May 6, 2024

Bhavana Tv

Its Your Channel

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ಎನ್ಎಸ್ಎಸ್ ಘಟಕ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ ; ಭಾರತ ದೇಶದ ಎರಡು ಪಿತಾಮಹರಾದ ಮಹಾತ್ಮ ಗಾಂಧಿ ಹಾಗು ಮಾಜಿ ಪ್ರಧಾನ ಮಂತ್ರಿ ದಿ. ಲಾಲ ಬಹದ್ದೂರ ಶಾಸ್ತ್ರಿಯವರ ಜಯಂತಿಯನ್ನು ವಿಜೃಂಭಣೆಯಿoದ ಆಚರಿಸಲಾಯಿತು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸಲ್ಲಿಸುವ ನಿಜವಾದ ಗೌರವವಾಗಿದೆಯೆಂದು ಯಲ್ಲಾಪುರ ತಾಲೂಕಿನ ಶಿಕ್ಷಣ ಸಮಿತಿಯ ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ ಹೇಳಿದರು.
ಯಲ್ಲಾಪುರ ತಾಲೂಕಿನ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜನ್ಮದಿನದ ಪ್ರಯುಕ್ತ ಎನ್ಎಸ್ಎಸ್ ಘಟಕ ಹಮ್ಮಿಕೊಂಡ ಕಾಲೇಜಿನ ಅವರಣ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂತಹಾ ಮಹನೀಯರುಗಳ ಜನ್ಮ ದಿನಗಳು ಕೇವಲ ಶುಭಾಶಯಗಳನ್ನು ತಿಳಿಸುವ ಅಥವಾ ಅವರ ವಿಚಾರಗಳ ಬಗ್ಗೆ ಭಾಷಣ ಮಾಡುವ ದಿನವಾಗಬಾರದು. ಯಾಕೆಂದರೆ ಒಬ್ಬ ವ್ಯಕ್ತಿಯ ಆಶಯಗಳು ಅಥವಾ ಅವರ ತತ್ವಗಳು ಶತಮಾನಗಳ ಕಾಲ ಆಚರಣೆಯಾದಾಗ ಮಾತ್ರ ಅದು ಪೀಳಿಗೆಯಿಂದ ಪೀಳಿಗೆಗೆ ಪಸರಿಸಿ ಆ ವ್ಯಕ್ತಿಯ ಹೆಸರುಳಿಸಬಲ್ಲದೇ ಹೊರತೂ ಅವರ ಹೆಸರು ಹೇಳುವುದರಿಂದ, ಭಾಷಣ ಮಾಡುವುದರಿಂದ ಅಲ್ಲ ಎಂದರು.ಗಾAಧಿ ಜಯಂತಿಯ ದಿನದಂದು ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಕಡ್ಡಾಯ ಅಲ್ಲದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ರಾಷ್ಟ್ರಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಕಾಲೇಜಿನ ಉಪನ್ಯಾಸಕರಾದ ಆನಂದ ಹೆಗಡೆ, ಅಶ್ವಿನಿ, ಶಹನಾಜ, ಮನೋಹರ ಶಾನಭಾಗ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರೇಷ್ಮಾ ಶೇಖ, ಉಪನ್ಯಾಸಕರು, ಬೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

error: