May 2, 2024

Bhavana Tv

Its Your Channel

ಉಸ್ತುವಾರಿ ಸಚಿವರ ಭೇಟಿಯಾದ ಮೀನುಗಾರ ಮುಖಂಡರು : ಮುಖ್ಯ ಮಂತ್ರಿಯೊAದಿಗೆ ಚರ್ಚೆ ಮಾಡುತ್ತೇನೆ ಎಂದ ಸಚಿವ ಶಿವರಾಮ ಹೆಬ್ಬಾರ.

ಹೊನ್ನಾವರ ; ತಾಲೂಕಿನ ಕಾಸರಕೋಡಿನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರಿನ ಕಾಮಗಾರಿಗೆ ಸಂಬAಧ ಪಟ್ಟಂತೆ ಜಿಲ್ಲೆಯ ಮೀನುಗಾರ ಮುಂಖAಡರು ರವಿವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರವರಿಗೆ ಮೀನುಗಾರರ ಸಮಸ್ಯೆಗಳ ಕುರಿತು ತಮ್ಮ ಅಳಲನ್ನು ತೊಡಿಕೊಂಡರು.


ಸಭೆಯಲ್ಲಿ ಮೀನುಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ಮೀನುಗಾರರ ಮುಖಂಡ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಕೋಚರೆಕರರವರು ಮಾತನಾಡಿ ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡುವುದು ಬೇಡವೆ ಬೇಡ, ಈ ಬಂದರಿನಿAದ ಮೀನುಗಾರರ ಬದಕು ಬೀದಿಗೆ ಬರುತ್ತದೆ. ವಾಸ್ತವ್ಯ ಇದ್ದ ಮೀನುಗಾರರ ಕುಟುಂಬದವರು ಮನೆ ಬಿಡುವ ಪರಿಸ್ಥಿತಿ ಬರುತ್ತದೆ. ನಮ್ಮ ಸಾಂಪ್ರದಾಯಕ ಮೀನುಗಾರಿಕೆಗೂ ತೊಂದರೆಯಾಗುತ್ತದೆ. ಮೀನುಗಾರಿಕೆಯನ್ನೇ ನಂಬಿ ಬದುಕುವವರು ನಾವು ನಮಗೆ ಬದುಕಲು ಬಿಡಿ ಎಂದು ಮನವಿ ಮಾಡಿದರು. ವಾಣಿಜ್ಯ ಬಂದರು ನಿರ್ಮಾಣವಾದ ಮೇಲೆ ಅಲ್ಲಿ ಆಗ ಬಹುದಾದ ಸಾಧಕ ಬಾದಕದ ಬಗ್ಗೆ ತಿಳಿಸಿ ಹೇಳಿದರು. ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಬೇಡವೇ ಬೇಡ ಎಂದು ವಿನಂತಿ ಮಾಡಿದರು.


ಕಳೆದ ೧೩ ವರ್ಷಗಳಿಂದ ಕಂಪನಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡರು ಇವರೆಗೂ ಯೋಜನೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಲೇ ತಿಳಿಯುತ್ತದೆ ಯಾವ ಬಗೆಯಲ್ಲಿ ಮೀನುಗಾರರಿಗೆ ಮಾರಕವಾಗಲಿದೆ ಎಂದು ಸಚಿವರಿಗೆ ಎಳೆ ಎಳೆಯಾಗಿ ವಿವರಿಸಿದರು.

ಈ ಬಗ್ಗೆ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರರವರು ಮಾತನಾಡಿ ಯೋಜನೆ ನಿಲ್ಲಿಸಲು ನಾವು ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಇದರ ಬಗ್ಗೆ ಮುಖ್ಯ ಮಂತ್ರಿಗಳೊAದಿಗೆ ಚರ್ಚೆ ಮಾಡುತ್ತೇನೆ . ಇದು ಕೇಂದ್ರ ಮತ್ತು ರಾಜ್ಯ ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ, ಈಗಲೇ ವಾಣಿಜ್ಯ ಬಂದರು ನಿರ್ಮಾಣದ ಮುಂಜೂರಾತಿಯಾಗಿ ಸರಿಸುಮಾರು ೧೨ ವರ್ಷ ಕಳೆದಿದೆ. ಈಗ ಬಂದ್ ಮಾಡುವುದು ಕೂಡ ಅಷ್ಟು ಸುಲಭವಲ್ಲ, ನೀವು ಸಹಕಾರ ಕೊಡಿ, ನಿಮ್ಮ ಬೇಡಿಕೆಯನ್ನು ಕೂಡ ಹೇಳಿ, ಮುಖ್ಯ ಮಂತ್ರಿ ಯವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

ಸರ್ಕಾರವನ್ನು ನಂಬಿ ಕಂಪನಿಗಳು ಬರುತ್ತವೆ. ನಾವು ಏಕಕಾಕಿ ಬಂದ್ ಮಾಡಿದರೆ ಬೇರೆ ಯಾವುದೇ ಕಂಪನಿಗಳಿಗೂ ಸರ್ಕಾರದ ಮೇಲೆ ನಂಬಿಕೆ ಇರುವುದಿಲ್ಲ. ಕಂಪನಿಗಳು ಮುಂದೆ ಬರದೇ ಇದ್ದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಯಾಗುತ್ತದೆ. ಬಂದರು ಕೆಲಸ ಇಷ್ಟು ಬೇಗ ಮುಗಿಯುವುದಿಲ್ಲ ತುಂಬಾ ಸಮಯ ಬೇಕಾಗುತ್ತದೆ. ನಾವು ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಬೇಡಿಕೆಯನ್ನು ಈಡೇರಿಸಿ ಕೊಡುವ ಪ್ರಯತ್ನ ಮಾಡುತ್ತೇನೆ, ಆದರೆ ಬಂದರು ನಿರ್ಮಾಣ ಯೋಜನೆಯನ್ನೇ ಕೈ ಬಿಡುವುದು ಕಷ್ಟ ಎಂದು ಮೀನುಗಾರರಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುನೀಲ್ ನಾಯ್ಕ,ಜಿಲ್ಲಾಧಿಕಾರಿ ಮುಲೈಮುಹಿಲನ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್, ಮೀನುಗಾರರ ಮುಖಂಡರಾದ ರಾಜೇಶ ತಾಂಡೇಲ, ಚಂದ್ರಕಾAತ ಕೋಚರೆಕರ, ಗಣಪತಿ ತಾಂಡೇಲ, ಹಮ್ಜಾ ಪಟೇಲ್, ವಿವನ್ ಫರ್ನಾಂಡೀಸ್, ರಾಜು ತಾಂಡೇಲ, ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ, ಹೊನ್ನಾವರ ಪಿ.ಐ ಶ್ರೀಧರ್, ಬಂದರಿನ ಕ್ಯಾಪ್ಟನ್ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ಕಂಪನಿಯ ಮುಖ್ಯಕಾರ್ಯನಿರ್ವಹಕ ಶ್ರೀ ಸೂರ್ಯಪ್ರಕಾಶ ಗುತ್ತಾ ಉಪಸ್ಥಿತರಿದ್ದರು.

 ಕಾಮಗಾರಿ ಸ್ಪಲ್ಪ ದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದು. ಇನ್ನೂ ಯಾವಗ ಆರಂಭಸುತ್ತಾರೊ ಎಂಬ ಆತಂಕ ಮೀನುಗಾರರಲ್ಲಿ ಉಂಟಾಗಿದೆ. ಲಾಕಡೌನ ಸಂದರ್ಭದಲ್ಲಿ ಸುರಿಯುವ ಮಳೆಯಲ್ಲು ಮೀನುಗಾರ ಸೆಡ್ ಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ ಕ್ರಮಕ್ಕೆ ಜಿಲ್ಲೆಯಾದ್ಯಂತ ಖಂಡನೆ ವ್ಯಕ್ತವಾಗಿದೆ.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: