November 27, 2023

Bhavana Tv

Its Your Channel

ತಾಲೂಕಾ ಮಟ್ಟದ ಸ್ವ ಉದ್ಯೋಗ ತರಬೇತಿ ಶಿಬಿರ

ಶಿರಾಲಿ : ಭಟ್ಕಳದ ಸಾರದಹೊಳೆಯ ಶ್ರೀ ಕ್ಷೇತ್ರ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇವರು ಶ್ರೀಮತಿ ವಿನೋದ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯವರ ನೇತೃತ್ವದಲ್ಲಿ ತಾಲೂಕಾ ಮಟ್ಟದ ಸ್ವ ಉದ್ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರದಲ್ಲಿ ವೃತ್ತಿಪರ ತರಬೇತುದಾರ ವಿವೇಕಾನಂದ ರಾಯ್ಕರ ಬಿಸ್ಕೇಟ್ ಸೇರಿದಂತೆ ಇನ್ನಿತರ ಕೆಲವು ತಿನಿಸುಗಳ ತಯಾರಿಕೆಯ ಕುರಿತಂತೆ ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ೨೫ ಹೆಚ್ಚು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ವರದಿ : ಈಶ್ವರ ನಾಯ್ಕ, ಬಂದರ

error: