May 3, 2024

Bhavana Tv

Its Your Channel

12ಕ್ಕೆ ಮುಂಡಗೇಸರದಲ್ಲಿ ‘ಕುದಿವ ಕೆಂಡದ ಕಣ್ಣು’

ಶಿರಸಿ: ಅಂಬೆಯೊಳಗಣ ಕುದಿವ ಕೆಂಡದ ಕಣ್ಣು ಎಂಬ ವಿಶಿಷ್ಟ, ವಿಶೇಷ ರಂಗ ಪ್ರಯೋಗ ತಾಲೂಕಿನ ಮುಂಡಿಗೇಸರ ದೇವಸ್ಥಾನದಲ್ಲಿ ಅ.12ರ ಸಂಜೆ 5.05ರಿಂದ ನಡೆಯಲಿದೆ.
ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಪ್ರಸಿದ್ಧ ಕಲಾವಿದರಿಂದ ಅಂಬೆ ಕಥೆ ಆಧರಿತ ತಾಳಮದ್ದಲೆ ಹಾಗೂ ಮಂಗಳೂರಿನ ತಂಡದಿAದ ನಾಟಕ ಪ್ರದರ್ಶನ ಆಗಲಿದೆ.
ಅಂಬಾ ಶಪಥ ತಾಳಮದ್ದಲೆಯ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಪಾಲ್ಗೊಳ್ಳಲಿದ್ದಾರೆ.
ಭೀಷ್ಮನಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಅಂಬೆಯಾಗಿ ಮೋಹನ ಭಾಸ್ಕರ ಹೆಗಡೆ, ಪರಶುರಾಮನಾಗಿ ಎಂ.ಎನ್.ಹೆಗಡೆ ಹಳವಳ್ಳಿ ಒಂದುವರೆ ತಾಸಿನಲ್ಲಿ ಈ ಕಥಾನಕ ಪ್ರಸ್ತುತಗೊಳಿಸಲಿದ್ದಾರೆ.
ಬಳಿಕ ಮಂಗಳೂರಿನ ನಂದಗೋಕುಲ ತಂಡದ ಶ್ವೇತಾ ಅರೆಹೊಳೆ ಅವರಿಂದ ‘ಗೆಲ್ಲಿಸಬೇಕು ಅವಳ’ ನಾಟಕ ಒಂದು ತಾಸಿನ ಅವಧಿಯಲ್ಲಿ ಪ್ರದರ್ಶನ ಆಗಲಿದೆ. ಕಥೆಯನ್ನು ಸುಧಾ ಆಡುಕಳ ರಚಿಸಿದ್ದು, ರಂಗ ವಿನ್ಯಾಸ, ನಿರ್ದೇಶನವನ್ನು ರೋಹಿತ್ ಬೈಕಾಡಿ ನೀಡಿದ್ದಾರೆ. ಎರಡು ಪ್ರತ್ಯೇಕ ರಂಗ ಪ್ರಯೋಗಗಳು ಒಂದೇ ವಿಷಯವನ್ನು ಒಂದೇ ವೇದಿಕೆಯಲ್ಲಿ ವಿಭಿನ್ನ ದೃಷ್ಟಿಯಲ್ಲಿ ಪ್ರದರ್ಶನಕ್ಕೆ ಸಂಯೋಜಿಸಿದ್ದು ವಿಶೇಷವಾಗಿದೆ. ಈ ಪ್ರದರ್ಶನಗಳು ಸಂಪೂರ್ಣ ಉಚಿತವಾಗಿದ್ದು ಕಲಾಸಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಮನವಿ ಮಾಡಿದ್ದಾರೆ

error: