May 16, 2024

Bhavana Tv

Its Your Channel

ವ್ಯಾಪಕ ಅನಧಿಕೃತ ಸಾರಾಯಿ ವ್ಯವಹಾರ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ

ಶಿರಸಿ: ವ್ಯಾಪಕವಾಗಿ ಸಿದ್ಧಾಪುರ ತಾಲೂಕಿನಾದ್ಯಂತ ಅನಧೀಕೃತ ಸಾರಾಯಿ ವ್ಯವಹಾರ ಜರಗುತ್ತಿದ್ದರೂ ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿರುವುದಲ್ಲದೇ, ತಕ್ಷಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ, ಇಲಾಖೆಯ
ಕಛೇರಿಯ ಮುಂದೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಇಲಾಖೆಯ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಘಟನೆ ಜರುಗಿತು.

ಸಿದ್ಧಾಪುರ ತಾಲೂಕಿನ ಅಣಲೇಬೈಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಬಂದತಹ ಪ್ರಮುಖರು ಇಂದು ಶಿರಸಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ಮಹೇಂದ್ರ ನಾಯ್ಕ ಅವರಿಗೆ ಮನವಿ ನೀಡಿ ಮೇಲಿನಂತೆ ಅಗ್ರಹಿಸಿದರು.
ದಿನನಿತ್ಯ ಸಾರಾಯಿ ಕುಡಿದು ರಸ್ತೆಮೇಲೆ ಬೀಳುತ್ತಾರೆ, ಮನೆಯಲ್ಲಿ ಶಾಂತತೆ ಇಲ್ಲ, ಕೆಲಸಕ್ಕೆ ಹೊಗುವುದಿಲ್ಲ, ದಿನ ನಿತ್ಯ ಕುಡಿಯುವುದರಿಂದ ಕುಟುಂಬದ ನೆಮ್ಮದಿ ಕೆಟ್ಟಿದೆ, ಕುಡಿದು ಬಿದ್ದವರನ್ನ ಮಧ್ಯರಾತ್ರಿ ಹೋಗಿ ಎಬ್ಬಿಸಿಕೊಂಡು ಮನೆಗೆ
ತರಬೇಕು, ಅನಧೀಕೃತವಾಗಿ ಕಂಡ ಕಂಡಲ್ಲಿ ಸಾರಾಯಿ ಮಾರಲಿಕ್ಕೆ ಕಾನೂನು ಪರವಾನಿಗೆ ಕೋಡುತ್ತದೆಯೋ ಎಂದು ಮಹಿಳೆಯರು ಆಕ್ರೋಶ ಭರಿತವಾಗಿ ಅಧಿಕಾರಿಗಳಿಗೆ ಕೇಳಿದರು.
ಸರೋಜಾ ನಾಯ್ಕ, ಶೋಭಾ ಭೋವಿವಡ್ಡರ್, ಲೀಲಾವತಿ ಹೆಗಡೆ, ಮಂಜುನಾಥ ನಾಯ್ಕ, ಕರ್ಣಕರ ಹೆಗಡೆ, ಈರ ಬೀರಾ ಗೌಡ, ಪಂಚಾಯತ ಸದಸ್ಯೆ ಮಂಗಲಾ ಮುಕ್ರಿ, ಶಾರದಾ ಜಿ ಹೆಗಡೆ, ಲೋಕೇಶ್ ಪಿ ಮಡಿವಾಳ, ಹರೀಶ ವಿ ಮಡಿವಾಳ,
ಶ್ರೀಕಾಂತ ಪಿ ನಾಯ್ಕ, ಮಂಜುನಾಥ ಎಮ್ ಬಡಗಿ, ಗೌರಿ ರಾಮ ಗೌಡ ಮುಂತಾದವರು ನಿಯೋಗದಲ್ಲಿ ಇದ್ದರು.
ಹೆಗ್ಗರಣೆ ಗ್ರಾಮ ಪಂಚಾಯತ ಅಧ್ಯಕ್ಷ ರಾಜಾರಾಮ ಹೆಗಡೆ ಬೆಳೆಕಲ್, ಸದಸ್ಯ ರಾಘವೇಂದ್ರ ಹೆಗಡೆ ಇಟ್ಲೋಣಿ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ಅಬಕಾರಿ ನೀರಿಕ್ಷಕರು ಜ್ಯೋತಿಶ್ರೀ
ನಾಯ್ಕ, ಅಬಕಾರಿ ಉಪ ನೀರಿಕ್ಷಕರು ಡಿ ಎನ್ ಶಿರಸಿಕರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

error: