April 27, 2024

Bhavana Tv

Its Your Channel

ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು: ಸಚಿವರಾದ ಶ್ರೀ ಮಂಕಾಳ್ ಎಸ್ ವೈದ್ಯ

ಮುರ್ಡೇಶ್ವರ ; ಪ್ರತಿಷ್ಠಿತ ಬೀನಾ ವೈದ್ಯ ಎಜ್ಯುಕೇಶನ್‌ ಟ್ರಸ್ಟ್ ವತಿಯಿಂದ ನಡೆದ‘ನಾಯಕತ್ವ ದಿನ’ ದ ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು.ನಾವು ಬಾಲ್ಯದಲ್ಲಿ ಪಟ್ಟ ಕಷ್ಠಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಇವತ್ತೀನ ಮಕ್ಕಳಿಗೆ ಎಲ್ಲಾರೀತಿಯ ಸೌಲಭ್ಯಗಳು ಬಾಲ್ಯದಲ್ಲಿಯೇ ದೊರಕುವುದರಿಂದ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಮುಂದೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾ¥ಕÀ ನಿರ್ದೇಶಕಿ ಶ್ರಿಮತಿ ಪುಷ್ಪಲತಾ ಎಂ ವೈದ್ಯರವರು ಮಾತನಾಡಿ ಶಿಕ್ಷಣವು ನಮಗೆ ಪ್ರಬುದ್ಧತೆಯನ್ನು ನೀಡುತ್ತದೆ, “ಜೀವನಕ್ಕಾಗಿ ಶಿಕ್ಷಣ ಉತ್ಕçಷ್ಠತೆಗಾಗಿ ಪ್ರಯತ್ನ” ನಾವೆಲ್ಲರೂ ಆ ಧ್ಯೇಯವನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳುತ್ತಾ ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ನಡೆದು ಬಂದದಾರಿಯ ಬಗ್ಗೆ ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಮಾಜ ಸೇವಕರಾದ ಎಸ್‌ಎಸ್‌ಕಾಮತ್‌ರವರು ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಒಂದು ಶ್ರೇಷ್ಠ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಪದವಿ ಕಾಲೇಜಿನ ಪ್ರಚಾರ್ಯರಾದ ಮಾಧವ ಪೂಜರಿಯವರು ಸ್ವಾಗತಿಸಿ, ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ನಯೀಮ್ ಗೋರಿಯವರು ವಂಧನಾರ್ಪಣೆಗೈದರು. ವಿದ್ಯಾರ್ಥಿಗಳಾದ ದಿನ್ಯ ನಾಯ್ಕ ಹಾಗೂ ಸಂದೇಶ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆಯ ನಂತರವಿದ್ಯಾರ್ಥಿಗಳಿAದ ಅನೇಕ ಸಾಂಸ್ಕçತಿಕ ಕಾರ್ಯಕ್ರಮಗಳು ಜರುಗಿದವು.

error: