April 27, 2024

Bhavana Tv

Its Your Channel

ಡಾ. ಕೆ .ಎಸ್. ನಾರಾಯಣಾಚಾರ್ಯರವರಿಗೆ ಶ್ರದ್ಧಾಂಜಲಿ

ವರದಿ :-ವೇಣುಗೋಪಾಲ ಮದ್ಗುಣಿ

ಸಿರಸಿ:- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ನೊಂ) ಬೆಂಗಳೂರು, ಜಿಲ್ಲಾ ಘಟಕ ಉತ್ತರ ಕನ್ನಡ, ತಾಲೂಕು ಘಟಕ ಶಿರಸಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ ಜಿಲ್ಲಾ ಘಟಕ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಂಯುಕ್ತಾಶ್ರಯದಲ್ಲಿ ; ಇತ್ತೀಚೆಗೆ ನಿಧನರಾದ ಬಹುಭಾಷಾ ಪಂಡಿತ, ವಾಗ್ದೇವಿ ವರಸಂಜಾತರಾದ ಡಾ. ಕೆ. ಎಸ್.ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ ಉಪನ್ಯಾಸಕಿ ಭವ್ಯ ಹಳೆಯೂರು ಅವರು ಮಾತನಾಡಿ ಪ್ರೊ. ಕೆ. ಎಸ್. ನಾರಾಯಣಾಚಾರ್ಯರು ಮಂಡಿಸಿದ “ಜನರನ್ನು ಒಗ್ಗೂಡಿಸುವುದೇ ಧರ್ಮ” ಎನ್ನುವ ಧರ್ಮದ ವ್ಯಾಖ್ಯಾನವನ್ನು ತಿಳಿಸುತ್ತಾ ಅವರ ಕೃತಿಗಳ ಸಾರವನ್ನು ಪ್ರಸ್ತುತಪಡಿಸಿದರು. ದೇವಕಿಯ ಅಂತರಾಳವನ್ನು ತೆರೆದಿಟ್ಟ ಕೃತಿಯ ಬಗ್ಗೆ ಸೂಚ್ಯವಾಗಿ ವಿವರಿಸಿ, ಇಂದಿನ ಪೀಳಿಗೆ ಅವರ ಕೃತಿಗಳನ್ನು ಅವಶ್ಯವಾಗಿ ಓದಲೇಬೇಕೆಂದು ಹೇಳಿದರು.
ಗಾಯತ್ರಿ ಗೆಳೆಯರ ಬಳಗದ ಸಂಘಟಕರಾದ ಪ್ರೊ.ಡಿ.ಎಮ್. ಭಟ್ಟ ಕುಳವೆ ಅವರು ಹಿಂದೆ ತಾವು ಧಾರವಾಡದಲ್ಲಿದ್ದಾಗ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಉಪನ್ಯಾಸಗಳಿಗೆ ಹೋಗುತ್ತಿದ್ದುದ್ದನು ಸ್ಮರಿಸಿಕೊಳ್ಳುತ್ತಾ ” ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭವಾಗಿದ್ದರು”ಎAದು ನುಡಿದು, ಅವರ ಕುರಿತಾದ ವಿವರಗಳನ್ನು ಪ್ರಸ್ತುತಪಡಿಸಿದರು.
ಕೇ.ಕ.ಸಾ.ವೇ.ಯ ಜಿಲ್ಲಾಧ್ಯಕ್ಷರಾದ ಶಿವಲೀಲಾ ಹುಣಸಗಿ ಅವರು ಮಾತನಾಡಿ “ಶ್ರೇಷ್ಠ ವಿದ್ವಾಂಸ, ತತ್ವಜ್ಞಾನಿ, ಬಹುಭಾಷಾ ಪಂಡಿತ, ನೇರ ನಡೆನುಡಿಯ ವ್ಯಕ್ತಿ, ಭಾರತೀಯ ಸಂಸ್ಕೃತಿಯ ಪ್ರಖರ ವಕ್ತಾರರನ್ನು ನಾವು ಕಳೆದುಕೊಂಡಿದ್ದೇವೆ. ಸಾರಸ್ವತ ಲೋಕಕ್ಕೆ ಹಾಗೂ ಸಮಾಜಕ್ಕೆ ನಷ್ಟವಾಗಿದೆ” ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿಯವರು ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಆಚಾರ್ಯರೊಂದಿಗೆ ಕಳೆದ ಸಮಯವನ್ನು ನೆನೆದು ಅವರ ಪ್ರವಚನಗಳು ಹೊತ್ತಿಗೆ ರೂಪ ಪಡೆಯಲು ಕವಿ ಬೇಂದ್ರೆಯವರು ಪ್ರಮುಖ ಕಾರಣವೆಂಬುದನ್ನು ಸ್ಮರಿಸಿಕೊಂಡರು.ಕಥೆಗಾರ, ವಿಕಾಸ ವಿಶ್ವಸ್ಥ ಮಂಡಳಿಯ ಸಂಸ್ಥಾಪಕರಾದ ಡಿ.ಎಸ್ ನಾಯ್ಕರು ಮಾತನಾಡಿ “ಶ್ರೀಯುತರ ಶರೀರ ನಿಧನ ಹೊಂದಿದ್ದು ಅವರ ಆತ್ಮ ಪುಸ್ತಕರೂಪದಲ್ಲಿ ಇಂದಿಗೂ ಎಂದೆAದಿಗೂ ಜೀವಂತವಾಗಿರುತ್ತವೆ. ಅವರ ಚಿಂತನೆಗಳು ಅಮರ” ಎನ್ನುತ್ತಾ ಅವರ ಶ್ರೀ ಕೃಷ್ಣಾವತಾರದ ಕೊನೆಯ ದಿನಗಳು ಕೃತಿಯ ಕುರಿತು ಬೆಳಕು ಚೆಲ್ಲಿದರು.
ಒಟ್ಟಾರೆ ಒಂದುವರೆ ಗಂಟೆಗೂ ಹೆಚ್ಚು ಕಾಲ ನಡೆದ ನುಡಿನಮನದಲ್ಲಿ ಪ್ರಾರ್ಥನೆಯನ್ನು ಕವಯತ್ರಿ ರೇವತಿ ಭಟ್ಟ, ಹೊಸ್ಕೆರೆ. ನೆರವೇರಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತ ಗಣ್ಯರಿಗೆ ವಿನಯಪೂರ್ವಕವಾದ ಸ್ವಾಗತವನ್ನು ಕ.ಚು.ಸಾ.ಪ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹೇಶಕುಮಾರ ಹನಕೆರೆ ನೆರವೇರಿಸಿದರು. ಕೇ.ಕ.ಸಾ.ವೇ. ತಾಲ್ಲೂಕು ಘಟಕ ಶಿರಸಿಯ ಅಧ್ಯಕ್ಷರಾದ ಕೃಷ್ಣ ಪದಕಿಯವರು ಡಾ.ನಾರಾಯಣಾಚಾರ್ಯರವರ ಸಾಧನೆ, ಗೌರವ ಸಮ್ಮಾನಗಳ ಕುರಿತು ಉಲ್ಲೇಖಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು

error: