February 29, 2024

Bhavana Tv

Its Your Channel

ಫೆಬ್ರವರಿ 10 ಬೆಂಗಳೂರು ಚಲೋ; ಬೆಂಗಳೂರಿನ ಶಕ್ತಿಕೇಂದ್ರದ ಮುಂದೆ ಅರಣ್ಯವಾಸಿಗಳ ಶಕ್ತಿಪ್ರದರ್ಶನ.

ಕುಮಟಾ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸುವ ಉದ್ದೇಶದಿಂದ ಫೇಬ್ರವರಿ 10 ರಂದು ಸಂಘಟಿಸಿದ ಬೆಂಗಳೂರು ಚಲೋದ ಸಂದರ್ಭದಲ್ಲಿ ಬೆಂಗಳೂರು ಶಕ್ತಿ ಕೇಂದ್ರವಾದ ವಿಧಾನ ಸೌಧದ ಏದುರು ಅರಣ್ಯವಾಸಿಗಳ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ಹೇಳಿದರು.

ಅವರು ಇಂದು ಕುಮಟಾ ತಾಲೂಕಿನ ಮಹಾಸತಿ ದೇವಾಲಯದ ಸಭಾಂಗಣದಲ್ಲಿ ಫೇಬ್ರವರಿ 10 ಬೆಂಗಳೂರು ಚಲೋ ಕಾರ್ಯಕ್ರಮದ
ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮೇಲಿನಂತೆ ಮಾತನಾಡುತ್ತಿದ್ದರು.
ನಿರಂತರ ಸಾಂಘಿಕ ಮತ್ತುಕಾನೂನು ಹೋರಾಟ ಕಳೆದ 32 ವರ್ಷಗಳಿಂದ ವಿವಿಧ ರೀತಿಯಲ್ಲಿ ಜರುಗಿಸದಲ್ಲೂ ಸರಕಾರದ ಸ್ಪಂದನೆ ದೊರಕದಿರುವುದು ವಿಷಾದಕರ ಎಂದು ಅವರು ಹೇಳಿದರು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಕಾನೂನು ಜ್ಞಾನದ ಕೊರತೆಯಿಂದ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾಣದಲ್ಲಿ ವೈಫಲ್ಯವಾಗಿದೆ. ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕುಮಟಾ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷಮಂಜುನಾಥ ಮರಾಠಿ ವಹಿಸಿದರು. ಸಭೆಯಲ್ಲಿ ಸುರೇಶ ಜಿ. ಭಟ್ ನಾಗೂರು, ಜಗದೀಶ ನಾಯ್ಕ ಕತಗಾಲ, ಯಾಕೂಬ ಸಾಬಬೆಟ್ಕುಳಿ, ಸಾರಂಬಿ ಬೆಟ್ಕುಳಿ, ವೆಂಕಟ್ರಮಣ ಪಟಗಾರ ಮಾಸೂರು ಕ್ರಾಸ್, ಶಾಂತಿ ಮುಕ್ರಿ ಮಿರ್ಜಾನ, ಮಾದೇವ ಅಗೇರ ಬರ್ಗಿ, ಶ್ರೀರಾಮ ಹಳ್ಳೇರ ಮೊರಬ, ಗಣು ಗೌಡ ಗೋಕರ್ಣ, ಚಿದಂಬರ ಶೆಟ್ಟಿಚಂದಾವರ.

ಸಹಸ್ರಸಂಖ್ಯೆಯಲ್ಲಿ ಬೆಂಗಳೂರು ಚಲೋ:
ಅರಣ್ಯ ಭೂಮಿ ಹಕ್ಕು ಪ್ರತಿಪಾದನೆಗಾಗಿ ಸಹಸ್ರ ಸಂಖ್ಯೆಯಲ್ಲಿ ಐತಿಹಾಸಿಕ ಬೆಂಗಳೂರು ಚಲೋ ಜರುಗಲಿದ್ದು, ಅರಣ್ಯವಾಸಿಗಳು ಹೋರಾಟಕ್ಕೆ ಶಕ್ತಿ ನೀಡಬೇಕೆಂದು ಅಧ್ಯಕ್ಷರವೀಂದ್ರನಾಯ್ಕ ಹೇಳಿದರು

error: