May 21, 2024

Bhavana Tv

Its Your Channel

ಅರಣ್ಯ ಅತಿಕ್ರಮಣದಾರರಿಂದ ಸ್ವಾತಂತ್ರ್ಯೋತ್ಸವ:ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ. . ? ಎಂಬ ಘೋಷಣೆ ಹಾಗೂ ಸೈನಿಕ ಸನ್ಮಾನದೊಂದಿಗೆ ವಿನೂತನ ಕಾರ್ಯಕ್ರಮ.

ಶಿರಸಿ: ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ೭೫ ನೇ ಸ್ವಾತಂತ್ರ್ಯೋತ್ಸವವವನ್ನು ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ. . . . . ? ಎಂಬ ಘೋಷಣೆಯೊಂದಿಗೆ ಸೈನಿಕ ನವೀನ್ ಹರಿಹರ ನಾಯ್ಕ, ಓಂಕಾರ ಅವರಿಗೆ ಸನ್ಮಾನ ಮಾಡಿ ಅರ್ಥಪೂರ್ಣವಾದ ಹಾಗೂ ವಿಶೇಷವಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಸ್ವಾತಂತ್ರ್ಯೋತ್ಸವ ವನ್ನು ಆಚರಿಸಿದರು.

ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಇಂದು ನೂರಾರು
ಅರಣ್ಯ ಅತಿಕ್ರಮಣದಾರರು ಭಾರತದ ಧ್ವಜದೊಂದಿಗೆ ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತ್ರಂತ್ರö್ಯ. . . . . ?
ಎಂಬ ಫಲಕ ಪ್ರದರ್ಶನಗೊಳಿಸಿ ಅರಣ್ಯವಾಸಿಗಳ ಸಮಸ್ಯೆಯನ್ನು ಸರಕಾರದ ಗಮನ ಸೆಳೆದು, ಸಿದ್ಧಾಪುರ
ತಾಲೂಕಿನ ತಂಡಾಗುAಡಿ ಗ್ರಾಮ ಪಂಚಾಯಿತಿ ಓಂಕಾರ ಗ್ರಾಮದ ಇತ್ತಿಚಿಗೆ ಸೈನಿಕ ಹುದ್ದೆಗೆ ಆಯ್ಕೆಯಾಗಿ
ಸೈನಿಕ ತರಬೇತಿಯಲ್ಲಿ ಇರುವ ನವಿನ್ ಹರಿಹರ ನಾಯ್ಕ, ಓಂಕಾರ ಅವರನ್ನು ಸನ್ಮಾನಿಸಿ ಶ್ರದ್ಧೆ,
ಗೌರವಪೂರ್ವಕವಾಗಿ ಅತಿಕ್ರಮಣದಾರರು ಸ್ವಾತಂತ್ರ್ಯೋತ್ಸವ ಆಚರಿಸಿರುವುದು ವಿಶೇಷವಾಗಿತ್ತು.
ನೂರಾರು ಅರಣ್ಯ ಅತಿಕ್ರಮಣದಾರರು ಹೋರಾಟ ವೇದಿಕೆಯ ಕಾರ್ಯಾಲಯದಿಂದ ಝೂ ಸರ್ಕಲ್
ವರೆಗೆ ಭಾರತಾಂಬೆಯ ಧ್ವಜ ಹಿಡಿದುಕೊಂಡು ಪಾದಯಾತ್ರೆ ಜರುಗಿಸಿದ ನಂತರ ಕಾರ್ಯಾಲಯದಲ್ಲಿ ಸಭೆ ಜರುಗಿತು.

ದೇಶದ ಪ್ರತಿಯೊಬ್ಬ ಪ್ರಜೆಯು ದೇಶಪ್ರೇಮ ಬೆಳೆಸುಕೊಳ್ಳುತ್ತಾ, ದೇಶದ್ರೋಹ ಕಾರ್ಯ ಹತ್ತಿಕ್ಕಬೇಕು. ದೇಶಬಿಟ್ಟು ಬದುಕಲು ಸಾಧ್ಯವಿಲ್ಲ. ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ತಾವೆಲ್ಲರೂ ಬದ್ಧರಾಗಬೇಕು ಎಂದು ಸೈನಿಕ ನವಿನ್ ಹರಿಹರ ನಾಯ್ಕ, ಓಂಕಾರ ಅವರು ಹೇಳಿದರು.

ಭೂಮಿ ಹಕ್ಕುದಾರರಿಗೆ ಅಧಿಕಾರಿಗಳ ಕಿರುಕುಳ, ದೌರ್ಜನ್ಯ ಒಕ್ಕಲೆಬ್ಬಿಸುವ ಬಗ್ಗೆ ಅರಣ್ಯವಾಸಿಗಳ ಮೇಲೆ ಕಾನೂನು ಕ್ರಮ ಜರಗುತ್ತಿರುವದು ಮತ್ತು ಸರ್ವೋಚ್ಛ ನ್ಯಾಯಾಲಯದಿಂದ ಒಕ್ಕಲೆಬ್ಬಿಸುವಿಕೆಯ ಭಿತಿಯಿಂದ ಭೂಮಿ ಸಾಗುವಳಿದಾರರು ಅತಂತ್ರ ಮತ್ತು ನಿರಾಶ್ರಿತರಾಗುವ ಭಯದಲ್ಲಿರುವುದರಿಂದ ಭೂಮಿ ಹಕ್ಕಿನ ಸಮಸ್ಯೆ ಸರಕಾರದ ಗಮನ ಸೆಳೆಯಲು ಭೂಮಿ ಹಕ್ಕು ವಂಚಿತರಿಗೆಲ್ಲಿಸ್ವಾತಂತ್ರ್ಯ . . . ? ಎಂಬ
ಘೋಷಣೆಯೊAದಿಗೆ ಸ್ವಾತಂತ್ರ್ಯೋತ್ಸವ ವನ್ನು ಆಚರಿಸಿದ್ದೇವೆ. ಭೂಮಿ ಹಕ್ಕು ಸಂವಿಧಾನಾತ್ಮಕವಾದ ಹಕ್ಕಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈನಿಕ ಪಾಲಕರಾದ ಹರಿಹರ ನಾಯ್ಕ ಹುಕ್ಕಳಿ, ಹೋರಾಟದ ಧುರಿಣರಾದ ಇಬ್ರಾಹಿಂ
ಸಾಬ, ಲಕ್ಷö್ಮಣ ಮಾಳ್ಳಕ್ಕನವರ, ಶಿವಪ್ಪ ಹಂಚಿನಕೇರಿ, ದ್ಯಾವಾ ಗೌಡ ಹೆಗ್ಗೆ, ಸೀತಾರಾಮ ಗೌಡ ಹುಕ್ಕಳಿ,
ರಾಜು ನರೇಬೈಲ್, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸ್ವಾಮಿ ಹಿರೇಮಠ, ಸೀತಾರಾಮ ಗೌಡ
ಸಿದ್ಧಾಪುರ, ಎಮ್ ಪಿ ಗೌಡ ಹುಕ್ಕಳಿ, ರಾಜು ಉಗಾ ್ರಣಕರ, ಮಧುಕರ ಜೋಗಿನಮನೆ, ಮಾಬ್ಲೇಶ್ವರ
ನಾಯ್ಕ
ಜೋಗಿನಮನೆ, ವಿನಾಯಕ ನಾಯ್ಕ ಜೋಗಿನಮನೆ, ಸತ್ಯಾನಂದ ನಾಯ್ಕ ಜೋಗಿನಮನೆ, ಭದ್ರಾ ಗೌಡ ಹೆಗ್ಗೆ
ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸತೀಶ ನಾಯ್ಕ ಮದರಳ್ಳಿ ಅವರು ಸ್ವಾಗತಿಸಿದರು, ನಾಗಪತಿ ಗೌಡ ಹುತ್ತಗಾರ
ಪ್ರಾಸ್ತವಿಕವಾಗಿ ಮಾತನಾಡಿದರು, ಮಂಜುನಾಥ ನಾಯ್ಕ ಹುತ್ತಗಾರ ವಂದನಾರ್ಪಣೆ ಮಾಡಿದರು.

error: