December 22, 2024

Bhavana Tv

Its Your Channel

ಸುವರ್ಣಕಾರರ ಕೋ- ಆಪರೇಟಿವ್ ಸೊಸೈಟಿ  ಲಿಮಿಟೆಡ್ ಮಂಕಿ ಶಾಖೆಯ ಉದ್ಘಾಟನೆ

ಹೊನ್ನಾವರ:- ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಕಿಂತಾಲಕೇರಿ ಹೊನ್ನಾವರ ಇದರ ಮಂಕಿ ಶಾಖಾ ಉದ್ಘಾಟನಾ ಸಮಾರಂಭವು ಜರುಗಿತು
ಈ ಸಮಾರಂಭಕ್ಕೆ ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಮಠಾಧೀಶರಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ನೆರವೇರಿತು. ಶ್ರೀಗಳನ್ನು ಪೂರ್ಣಕುಂಭದೊoದಿಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು ಶ್ರೀಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ತದನಂತರ ಸಭಾ ಕಾರ್ಯಕ್ರಮ ನಡೆಯಿತು, ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಹೊನ್ನಾವರದ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದ ಅಧ್ಯಕ್ಷರಾದ ಮಾಧವ ಶೇಟ್ , ಶ್ರೀ ಮಹಾಗಣಪತಿ ದೇವಸ್ಥಾನ ಬಣಸಾಲೆ ಮಂಕಿ ಇದರ ಉಪಾಧ್ಯಕ್ಷರಾದ ಚಂದ್ರಕಾAತ ಮರ್ತು ಶೇಟ್ , ಧ್ರೀ ರಾಮ ಕ್ಷತೀಯ ಸಮಾಜ ಮಂಕಿ ಇದರ
ಅಧ್ಯಕ್ಷರು ಹಾಗೂ ನಿವೃತ್ತ ಶಿಕ್ಷಕರು ಆದ ಶ್ರೀ ಹನುಮಂತ ರಾಮಚಂದ್ರ ನಾಯ್ಕ ಹಾಗೂ ಸುವರ್ಣಕಾರರ ಕೋ. ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಷಕ್ಷರಾಗಿರುವ ಮಂಜುನಾಥ ಪಿ ಶೇಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಧವ ಶೇಟರವರು ಸಂಘದ ಬೆಳವಣಿಗೆ, ವ್ಯವಹಾರ ಹಾಗೂ ಅಭಿವೃದ್ಧಿ ಕುರಿತು ಶ್ಲಾಘಿಸಿದರು. ಹಾಗೆಯೇ ಇನ್ನೊರ್ವ ಮುಖ್ಯ ಅತಿಥಿಗಳಾದ ಶ್ರೀ ಹನುಮಂತ ರಾಮಚಂದ್ರ ನಾಯ್ಕ ಇವರು ಮಾತನಾಡಿ ಸುವರ್ಣಕಾರರ ಸೊಸೈಟಿಯು ಮಂಕಿಯಲ್ಲಿ ಶಾಖೆಯನ್ನು ಪ್ರಾರಂಭಿಸಿದ್ದು ನಮ್ಮೆಲ್ಲರ ಸುದೈವ ಎಂದು ಹೊಗಳಿದರು.
ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ತಾವು ಬೆಳೆಯುವುದರ ಜೊತೆಗೆ ಸಂಘವನ್ನು ಬೆಳೆಸಿರಿ ಎಂದು ಕಿವಿಮಾತು ನೀಡಿದರು.

ಚಂದ್ರಕಾAತ ಮರ್ತು ಶೇಟ ಮಾತನಾಡಿ ಸಂಘವು ಸುವರ್ಣ ಮಹೋತ್ಸವ ಆಚರಿಸಿ ಯಶಸ್ವಿಯಾಗಿ ಬೆಳೆಯುತ್ತಿರುವುದನ್ನು ಹಾಗೂ ಶಾಖೆಗಳನ್ನು ತೆರೆದು ಹೊಸ ಉದ್ಯೋಗಗಳನ್ನು ಸೃಷ್ಟಿಮಾಡುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸಿದರು, ಮತ್ತು ಸಂಘದ ಅಧ್ಯಕ್ಷರಾದ ಮಂಜುನಾಥ ಪಿ. ಶೇಟ ಮಾತನಾಡಿ ಸೊಸೈಟಿಯು ಬೆಳೆದು ಬಂದ ದಾರಿಯನ್ನು ಮನನ ಮಾಡಿದರು. ಮತ್ತು ಸಂಘದ ಏಳ್ಗೆಗೆ ಶ್ರಮಿಸಿದ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು, ಸಹಕರಿಸಿದ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಖೆ ತೆರೆಯಲು ಸುಸಜ್ಜಿತ ಕಟ್ಟಡವನ್ನು ಒದಗಿಸಿಕೊಟ್ಟ ಮಾರುತಿ ಟೆಕ್ಸ್ಟೈಲ್ಸ್ನ ಮಾಲಿಕರಾದ ಲಕ್ಷö್ಮಣ ನಾಯ್ಕ ಇವರನ್ನು ಶ್ರೀಗಳು ಶಾಲು ಹೊದಿಸಿ ಗೌರವಿಸಿದರು.

ಈ ಕಾರ್ಯಕ್ರಮವನ್ನು ಸೊಸೈಟಿಯ ಸಿಬ್ಬಂದಿ ಸೂರಜ್ ಶೇಟ್ ನಿರೂಪಿಸಿದರು.

ಹೊನ್ನಾವರ ಪ್ರಧಾನ ಕಛೇರಿಯ ಮುಖ್ಯ ಕಾರ್ಯನಿರ್ವಾಹಕರಾದ ಬಾಲಚಂದ್ರ ವಾದಿರಾಜ ಶೇಟ್ ಸ್ವಾಗತಿಸಿದರು. ಆಡಳಿತ ಕಮಿಟಿಯ ಉಪಾಧ್ಯಕ್ಷರಾದ ರವೀಂದ್ರ ಶೇಟ ವಂದಿಸಿದರು

ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಗ್ರಾಹಕರು, ಹಾಗೂ ಊರ ನಾಗರಿಕರು ಹಾಜರಿದ್ದರು.

error: