April 27, 2024

Bhavana Tv

Its Your Channel

ಮುರುಡೇಶ್ವರ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಜಿಂದಾಲ್ ಸ್ಟೀಲ್ ಕಂಪನಿಯಿoದ ಆನ್ಲೈನ್ ಪರೀಕ್ಷೆ.

ಮುರುಡೇಶ್ವರ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿರುವ ಸಿರಾಮಿಕ್ ಟೆಕ್ನಾಲಜಿ ವಿದ್ಯಾರ್ಥಿಗಳಿಗಾಗಿ ಜಿಂದಾಲ್ ಸ್ಟೀಲ್ ಕಂಪನಿಯಿAದ ಆನ್ಲೈನ್ ಪರೀಕ್ಷೆಯನ್ನು ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಲಾಯಿತು.
10ನೇ ತರಗತಿಯಲ್ಲಿ ಮತ್ತು ಡಿಪ್ಲೋಮಾ ಪ್ರತಿ ಸೆಮಿಸ್ಟರ್ ನಲ್ಲಿ ಶೇಕಡ 60ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಈ ಪರೀಕ್ಷೆಯನ್ನು ಬರೆಯಲು ಅವಕಾಶವಿದ್ದು
ಪ್ರತಿ ವರ್ಷ ದೇಶದ ಪ್ರಸಿದ್ಧ ಈ ಜಿಂದಾಲ್ ಸ್ಟೀಲ್ ಕಂಪನಿಗೆ ನಮ್ಮ ಪಾಲಿಟೆಕ್ನಿಕ್ ವತಿಯಿಂದ ಐದು ರಿಂದ ಹತ್ತು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ ಎಂದು ಪ್ಲೇಸ್ಮೆಂಟ್ ಅಧಿಕಾರಿ ಹಾಗೂ ಉಪ ಪ್ರಾಚಾರ್ಯರಾದ ಕೆ. ಮರಿಸ್ವಾಮಿಯವರು ಮಾಹಿತಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸಂತೋಷ್ ಆರ್. ಎ ಉಪಸ್ಥಿತರಿದ್ದರು. ಸಿರಾಮಿಕ್ ಉಪನ್ಯಾಸಕರಾದ ಪ್ರದ್ಯುಮ್ನ ಪಡುಕೋಣೆ, ಜೈ ಗುರು ಭಟ್ ಸಹಕರಿಸಿದರು.

error: