May 2, 2024

Bhavana Tv

Its Your Channel

ಅರಣ್ಯ ಅಧಿಕಾರಿಗಳ ಕಾನೂನು ಬಾಹಿರ ಕೃತ್ಯ ;ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ ಒಕ್ಕಲೆಬ್ಬಿಸುವ ಪ್ರಕ್ರೀಯೆ 15 ದಿನ ಸ್ಥಗಿತ.

ಶಿರಸಿ: ಜಿಲ್ಲೆಯಲ್ಲಿ ನಿರಂತರ ಅರಣ್ಯವಾಸಿಗಳಿಂದ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ, ಕಾನೂನು ಬಾಹಿರ ಒಕ್ಕಲೆಬ್ಬಿಸುವಿಕೆ, ವನ್ಯ ಪ್ರಾಣಿ ಬೆಳೆನಷ್ಟ ನಿಯಂತ್ರಿಸುವಲ್ಲಿ ವೈಪಲ್ಯ, ಅತೀವೃಷ್ಟಿ ಮನೆ ರಿಪೇರಿಗೆ ಅವಕಾಶ ನಿಡದೇ ಇರುವುದು, ಅರಣ್ಯ ಸಿಬ್ಬಂದಿಗಳ ನಡವಳಿಕೆ ಮುಂತಾದ ಅರಣ್ಯ ಇಲಾಖೆಯ ಕ್ರಮದ ಕುರಿತು ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ, ಪ್ರಶ್ನೆಗಳ ಸುರಿಮಳೆ, ಸ್ಪಷ್ಟ ಉತ್ತರಕ್ಕೆ ಧರಣಿ, ಕಾನೂನು ಬಾಹಿರ ಕೃತ್ಯಕ್ಕೆ ಪ್ರಶ್ನೆಗಳ ಸುರಿಮಳೆಯ ಪ್ರಸಂಗಗಳು ಇಂದು ಜರುಗಿದವು. ಅಲ್ಲದೇ, ಕಾನೂನು ಬಾಹಿರ ಕೃತ್ಯದ
ಕುರಿತು ಕಾರ್ಮಿಕ ಸಚಿವರನ್ನು ಪೋನಿನಲ್ಲಿ ಸಂಪರ್ಕಿಸುವ ಕಾರ್ಯ ಜರುಗಿದವು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಉಪಸ್ಥಿತಿಯಲ್ಲಿ ಇಂದು ಶಿರಸಿ ಅರಣ್ಯ ಸಂರಕ್ಷಣಾಧಿಕಾರಿ, ಕೇನರಾ ಸರ್ಕಲ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಮೇಲಿನ ಘಟನೆಗಳು ಜರುಗಿದವು.
ಜಿಲ್ಲಾದ್ಯಂತ ಆಗಮಿಸಿದ ಅತಿಕ್ರಮಣದಾರರು ಅರಣ್ಯ ಸಿಬ್ಬಂದಿಗಳ ಅಮಾನವೀಯತೆಯ ಕೃತ್ಯ, ವಿನಾಕಾರಣ ಒಕ್ಕಲೆಬ್ಬಿಸುವಿಕೆ ನೋಟಿಸ್ ನೀಡುವುದು, ಸಾಗುವಳಿ ಕ್ಷೇತ್ರದಲ್ಲಿ ಅಗಳ ಹೊಡೆಯುವುದು, ಪ್ರತಿವರ್ಷ ಅರಣ್ಯವಾಸಿಗಳ ಸಾಗುವಳಿ ಬೆಳೆಗೆ ವನ್ಯಪ್ರಾಣಿಗಳಿಂದ ನಷ್ಟಕ್ಕೆ ಒಳಗಾಗುವ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಅತೀವೃಷ್ಟಿಯಲ್ಲಿ ಬಿದ್ದಂತಹ ಮನೆಗಳ ಪುನರ್ ನಿರ್ಮಾಣಕ್ಕೆ ಕಡಿವಾಣ ಹಾಕುತ್ತಿರುವ ಸನ್ನಿವೇಶಗಳ ಪೋಟೋ ಹಾಗೂ ದೌರ್ಬಲ್ಯವೆಸಗುತ್ತಿರುವ ಚಿತ್ರಗಳನ್ನ ಪ್ರದರ್ಶಿಸುತ್ತ ಅರಣ್ಯ ಸಿಬ್ಬಂದಿಗಳ ಕೃತ್ಯಕ್ಕೆ ತೀವ್ರವಾಗಿ
ಖಂಡಿಸಿದರು.
ಜಿಲ್ಲಾದ್ಯAತ ಆಗಮಿಸಿದ ಹೋರಾಟಗಾರರ ಪ್ರಮುಖರಾದ ಜಿಎಮ್ ಶೆಟ್ಟಿ ಅಂಕೋಲಾ, ಅಂಕೋಲಾ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ಯಲ್ಲಾಪುರ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ,ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸಂತೋ¸ಷ ಗಾವಡಾ ಜೋಯಿಡಾ, ಸಾರಂಬಿ ಶೇಖ್ ಕುಮಟ, ಶೇಖಯ್ಯ ಹಿರೇಮಠ, ನರಸಿಂಹ ನಾಯ್ಕ ಉಮ್ಮಚಗಿ, ಶಿವಾನಂದ ಪೂಜಾರಿ ಜಡ್ಡಿಗದ್ದೆ, ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ದೇವರಾಜ ಮರಾಠಿ, ಚಂದ್ರು ನಾಯ್ಕ, ಮೋಹನ ನಾಯ್ಕ ಅಂಡಗಿ, ಅರವಿಂದ್ ಗೌಡ ಅಂಕೋಲಾ, ದೇವರಾಯ ನಾಯ್ಕ
ಅಂಕೋಲಾ, ಚಂದ್ರಶೇಖರ್ ನಾಯ್ಕ ಮುಡಸಾಲಿ ಮುಂತಾದವರು ಜಿಲ್ಲಾದ್ಯಂತ 300 ಕ್ಕೂ ಮಿಕ್ಕಿ ಪ್ರಮುಖರು ಭಾಗವಹಿಸಿದ್ದರು.
ಸರಕಾರ ಮತ್ತು ಮಂತ್ರಿಗಳ ಮರ್ಯಾದೆ ಹರಾಜಿಗೆ ಹಾಕಬೇಡಿ :
ಸರಕಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ವಿರುದ್ಧ ಸ್ಪಷ್ಟ ಸೂಚನೆ ನೀಡಿದಾಗಿಯೂ ಕಾನೂನಿನ ಆದೇಶ ಮತ್ತು ಸರಕಾರದ ಆದೇಶ ಜಿಲ್ಲೆಯಲ್ಲಿ ಪದೇ ಪದೇ ಉಲ್ಲಂಘನೆ ಮಾಡುತ್ತೀದ್ದೀರಿ. ನಿಮ್ಮ ಈ ಕೃತ್ಯದಿಂದ ಸರಕಾರ ಮತ್ತು ಮಂತ್ರಿಗಳ ಮರ್ಯಾದೆ ಹರಾಜಿಗೆ ಹಾಕಬೇಡಿ ಅಂತ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಒಕ್ಕಲೆಬ್ಬಿಸುವ ಪ್ರಕ್ರೀಯೆ 15 ದಿನ ಸ್ಘಗಿತ :
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಪ್ರಕ್ರೀಯೆಗೆ ಸರಕಾರದ ಅಂತಿಮ ಆದೇಶ ಜರಗುತ್ತಿದ್ದು 15 ದಿನಗಳವರೆಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರೀಯೆ ಸ್ಥಗಿತಗೊಳಿಸಲಾಗುವುದು. ಅರಣ್ಯವಾಸಿಗಳ ದೌರ್ಜನ್ಯ ನಿಯಂತ್ರಿಸಲು ಕ್ರಮ ಜರುಗಿಸಲಾಗುವುದು, ಅಸಮರ್ಪಕ ಜಿಪಿಎಸ್ ಕಾರ್ಯದ ಕುರಿತು ಪುನರ್ ಪರಿಶಿಲಿಸುವ ಕುರಿತು ಅರಣ್ಯ ಹಕ್ಕು ಕಾಯಿದೆ ಸಮಿತಿಯಲ್ಲಿ ನಿರ್ಧರಿಸುವುದು, 1978 ರ
ಪೂರ್ವದ ಅತಿಕ್ರಮಣ ಮಂಜೂರಿಗೆ ಶೀಘ್ರ ಕ್ರಮ ಜರುಗಿಸಲಾಗುವುದು, ಅತೀವೃಷ್ಟಿಯಿಂದ ಉಂಟಾದ ವಾಸ್ತವ್ಯದ ಇಮಾರತ್ತಿನ ಕಟ್ಟಡದ ದುರಸ್ಥಿಗೆ ತೊಂದರೆ ಕೊಡದೇ ಇರುವುದು, ವನ್ಯಪ್ರಾಣಿ ಹಾವಳಿಯ ಕುರಿತು ಜೋಯಿಡಾ ಮತ್ತು ಮುಂಡಗೋಡ ಸ್ಥಳ್ಕಕೆ ಭೇಟಿ ಕೊಡಲಾಗುವುದು, ದೌರ್ಜನ್ಯ ವೆಸಗಿದ ಹಳಿಯಾಳದ ಭಾಗಮತಿ ಮತ್ತು ಹೊನ್ನಾವರದ ಜಲವಳ್ಳಿ ಕರ್ಕಿ ಸ್ಥಳಕ್ಕೆ ಭೇಟಿ ನೀಡಲಾಗುವುದೆಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ
ಸಭೆಯಲ್ಲಿ ಹೇಳಿದರು.
ಅರಣ್ಯ ಅಧಿಕಾರಿಗಳಾದ ಡಿಎಫ್‌ಓ ಅಜಯ್, ಎಸಿಎಫ್ ರಘು, ಅಶೋಕ ಅಲಗಾರ ಮುಂತಾದ ಸಿಬ್ಬಂದಿಗಳು ಉಪಸ್ಥಿತರಿದ್ದರು

error: