April 26, 2024

Bhavana Tv

Its Your Channel

ಅಸಮರ್ಪಕ ಜಿಪಿಎಸ್ ಮೇಲ್ಮನವಿ ಸ್ವೀಕಾರಕ್ಕೆ ಇನ್ಕಾರ್;
ತಹಶೀಲ್ದಾರ್ ಕಚೇರಿ ಏದುರು ಬೃಹತ್ ಧರಣಿ, ಪ್ರತಿಭಟನೆ.

ಸಿದ್ಧಾಪುರ: ಅಸಮರ್ಪಕ ಜಿಪಿಎಸ್ ಮೇಲ್ಮನವಿ ಸ್ವಿಕರಿಸಲು ತಿರಸ್ಕರಿಸಿದ ಕುರಿತು ತಹಶೀಲ್ದಾರ್ ಕಚೇರಿ ಏದುರು ಧರಣಿ, ಪ್ರತಿಭಟನೆ, ಖಂಡನಾ ಸಭೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಗಮಿಸಲು ಘೋಷಣೆಯ ಹೋರಾಟಕ್ಕೆ ಮಣಿದು ಮೇಲ್ಮನವಿ ಸ್ವೀಕರಿಸಿದ ಘಟನೆಗಳು ಜರುಗಿದವು..

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಅತಿಕ್ರಮಣದಾರರ ತೀವ್ರ ಪ್ರತಿಭಟನೆಗಳು ಇಂದು ಜರುಗಿತು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅಸಮರ್ಪಕ ಜಿಪಿಎಸ್ ಕುರಿತು ಹೋರಾಟಗಾರರ ವೇದಿಕೆಯು ಉಚಿತವಾಗಿ ಮೇಲ್ಮನವಿ ಅಭಿಯಾನ ಜರುಗಿಸಿದ್ದು, ಪ್ರಥಮ ಹಂತದಲ್ಲಿ ಮೇಲ್ಮನವಿ ಸ್ವೀಕರಿಸಿ ತದನಂತರ ಹಿರಿಯ ಅಧಿಕಾರಿಗಳ ನಿರ್ಧೇಶನದಂತೆ ಸಿದ್ಧಾಪುರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೇಲ್ಮನವಿ ಸ್ವೀಕರಿಸಲು ಇನ್ಕರ್ ಮಾಡಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಅರಣ್ಯ ಅತಿಕ್ರಮಣದಾರರು ತಹಶೀಲ್ದಾರ್ ಕಚೇರಿ ಏದುರು ಪ್ರತಿಭಟನೆ ಜರುಗಿಸಿದರೂ. ಧರಣಿ ನೇತ್ರತ್ವವನ್ನ ಮಾರುತಿ ನಾಯ್ಕ ಹಲಗೇರಿ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖAಡ, ಕಾರ್ಲೂಯಿಸ್ ಫರ್ನಾಂಡಿಸ್ ಮಾವಿನಗುಂಡಿ, ದಿನೆಶ್ ನಾಯ್ಕ ಬೇಡ್ಕಣಿ, ಗೋವಿಂದ ಗೌಡ ಕಿಲವಳ್ಳಿ, ಕೆಟಿ ನಾಯ್ಕ ಕ್ಯಾದಗಿ, ಮಂಜ ಹರಿಜನ, ಪಾಂಡು ನಾಯ್ಕ ಚನ್ನಮಾಂವ್, ಹಜಿರಾ ಬೇಗಂ, ಕೃಷ್ಣಪ್ಪ ನಾಯ್ಕ, ಲಕ್ಷಿ ನಾಯ್ಕ ಚನ್ನಮಾಂವ್, ರೇಣುಕಾ ಕಾನಗೋಡ, ಇಲಿಯಾಸ್, ದೇವರಾಜ ಕೊಂಡ್ಲಿ, ಜಿಪಿ ನಾಯ್ಕ ಕಡಗೇರಿ, ಬಿಡಿ ನಾಯ್ಕ ಕುರಿಗೆತೋಟ ಮುಂತಾದವರು ಉಪಸ್ಥಿತರಿದ್ದರು.
ತಹಶೀಲ್ದಾರ್ ಮಧ್ಯಸ್ಥಿಕೆ:
ಸಿದ್ದಾಪುರ ತಹಶೀಲ್ದಾರ್ ಸಂತೋಷ ಭಂಡಾರಿ ಅವರು ಸ್ಥಳಕ್ಕೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಬಂಡಿ ಅವರನ್ನು ಕರೆಯಿಸಿ ಅರ್ಜಿಗಳ ಸ್ವೀಕಾರಕ್ಕೆ ನಿರ್ಧೇಶನ ನೀಡಿದ ಹಿನ್ನೆಲೆಯಲ್ಲಿ ಹೋರಾಟಗಾರರು ಧರಣಿಯನ್ನು ಹಿಂದಕ್ಕೆ ಪಡೆದರು.
ಖ0ಡನಾ ಸಭೆ:
ಸಿದ್ಧಾಪುರದ ಗಂಗಾಬಿಕ ದೇವಸ್ಥಾನದ ಆವರಣದಲ್ಲಿ ಜರುಗಿದ ಅರಣ್ಯ ಅತಿಕ್ರಮಣದಾರರ ಅಸಮರ್ಪಕ ಜಿಪಿಎಸ್ ಮೇಲ್ಮನವಿಯನ್ನ ಸ್ವೀಕರಿಸುವುದನ್ನು ಕಾನೂನು ಬಾಹಿರವಾಗಿ ಸ್ಥಗಿತಗೊಳಿಸಿರುವುದಕ್ಕೆ ಖಂಡಿಸುವ ನಿರ್ಣಯವನ್ನ ತೆಗೆದು ಕೊಳ್ಳಲಾಯಿತೆಂದು ಅಧ್ಯಕ್ಷರವೀಂದ್ರನಾಯ್ಕ ಹೇಳಿದರು.

error: