October 4, 2024

Bhavana Tv

Its Your Channel

ಆರ್.ಎನ್.ಎಸ್ ದ್ವಿತೀಯ ಪಿಯುಸಿಉತ್ತಮ ಫಲಿತಾಂಶ

ಮುರ್ಡೇಶ್ವರ ; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಆರ್.ಎನ್ ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯವು ಉತ್ತಮ ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕು.ನಿರಂಜನ್ ಭಟ್ ಶೇ.97.16 ಅಂಕ ಪಡೆದು ಪ್ರಥಮ ಸ್ಥಾನ, ಕು.ಸೂರ್ಯ ನಾಯ್ಕ ಶೇ.96.83 ಅಂಕ ಪಡೆದು ದ್ವಿತೀಯ ಸ್ಥಾನ, ಕು.ಸೃಜನ್ ನಾಯ್ಕ ಶೇ.95.5 ಅಂಕ ಪಡೆದು ತೃತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕು.ರಕ್ಷಿತಾ ಕುಂಬಾರ ಶೇ.95.16 ಅಂಕ ಪಡೆದು ಪ್ರಥಮ ಸ್ಥಾನ, ಕು.ಅರ್ಚನಾ ನಾಯ್ಕ ಶೇ.92.33 ಅಂಕ ಪಡೆದು ದ್ವಿತೀಯ ಸ್ಥಾನ, ಕು.ಅಹಮ್ಮದ್ ಮಾಜೀನ್ ಶೇ.91 ಮತ್ತು ಕು.ಸತ್ಯೇಶ್ ಕಾಮತ್ ಶೇ.91 ಅಂಕದೊAದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 24 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಇವರಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಅಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

error: