December 20, 2024

Bhavana Tv

Its Your Channel

ಮಂಕಿ ಅರಣ್ಯ ಅತಿಕ್ರಮಣ ತೆರವು

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

ಹೊನ್ನಾವರ;ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹೊನ್ನಾವರ ತಾಲ್ಲೂಕಿನ ಮಂಕಿ ಮಡಿ ಗುಡ್ಡ ದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡ ಎಳು ಗುಡಿಸಲುಗಳನ್ನು ವಲಯ ಅರಣ್ಯಾಧಿಕಾರಿವರಾದ ರಂಗನಾಥರವರ ನೇತ್ರತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.

ಮಂಕಿ ಅರಣ್ಯ ಅಧಿಕಾರಿಗಳು ಬೆಳಿಗ್ಗೆ ೬ಗಂಟೆಯಿAದಲೇ ಕಾರ್ಯಾಚರಣೆ ನಡೆಸಿ ಅರಣ್ಯ ಅತಿಕ್ರಮಣವನ್ನು ಖುಲ್ಲಾಗೊಳಿಸಿದರು. ಮಂಕಿ ಮಡಿಯ ಗುಡ್ಡದ ಮೇಲ್ಭಾಗದಲ್ಲಿ ಕೆಲವರು ಅನಧಿಕೃತವಾಗಿ ಚಿಕ್ ಗುಡಿಸಲುಗಳನ್ನು ಕಟ್ಟಿಕೊಂಡು ಅರಣ್ಯ ಅತಿಕ್ರಮಣ ಮಾಡಿದ್ದರು. ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ೭ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಎಂದು ಮಂಕಿ ವಲಯಾರಣ್ಯಾಧಿಕಾರಿ ವರದ ರಂಗನಾಥ ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ಶಿವಾಬಂದ ಇಂಚಿನವರ್, ಮಾದೇವ ಮಡ್ಡಿ, ಸಂದೀಪ, ಯೋಗೇಶ,ಶಿವಾನಂದ ಪೂಜಾರಿ,ಮಹಾಬಲಗೌಡ ಮುಂತಾದವರು ಪಾಲ್ಗೊಂಡಿದ್ದರು.

error: