May 4, 2024

Bhavana Tv

Its Your Channel

ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ಇತರ್ ಎನರ್ಜಿ ಹೊಸೂರ್ ಇವರಿಂದ ಕ್ಯಾಂಪಸ್ ಸಂದರ್ಶನ

ಮುರುಡೇಶ್ವರ ಆರ್ ಎನ್ ಎಸ್ ಪಾಲಿಟೆಕ್ನಿಕ್ ನಲ್ಲಿ ಇತರ್ ಎನರ್ಜಿ ಕಂಪನಿ ಹೊಸೂರ್ ಇವರಿಂದ ಇತ್ತೀಚೆಗೆ ಡಿಪ್ಲೋಮ ಅಂತಿಮ ವರ್ಷದಲ್ಲಿ ಓದುತ್ತಿರುವ ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ,ಆಟೋಮೊಬೈಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಗಳನ್ನ ರಿಟನ್ ಟೆಸ್ಟ್, ಸಂದರ್ಶನ ಮೂಲಕ ಅಂತಿಮ ಅಂತಕ್ಕೆ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಎಂದು ಪ್ಲೇಸ್ಮೆಂಟ್ ಅಧಿಕಾರಿ ಹಾಗೂ ಉಪ ಪ್ರಾಂಶುಪಾಲರಾದ ಕೆ ಮರಿಸ್ವಾಮಿಯವರು ಮಾಹಿತಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಅತುಲ್ ಮೇಸ್ತ ಸಚಿನ್ ನಾಯ್ಕ ,ಪ್ರಕಾಶ್ ಫೋಲ್ ಸಹಕರಿಸಿದರು.


ಕಂಪನಿಯ ವತಿಯಿಂದ ಅನಿರುದ್ಧ, ಪ್ರದೀಪ್ ಹಾಗೂ ಆದಿತ್ಯ ಶರ್ಮ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಸಂತೋಷ ಅವರು ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.

error: