ಕುಮಟಾ : ಧೂರ್ತ ಮಗನೊಬ್ಬ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಭಯಾನಕ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ .
ಕೂಜಳ್ಳಿಯ ಗೀತಾ ಭಟ್ ( 60 ) ಅವರನ್ನು ಅವರ ಮಗ ಮಧುಕರ ಭಟ್ ಎಂಬಾತ ಕೊಲೆ ಮಾಡಿದ್ದಾನೆ . ಮದ್ಯಪಾನ ಸೇರಿದಂತೆ ದುಷ್ಟಟಗಳಿಗೆ ದಾಸನಾಗಿದ್ದ ಮಧುಕರ್ ಕುಡಿತಕ್ಕೆ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ . ಕೆಲವೊಮ್ಮೆ ಆತನ ಕಿರುಕುಳ ತಾಳಲಾರದೆ ಹಣ ಕೊಡಲೇಬೇಕಾಗಿ ಬರುತ್ತಿತ್ತು . ಆದರೆ ಮಂಗಳವಾರ ಹಣ ಕೊಡಲಿಲ್ಲ ಎಂಬ ಕಾರಣದಿಂದ ಸಿಟ್ಟಿಗೆದ್ದ ಮಧುಕರ್ ತಾಯಿ ಎಂದೂ ನೋಡದೆ ಆ ಹೆಣ್ಮಗಳನ್ನು ಹೊಡೆದೇ ಕೊಂದು ಹಾಕಿದ್ದಾನೆ . ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ