May 3, 2024

Bhavana Tv

Its Your Channel

ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ವಿಜ್ಞಾನ ವಿಚಾರ ವಿನಿಮಯ ಕಾರ್ಯಕ್ರಮ

ಮುರುಡೇಶ್ವರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ “ಇಂಡಿಯನ್ ಇನ್ಸಿಟಿಟ್ಯೂಟ್ ಆಪ್ ಸೈನ್ಸ್” ರವರ ವತಿಯಿಂದ “ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸ್” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಡಾ|| ಸುಧೀರ ಪೈ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ|| ಪೈಯವರು ಕಾರ್ಯಕ್ರಮದ ಉಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳೂ ಪಡೆದುಕೊಂಡು ಸಮಾಜ ನಮ್ಮನ್ನು ಗುರುತಿಸುವ ಮಟ್ಟಕ್ಕೆ ಬೆಳೆಯಬೇಕು ಎಂದರು.
ನ್ಯಾನೋ ಮತ್ತು ಸಾಪ್ಟ್ ಮ್ಯಾಟರ್ ಸೈನ್ಸ್ ನಿರ್ದೇಶಕರಾದ ಪ್ರೊ.ಬಿ.ಎಲ್.ಪ್ರಸಾದ್‌ರವರು ನ್ಯಾನೋತಂತ್ರಜ್ಞದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ವಿಜ್ಞಾನಿಗಳಾದ ಡಾ|| ಅಂಗಪ್ಪನೆ ಭೌತಶಾಸ್ತçದ ಅಥೋಗ್ರಾಫ್, ವಿಷಯದ ಕುರಿತು, ಇನ್ನೋರ್ವ ವಿಜ್ಞಾನಿಗಳಾದ ಡಾ|| ಪ್ರಳಯ್ ಸಂತ್ರ ನ್ಯಾನೋಮಟೀರಿಯಲ್ಸ್ ವಿಷಯದ ಕುರಿತು ಉಪನ್ಯಾಸ ನೀಡಿದರು.
ಶ್ರೀ ಸುಭೋದ್ ಎಂ.ಜಿ. ಆಡಳಿತಾಧಿಕಾರಿಗಳು ಶ್ರೀ ದೀಪಕ್ ಪಿ. ಆರ್, ಆರ್.ಎನ್.ಎಸ್. ವಿದ್ಯಾನಿಕೇತನ ಪ್ರಾಚಾರ್ಯರಾದ ಡಾ|| ಸುರೇಶ ಶೆಟ್ಟಿ, ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ಸಲಹೆಗಾರರಾದ ಶ್ರೀಮತಿ ರಾಧಾ ಸಂಪತ್‌ರವರು ಉಪಸ್ಥಿತರಿದ್ದರು. ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಾಧವ ಪಿ. ಅಧ್ಯಕ್ಷತೆ ವಹಿಸಿದರು.
ವಿದ್ಯಾರ್ಥಿನಿಯರಾದ ತ್ವಿಶಾ ಮತ್ತು ಕೀರ್ತಿ ಪ್ರಾರ್ಥಿಸಿದರು. ಪ್ರಶಾಂತ ಮೇಸ್ತ ಪ್ರಾರ್ಥಿಸಿದರು. ಕು. ಸುನೀತಾ ನಾಯ್ಕ ವಂದನಾರ್ಪಣೆಗೈದರು. ಅಶ್ವಿನಿ ಶೇಟ್ ಕಾರ್ಯಕ್ರಮ ನಿರೂಪಿಸಿದರು.

error: