ಕಮಟಾ: ದೀರ್ಘಕಾಲಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರೀಯವಾಗಿತೊಡಗಿಸಿ ಕೊಂಡ, ಶಿಕ್ಷಕರ-ನಿರುದ್ಯೋಗಿಗಳ- ಶೋಷಿತರ ನಿಜಧ್ವನಿಯಾಗಿ, ಸಾತ್ತ್ವಿಕತೆಯನಾಡನ್ನು ಕಟ್ಟುವ ಸಂಕಲ್ಪದ ವಿದ್ಯಾವಂತ-ಪ್ರಜ್ಞಾವAತ ನಾಯಕರೆನಿಸಿದ ರಾಣಿಬೆನ್ನೂರಿನ ವಿದ್ಯಾವಾರಿಧಿಡಾ.ಆರ್.ಎಂ.ಕುಬೇರಪ್ಪನವರ ಉತ್ತರಕನ್ನಡ ಜಿಲ್ಲೆಯ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಘವೊAದನ್ನು ಹುಟ್ಟುಹಾಕಿದ್ದಾರೆ.
ವಿದ್ಯಾವಾರಿಧಿ ಡಾ.ಆರ್.ಎಂ.ಕುಬೇರಪ್ಪ ಅಭಿಮಾನಿ ಸಂಘದ ಗೌರವಾಧ್ಯಕ್ಷರಾಗಿ ಕುಮಟಾ ಶಹರದ ಪ್ರತಿಷ್ಠಿತ ಗಿಬ್ ಬಾಲಕರಪ್ರೌಢಶಾಲೆಯ’ ಅಜಾತಶತ್ರು’ ಸಮಾಜ ವಿಜ್ಞಾನ ಶಿಕ್ಷಕ ವಿಜಯಕುಮಾರ್ ನಾಯ್ಕ, ಅಧ್ಯಕ್ಷರಾಗಿ ಶೈಕ್ಷಣಿಕ ಹೋರಾಟಗಾರ ಆರ್.ಜೆ.ನಾಯ್ಕ, ಕಣ್ಮಣಿ ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಖ್ಯಾತ ಯುವ ನ್ಯಾಯವಾದಿ ರಂಜನ ನಾಯಕ ಮಾಸ್ಕೇರಿಯವರುನಿಯುಕ್ತಿಗೊಂಡಿದ್ದಾರೆ.
ಸಹಕಾರ್ಯದರ್ಶಿಗಳಾಗಿ ಪವನ್ಕುಮಾರ್ ಗೋಕರ್ಣ, ಸಂಚಾಲಕರಾಗಿ ಧುರೀಣಹೊನ್ನಪ್ಪ ಅವರ್ಸಾ, ಕೋಶಾಧ್ಯಕ್ಷರಾಗಿ ಭಟ್ಕಳದನ್ಯೂಇಂಗ್ಲೀಷ್ ಸ್ಕೂಲಿನ ಜನಪ್ರಿಯ ಆಂಗ್ಲ ಭಾಷಾ ಶಿಕ್ಷಕಿ ರಾಜಂಹಿಚ್ಕಡ್, ಸದಸ್ಯರಾಗಿ ವಿಶ್ರಾಂತ ಶಿಕ್ಷಕ ಬಾಲಚಂದ್ರ ಗಾಂವಕರ್, ಜಿಲ್ಲಾಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ ರಾಜೇಂದ್ರ ಕೇಣಿ ಹಾಗೂ ಎನ್.ಬಿ.ನಾಯಕ ಸೂರ್ವೆಯವರನ್ನು ಆಯ್ಕೆಗೊಳಿಸಲಾಗಿದೆ.
ಸಂಘವು ನಿರಂತರವಾಗಿ ರಚನಾತ್ಮಕ ಚಟುವಟಿಕೆಗಳಲ್ಲಿ ಪ್ರವೃತ್ತವಾಗಲಿದೆಯೆಂದು ಗೌರವಾಧ್ಯಕ್ಷರಾದ ವಿಜಯ ಕುಮಾರ ರವರುಅಭಿಪ್ರಾಯಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ತನ್ನ ಹೆಸರಿನಲ್ಲಿ ಅಭಿಮಾನಿಗಳಸಂಘಟನೆಯು ಸೃಷ್ಠಿಯಾದ ಕುರಿತು ಸಂತಸವನ್ನು ವ್ಯಕ್ತಪಡಿಸಿದ ಡಾ.ಆರ್.ಎಂ.ಕುಬೇರಪ್ಪನವರು ಉತ್ತರಕನ್ನಡವು ತನ್ನ ಅಭಿಮಾನದ ಜಿಲ್ಲೆಯೆಂದು, ಈ ಜಿಲ್ಲೆಯ ಜನರ ಶೈಕ್ಷಣಿಕ ಹಿತವನ್ನು ಕಾಪಾಡಲು ತಾನು ಕಟಿಬದ್ಧನಾಗಿರುತ್ತೇನೆ ಎಂದಿರುತ್ತಾರೆ.
ನೂತನವಾಗಿ ಅಸ್ತಿತ್ವಕ್ಕೆ ಬಂದ ವಿದ್ಯಾವಾರಿಧಿ ಡಾ.ಆರ್.ಎಂ.ಕುಬೇರಪ್ಪ ಅಭಿಮಾನಿ ಸಂಘಕ್ಕೆ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಕೋಶಾಧ್ಯಕ್ಷರಾದ ಶಿವಚಂದ್ರರವರು ಶುಭವನ್ನು ಹಾರೈಸಿದ್ದಾರೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ