವನೋಪಾಯಕ್ಕೆ ಕಷ್ಟ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾಲ್ವರ ಜೀವನೋಪಾಯದ ಪಶ್ನೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ವಿನಂತಿಸಿದ್ದಾರೆ.

ನಮಗೆ ತೊಂದರೆ ನೀಡುತ್ತಿರುವ ಮಹಿಳೆಯ ಹಿಂದೆ ಕಾಣದ ವ್ಯಕ್ತಿಗಳಿದ್ದಾರೆ. ಅವರು ಇವಳನ್ನು ಬಳಸಿಕೊಂಡು ನಮ್ಮ ಜೀವನ ಬೀದಿ ಪಾಲುಮಾಡುತ್ತಿದ್ದಾರೆ. ಅಲ್ಲದೇ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ನೋಂದ ಅಂಗಡಿಕಾರರು ತಿಳಿಸಿದ್ದಾರೆ.

ಅಮೀನಾಬಿ ಕೋಂ ಮಹ್ಮದ ಸಾಬ ಅವರು ಪಂಚಾಯತ್ ಗೆ ಬಂದು ದೂರು ನೀಡಿದ್ದು ಈ ದೂರನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕಟ್ಟಡವನ್ನು ತೆರವುಗೊಳಿಸಲು ಸಾಮಾನ್ಯ ಸಭೆ ನಿರ್ಣಯ ಮಾಡಿ ನೊಟಿಸ್ ಅಂಗಡಿಗೆ ನೀಡಿದ್ದವೆ ಎಂದು ಸಂತೇಗುಳಿ ಅಧ್ಯಕ್ಷರಾದ ಕಮಲಾ ದೇವು ಮುಕ್ರಿ ಹೇಳಿದ್ದಾರೆ.

error: