December 22, 2024

Bhavana Tv

Its Your Channel

ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ನಿಮಿತ್ತ ಗಿಡ ನಾಟಿ ಕಾರ್ಯಕ್ರಮ

ಭಟ್ಕಳ:- ಶ್ರೀ ಕ್ಷೇತ್ರ ದ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್(ರಿ) ಭಟ್ಕಳ ಇವರ ಮಾರ್ಗದರ್ಶನದಲ್ಲಿ ಮಂಕಿ ವಿಪತ್ತು ನಿರ್ವಹಣಾ ಘಟಕ, ಅರಣ್ಯ ಇಲಾಖೆ, ವಿಶ್ವಕರ್ಮ ದೇವಸ್ಥಾನ ಗುಡಿ ಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಪ್ರಯುಕ್ತ ಸಾಮಾಜಿಕರ ಅರಣೀಕರಣ ಕಾರ್ಯಕ್ರಮದಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು ಪರಮಪೂಜ್ಯರ ಮಾರ್ಗದರ್ಶನದಂತೆ ಭೂಮಿತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಧೈರ್ಯದಡಿ ಸಸಿಗಳನ್ನು ನಾಟಿ ಮಾಡುವ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಉದ್ಘಾಟಕರಾಗಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸತೀಶ ಶೇಟ್‌ರವರು ಹಾಗೂ ಮುರುಡೇಶ್ವರ ವಲಯ ಅರಣ್ಯಾಧಿಕಾರಿ ಸಂದೀಪ್‌ರವರು ಗಿಡ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧಾ. ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ (ರಿ) ಭಟ್ಕಳ, ತಾಲೂಕಿನ ಯೋಜನಾಧಿಕಾರಿಗಳಾದ ಚಂದ್ರಹಾಸರವರು ಪ್ರಾಸ್ತಾವಿಕವಾಗಿ ಮಾಡುತ್ತಾ ಸಂಸ್ಥೆಯ ಮೂಲಕ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮುಂದೆ ಈ ತಂಡ ಇನ್ನೂ ಉತ್ಸಾಹದಿಂದ ಕೆಲಸ ನಿರ್ವಹಿಸಲು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರಾದ ಗಂಗಾಧರ್ ಅವರು ಗಿಡಗಳು ದೇವರ ಒಂದು ಭಾಗ ಗಿಡಗಳನ್ನು ಪಾಲನೆ ಪೋಷಣೆ ಮಾಡುವುದು ನಮ್ಮ ಕರ್ತವ್ಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಅಮಿತಾ ನಾಯ್ಕರವರು ಒಂದು ವರ್ಷದಲ್ಲಿ ತಾವು ಮಾಡಿದ ಕೆಲಸ ಕಾರ್ಯದ ಬಗ್ಗೆ ವಿವರಿಸಿದರು ಮಂಕಿ ವಲಯದ ಮೇಲ್ವಿಚಾರಕರಾದ ಅಶೋಕ್ ಸ್ವಾಗತಿಸಿದರು ಬೈಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಚಂದ್ರಕಲಾ ವಂದಿಸಿದರು ಹಾಗೂ ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಮಂಕಿಯ ಗ್ರಂಥಾಲಯದ ಗ್ರಂಥಪಾಲಕರಾದ ಮಂಜುನಾಥ್ ಹಸ್ಲರ್,ನವಜೀವನ ಸಮಿತಿಯ ಸದಸ್ಯರು, ಅರಣ್ಯ ಇಲಾಖೆಯ ಗಾರ್ಡ್ ಬಸವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ.
ಅಮಿತಾ ನಾಯ್ಕ.
ಮಂಕಿ ಘಟಕ

error: