April 27, 2024

Bhavana Tv

Its Your Channel

ಬಿನಾ ವೈಧ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಆಚರಣೆ.

ಮುರ್ಡೇಶ್ವರ; ಮಂಗಳವಾರದAದು ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆಯನ್ನ ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಯಾದ ಶ್ರೀಮತಿ ಸವಿತಾ ಕಾಮತ್ ರವರು ಒಂದು ಅಧ್ಬುತ ಕಾರ್ಯಕ್ರಮದ ಸಂಯೋಜನೆ ಎನ್ನುತ್ತಾ,ಮಹಿಳೆಯರು ಸಮಾಜದ ಮುಖ್ಯ ವಾಹಿನಿಯ ಕಡೆ ಬಂದಾಗ ಮಾತ್ರ ಸಮಾಜ ಸುಧಾರಣೆಯತ್ತ ಮುಖ ಮಾಡುತ್ತದೆ.ಆಧುನಿಕ ಕಾಲಘಟ್ಟದಲ್ಲಿ ಸಮಾಜದ ಎಡರು – ತೊಡರುಗಳನ್ನು ದಾಟಿ ಒಂದು ಮಹಿಳೆ ಶಿಕ್ಷಣವನ್ನು ಪಡೆಯಬೇಕು. ಒಂದು ಹೆಣ್ಣು ಶಿಕ್ಷಿತರಾದರೆ ಇಡೀ ಸಮಾಜದ ಸುಧಾರಣೆಗೆ ನಾಂದಿ ಹಾಡುತ್ತಾಳೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಕಿ ಭಾಗದ ಆರ್ ಎಫ್ ಓ ಶ್ರೀಮತಿ ಸವಿತಾ ದೇವಾಡಿಗರವರು ಮಾತನಾಡಿ ದೇಶದ ಹಲವು ಪ್ರಮುಖ ಕ್ಷೇತ್ರದಲ್ಲಿ ಮಹಿಳೆಯರು ಅಗ್ರಮಾನ್ಯರಾಗುತ್ತಿದ್ದಾರೆ ಇದಕ್ಕೆಲ್ಲಾ ಕಾರಣ ಮಹಿಳೆಯರು ಮತ್ತಷ್ಟು ಸಧೃಡ ಮತ್ತು ಸಭಲರಾಗಬೇಕು.ಇಂದಿನ ಕಾಲದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಶಿಕ್ಷಿತರಾಗುತ್ತಿರುವು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಮತ್ತೋರ್ವ ಅತಿಥಿಯಾಗಿ ಆಗಮಿಸಿದ ಶಿಕ್ಷಣಾಧಿಕಾರಿ ಕಛೇರಿಯ ಬಿ ಆರ್ ಸಿ ಯಾಗಿರುವ ಶ್ರೀಮತಿ ಪೂರ್ಣಿಮಾ ಮೋಗೆರವರು ಮಾತಾನಾಡಿ ಹೆಣ್ಣು ಎಂದಿಗೂ ಅಭಲೆಯಾಗುವುದಿಲ್ಲ ಆಕೆಗೆ ಒಂದು ಮನೆಯನ್ನು ನಿರ್ವಹಣೆ ಮಾಡುವ ಕೌಶಲ್ಯವಿದ್ದಂತೆ ಆಕೆ ಇಡೀ ಸಮಾಜದಲ್ಲಿ ಎಲ್ಲರೆದುರು ತಾನು ಉನ್ನತ ಸ್ಥಾನಕ್ಕೆರಿ ಬದುಕಬೇಕು ಎನ್ನುವ ಹಂಬಲ ಇರುತ್ತದೆ ಅದಕ್ಕೆ ಅವಳು ಬರುವ ಎಲ್ಲಾ ಸಮಸ್ಯೆಗಳನ್ನು ದಾಟಿ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾಳೆ ಎಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಶ್ರೀವಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಮತಾರವರು ಮಾತನಾಡಿ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪ್ರತಿ ನಿತ್ಯ ಮಹಿಳಾ ಅಚರಣೆಗಳಾಬೇಕು.ಕೇವಲ ಮಹಿಳೆಯರು ಶಿಕ್ಷಣ ಪಡೆದರೆ ಸಾಲದು ಸಾಮಾಜಿಕ ಕಟ್ಟುಪಾಡುಗಳನ್ನು ಕುರಿತು ಮಹಿಳೆಯರಿಗೆ ಅರಿವೆಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬೀನಾ ವೈಧ್ಯ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಡಾ.ಪುಷ್ಪಲತಾ ವೈಧ್ಯರವರು ಮಾತಾನಾಡಿ ಮಹಿಳೆಯರು ಸಾಮಾಜಿಕ ಕಟ್ಟುಪಾಡುಗಳನ್ನು ದಾಟಿ ಸಮಾಜ ಉನ್ನತ ಸ್ಥಾನಕ್ಕೆರಬೇಕು.ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಾಗ ಮಾತ್ರ ಒಂದು ಸುಸಂಸ್ಕೃತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.
ಅತಿಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದ ಮೊದಲು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ರಂಗೋಲಿ ಸ್ಪರ್ಧೆ ,ಅಡುಗೆ ತಯಾರಿಸುವ ಸ್ಪರ್ಧೆ ,ಪೆಪರ್ ಕ್ರಾಪ್ಟ್ ಹಾಗೂ ಬೇಬಿ ಸೋ ಇನ್ನಿತರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಮಹಿಳಾ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬಂದವು. ಪ್ರಿನ್ಸಿಪಾಲ್ ಮಾದವ್ ಪೂಜಾರಿ ಎಲ್ಲರನ್ನೂ ಸ್ವಾಗತಿಸಿದರು. ಪಿ. ಯು. ಸಿ ಯ ಪಾಂಶುಪಾಲರಾದ ನಯೀಮ್ ಗೋರಿ ಎಲ್ಲರನ್ನೂ ವಂದಿಸಿದರು .ಸಂಸ್ಥೆಯ ಶಿಕ್ಷಕರಾದ ಮಂಜುನಾಥ್ ಕಾರ್ಯಕ್ರಮವನ್ನು ನಿರ್ವಹಿಸಿದರು.

error: