April 27, 2024

Bhavana Tv

Its Your Channel

ಬೆಳೆ ನಷ್ಟ ಪರಿಹಾರ ವಿತರಣೆ ;ಅರಣ್ಯ ಅತಿಕ್ರಮಣದಾರರಿಗೆ ತಾರತಮ್ಯ ಬೇಡ.

ಶಿರಸಿ: ತೀವ್ರ ಅತೀವೃಷ್ಟಿಯಿಂದ ಸರಕಾರ ಘೋಷಿಸಿದ ಮಾನದಂಡದ ಅಡಿಯಲ್ಲಿಯೇ, ಅರಣ್ಯ ಅತಿಕ್ರಮಣದಾರರಿಗೂ ನೀಡಬೇಕು. ಅಲ್ಲದೇ, ಕಂದಾಯ ಭೂಮಿ ಹಕ್ಕುದಾರರಿಗೆ ನೀಡುವ ನೀತಿಯನ್ನೇ ಅರಣ್ಯ ಅತಿಕ್ರಮಣದಾರರ ವಾಸ್ತವ್ಯ ಹಾಗೂ ಸಾಗುವಳಿ ಬೆಳೆಗೆ ನಷ್ಟವಾಗಿರುವವರಿಗೂ ಪ್ಯಾಕೇಜ್ ಆಧಾರದ ಮೇಲೆ ಆರ್ಥಿಕ ಸಹಾಯ ನೀಡಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.

ಅವರು ಶಿರಸಿ ತಾಲೂಕಿನ ಅತೀವೃಷ್ಟಿಯಿಂದ ಹಾನಿಗೊಳಗಾದ ಅತಿಕ್ರಮಣದಾರರ ಮನೆಗಳಿಗೆ ಭೇಟಿಕೊಟ್ಟಂತಹ ಸಂದರ್ಭದಲ್ಲಿ ಹೇಳಿದರು.
ಸರಕಾರವು ಅರಣ್ಯ ಅತಿಕ್ರಮಣದಾರರಿಗೆ ಮಣ್ಣಿನ ಗೋಡೆಯ ಮನೆಗಳಿಗೆ ಪ್ರಕೃತಿ ವಿಕೋಪದಿಂದ ಭಾಗಶಃ ಹಾನಿಗೊಳಗಾಗಿರುವುದಕ್ಕೆ ಮೂರು ಸಾವಿರದ ಎರಡು ನೂರು ರೂಪಾಯಿ ನೀಡುತ್ತಿರುವುದು ಖೇದಕರ. ಸರಕಾರ ಪ್ಯಾಕೇಜ್ ಆಧಾರದಲ್ಲಿ ತಾರತಮ್ಯವಿಲ್ಲದೇ ಆರ್ಥಿಕ ಪರಿಹಾರ ನಿಧಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಸರ್ವೇಗೆ ತೀವ್ರ ಗತಿಗೆ ಅಗ್ರಹ :
ಪ್ರಕೃತಿ ವಿಕೋಪದಿಂದ ಉಂಟಾಗಿರುವ ವಾಸ್ತವ್ಯದ ನಷ್ಟದ ಪರಿಣಾಮವು ತೀವ್ರಗತಿಯಲ್ಲಿ ಜರುಗಬೇಕಾಗಿದ್ದು, ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯೂ ತೀವ್ರ ಗತಿಯಲ್ಲಿ ಕಾರ್ಯ ನಿರ್ವಹಿಸಿದಾಗಿಯೂ ಇಂದಿನವರೆಗೆ ನಷ್ಟದ ಆರ್ಥಿಕ ಸಹಾಯಧನ ಕೇವಲ ಶೇ. 50 ರಷ್ಟು ಸಂತ್ರಸ್ಥರಿಗೆ ತಲುಪಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

error: