May 17, 2024

Bhavana Tv

Its Your Channel

ಪೌರಕಾರ್ಮಿಕರ ಹೋರಾಟಕ್ಕೆ ರವೀಂದ್ರ ನಾಯ್ಕ ಬೆಂಬಲ ; ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಅಗ್ರಹ.

ಶಿರಸಿ: ರಾಜ್ಯಾದ್ಯಂತ ಸೇವಾ ಬದ್ರತೆಗೆ ಅಗ್ರಹಿಸಿ ರಾಜ್ಯಾದ್ಯಂತ ಮುನ್ಸಿಪಾಲ್ ಕಾರ್ಮಿಕರು ಹಮ್ಮಿಕೊಂಡ ಹೋರಾಟಕ್ಕೆ ಸಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಬೆಂಬಲ ವ್ಯಕ್ತಪಡಿಸುತ್ತಾ, ರಾಜ್ಯಪಾಲರು ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಒದಗಿಸಿಕೋಡಬೇಕೆಂದು ಒತ್ತಾಯಿಸಿದರು.

ಅವರು ಇಂದು ಶಿರಸಿ ನಗರಸಭಾ ಕಚೇರಿಯ ಎದುರುಗಡೆ ಜಿಲ್ಲಾ ಮತ್ತು ತಾಲೂಕ ಮುನ್ಸಿಪಾಲ್ ಕಾರ್ಮಿಕರ ಸಂಘದ ಆಶ್ರಯದಲ್ಲಿ ಜರಗುತ್ತಿರುವ ಅನಿರ್ದಿಷ್ಟ ಧರಣಿ, ಮುಷ್ಕರ ಸ್ಥಳಕ್ಕೆ ಭೇಟಿಕೊಟ್ಟು ಧರಣಿ ನಿರತರೊಂದಿಗೆ ಮಾತನಾಡುತ್ತಾ ಈ ಮೇಲಿನಂತೆ ಹೇಳಿದರು.

ಪೌರಕಾರ್ಮಿಕರ ಸಮಾಜ ಸ್ಥಿತಿಗತಿ ಮತ್ತು ಕ್ಷೇಮಾಭಿವೃದ್ಧಿ ಅಧ್ಯಯನ ನಡೆಸಿದ ಬೆಂಗಳೂರು ವಿಶ್ವವಿದ್ಯಾಲಯದ ಉನ್ನತ ಮಟ್ಟದ ತಂಡ ಶೀಫಾರಸ್ಸಿನಂತೆ ಸಫಾಯಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೋಡಬೇಕೆಂದು ಅಗ್ರಹಿಸಿದರು. ಇಲ್ಲದಿದ್ದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಧರಣಿ ನಿರತ ಪ್ರಮುಖರಾದ ಕಾರ್ಮಿಕ ಧುರಿಣ ನಾಗಪ್ಪ ಎಮ್ ನಾಯ್ಕ, ಗಣಪತಿ ಹರಿಜನ, ಕಿರಣ ಹರಿಜನ, ಅನಿಲ್ ಹರಿಜನ, ಮಹೇಶ ಹರಿಜನ, ಶ್ರೀಕಾಂತ ನಾಯ್ಕ, ಸುಶೀಲಾ ಹರಿಜನ, ಗಣೇಶ ದೇಸಳ್ಳಿ, ಸಂತೋಷಹರಿಜನ ಮುಂತಾದ ಪ್ರಮುಖರೊಂದಿಗೆ ಚರ್ಚಿಸಿದರು

error: